ಸಾಲು ಸಾಲು ಸರ್ವೆಗಳಲ್ಲೂ ಮೋದಿಗೇ ಗೆಲುವು! ನಿಜವಾಗಲಿದೆಯಾ ಮೋದಿ ‘400’ ನಿರೀಕ್ಷೆ?

ಸಾಲು ಸಾಲು ಸರ್ವೆಗಳಲ್ಲೂ ಮೋದಿಗೇ ಗೆಲುವು!
ಮತ್ತೊಂದು ಸರ್ವೆ ಹೇಳಿದೆ ಮತ್ತೊಮ್ಮೆ ಮೋದಿ!
ವಿಪಕ್ಷಗಳಿಗೆ ಶಾಕ್ ಕೊಟ್ಟಿತೇಕೆ ಹೊಸ ಸಮೀಕ್ಷೆ!

First Published Dec 25, 2023, 2:58 PM IST | Last Updated Dec 25, 2023, 2:58 PM IST

ಅದೊಂದು ಸರ್ವೇ ಅಚ್ಚರಿ ಅಂಕಿಅಂಶಗಳನ್ನ ತೆರೆದಿಟ್ಟಿದೆ. ಬಿಜೆಪಿ(BJP)- ಜೆಡಿಎಸ್(JDS) ಮೈತ್ರಿಗೆ ಅದೃಷ್ಟ ಒಲಿಯುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದೆ. ಸಿದ್ದರಾಮಯ್ಯ(Siddaramaiah) ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟಿದೆ. 2024ರ ಲೋಕಸಭಾ ಚುನಾವಣೆ(Loksabha), ಈ ಚುನಾವಣೆಯನ್ನ ಯಾರೊಬ್ಬರೂ ಈಗ ದೇಶದ ಮತ್ತೊಂದು ಎಲೆಕ್ಷನ್ ಅನ್ನೋ ಹಾಗೆ ನೋಡೋಕೆ ಸಾಧ್ಯವೇ ಇಲ್ಲ. ಇದು ಯುದ್ಧ.. ಮಹಾಯುದ್ಧ ಮೋದಿ ವರ್ಸಸ್ ವಿಪಕ್ಷಗಳ ಘನಘೋರ ಕದನ. ಲೋಕಸಮರಕ್ಕೆ ಅದಾಗಲೇ ಲೆಕ್ಕಾಚಾರುಗಳು, ರಣತಂತ್ರಗಳು, ಎಲ್ಲವೂ ಸಿದ್ಧವಾಗ್ತಾ ಇದಾವೆ. ಈ ಕಡೆ ಪ್ರಧಾನಿ ನರೇಂದ್ರ ಮೋದಿ, ತಮ್ಮ ಕೇಸರಿ ಪಾಳಯದ ಸೇನಾನಿಗಳಿಗೆ ವೋಟ್ ಶೇರ್ 50 ಪರ್ಸಂಟ್ ಹೆಚ್ಚಿಸಿಕೊಳ್ಳಬೇಕು. ಕನಿಷ್ಟ 350 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲಬೇಕು ಅಂತ ಹೇಳಿದ್ದಾರೆ. ಅದೂ ಅಲ್ಲದೆ, ಕಳೆದ ಸಲ 303 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಸಲ 400 ಕ್ಷೇತ್ರಗಳನ್ನ ಗೆಲ್ಲಲೇಬೇಕು ಅಂತ ಸನ್ನದ್ಧವಾಗಿದೆ. ಅದರಲ್ಲೂ ಪಂಚರಾಜ್ಯ ಚುನಾವಣೆಗಳ ಬಳಿಕ ಈ ಹೆಬ್ಬಯಕೆ ಮತ್ತೂ ಹೆಚ್ಚಾಗಿದೆ. ಕೇಸರಿ ಪಾಳಯ ಹೀಗೆ ಗೆದ್ದೇ ಗೆಲುವೆ ಎಂಬ ಗುಂಗಲ್ಲಿರುವಾಗ್ಲೇ, ಇನ್ನೊಂದು ಸಮೀಕ್ಷೆ ನಡೆದಿದೆ. ಆ ಸಮೀಕ್ಷೆ ಒಂದಷ್ಟು ಅಂಕಿ ಅಂಶಗಳನ್ನ ಬಯಲು ಮಾಡಿದೆ. ಅದರಿಂದ ಲೋಕಸಂಗ್ರಾಮದ ಮತ್ತೊಂದು ಮಜಲು ಬಯಲಾಗಿದೆ. ಎಬಿಪಿ ಸುದ್ದಿ ವಾಹಿನಿ ಮತ್ತು ಸಿ- ವೋಟರ್ ಸಮೀಕ್ಷಾ ಸಂಸ್ಥೆ ನಡೆಸಿದ ಸರ್ವೆ ಪ್ರಕಾರ,ಎಲ್ಲೆಲ್ಲಿ ಏನು ಫಲಿತಾಂಶ ಬರಬಹುದು ಅನ್ನೋದನ್ನ ನೋಡೋ ಮುಂಚೆ, ನಮ್ಮ ಕರ್ನಾಟಕದಿಂದಲೇ ಕತೆ ಶುರುಮಾಡೋಣ. ಈ ಸರ್ವೆ ಪ್ರಕಾರ ಕರ್ನಾಟಕದಲ್ಲಿ(Karnataka) ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮೇಲುಗೈ ಪಡೆಯಲಿದೆ. ಜೊತೆಗೆ ಗ್ರಾರಂಟಿ ಅಸ್ತ್ರ ಪ್ರಯೋಗಿಸಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿಸುವ ಕಾಂಗ್ರೆಸ್ ಪಕ್ಷ ಕೆಲವೇ ಸ್ಥಾನಗಳನ್ನ ಪಡೆಯಲಿದೆ.

ಇದನ್ನೂ ವೀಕ್ಷಿಸಿ: ಶಿವಾನಂದ ಪಾಟೀಲ್ ರೈತರಿಗೆ ಅಪಮಾನ ಮಾಡಿದ್ದು, ಕ್ಷಮೆ ಕೇಳಬೇಕು: ಬಿ.ವೈ. ವಿಜಯೇಂದ್ರ

Video Top Stories