ಆರ್ಟಿಕಲ್ 370 ರದ್ದು ಸುಪ್ರೀಂಕೋರ್ಟ್ ಆದೇಶ ಏನು..? 'ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ'
ಸಂವಿಧಾನದ ವಿಧಿ 370 ರದ್ದು ನಿರ್ಧಾರ ಸರಿ ಎಂದ ಸುಪ್ರೀಂಕೋರ್ಟ್
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು 'ಸುಪ್ರೀಂ'
ಮೋದಿ ಸರ್ಕಾರದ ಆಗಸ್ಟ್ 5, 2019ರ ಆದೇಶ ಎತ್ತಿಹಿಡಿದ ಕೋರ್ಟ್
ಸಂವಿಧಾನದ ವಿಧಿ 370 ರದ್ದು ನಿರ್ಧಾರ ಸರಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜಮ್ಮು ಕಾಶ್ಮೀರಕ್ಕಿದ್ದ(Jammu and Kashmir) ವಿಶೇಷ ಸ್ಥಾನಮಾನ ರದ್ದು ನಿರ್ಧಾರವನ್ನೂ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಜಮ್ಮು ಕಾಶ್ಮೀರ ಭಾರತದ(India) ಅವಿಭಾಜ್ಯ ಅಂಗ ಎಂದು ಸುಪ್ರೀಂಕೋರ್ಟ್(Suprecourt) ಹೇಳಿದೆ. ಮೋದಿ ಸರ್ಕಾರದ ಆಗಸ್ಟ್ 5, 2019ರ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಿಂದ ಸರ್ವಸಮ್ಮತ ತೀರ್ಪು ಬಂದಿದೆ. ಜಮ್ಮು ಕಾಶ್ಮೀರ ವಿಭಜಿಸಿ ಲಡಾಕ್ ಪ್ರತ್ಯೇಕಿಸಿದ್ದನ್ನೂ ಈ ವೇಳೆ ಕೋರ್ಟ್ ಎತ್ತಿಹಿಡಿದಿದೆ. ಆರ್ಟಿಕಲ್ 370 ರದ್ದು(Abrogation of Article) ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಭಾರತದ ಸಾರ್ವಭೌಮತ್ವ ಒಪ್ಪಿದ ಮೇಲೆ ಪ್ರತ್ಯೇಕ ಸಾರ್ವಭೌಮತ್ವ ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜಮ್ಮು ಕಾಶ್ಮೀರ ವಿಭಜಿಸಿ ಲಡಾಕ್ ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ್ದು ಸರಿ. ಶೀಘ್ರದಲ್ಲೇ ಜಮ್ಮು ಕಾಶ್ಮೀರಕ್ಕಿದ್ದ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಿ. 2024ರ ಸೆಪ್ಟಂಬರ್ ಒಳಗೆ ಜಮ್ಮು ಕಾಶ್ಮೀರಕ್ಕೆ ಚುನಾವಣೆ ನಡೆಸಿ ಎಂದು ಕೋರ್ಟ್ ಹೇಳಿದೆ.
ಇದನ್ನೂ ವೀಕ್ಷಿಸಿ: ಕರಾವಳಿಯಲ್ಲಿ ಜನ್ನ ಕಂಬಳ ವೈಭವ: ಬಂಟ ಸಮುದಾಯದ ದೊಡ್ಡಮನೆಯಲ್ಲಿ ಸಂಭ್ರಮ