Arvind Kejriwal: ‘ಇಂಡಿಯಾ’ ಕೂಟಕ್ಕೆ ಆಘಾತ: ಏಕಾಂಗಿ ಸ್ಪರ್ಧೆ ಘೋಷಣೆ ಮಾಡಿದ ಅರವಿಂದ್ ಕೇಜ್ರಿವಾಲ್ !

ಮೋದಿ ವಿರೋಧಿಗಳ ‘ಇಂಡಿಯಾ’ ಕೂಟಕ್ಕೆ ಮತ್ತೊಂದು ಆಘಾತ
ದೆಹಲಿ, ಪಂಜಾಬ್, ಚಂಡೀಘಡದಲ್ಲಿ ಸ್ವತಂತ್ರ ಸ್ಪರ್ಧೆ ಘೋಷಣೆ
ಟಿಎಂಸಿ, ಜೆಡಿಯು ಬಳಿಕ ಇಂಡಿಯಾ ಕೂಟಕ್ಕೆ ಕೈಕೊಟ್ಟ ಎಎಪಿ

First Published Feb 12, 2024, 2:16 PM IST | Last Updated Feb 12, 2024, 2:16 PM IST

ಪಂಜಾಬ್‌ನಲ್ಲಿ ಯಾವುದೇ ಮೈತ್ರಿ ಎಲ್ಲ ಎಂದಿದ್ದ ಆಮ್ ಆದ್ಮಿ ಪಾರ್ಟಿ ಇದೀಗ ದೆಹಲಿಯಲ್ಲೂ ಇಂಡಿಯಾ ಮೈತ್ರಿಗೆ(India Alliance) ಶಾಕ್ ನೀಡಿದೆ. ದೆಹಲಿಯ(Delhi) ಎಲ್ಲಾ 7 ಕ್ಷೇತ್ರದಲ್ಲಿ ಆಪ್ ಸ್ಪರ್ಧಿಸುವುದಾಗಿ ಅರವಿಂದ್ ಕೇಜ್ರಿವಾಲ್(Arvind Kejriwal) ಘೋಷಿಸಿದ್ದಾರೆ. ಇದೀಗ ಇಂಡಿಯಾ ಒಕ್ಕೂಟದ ಮೈತ್ರಿ ಕೆಲವೇ ರಾಜ್ಯಕ್ಕೆ ಕೆಲವೇ ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಎರಡು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಪಂಜಾಬ್‌ನಲ್ಲಿ 13, ಚಂಡೀಘಡದಲ್ಲಿ 1 ಕ್ಷೇತ್ರದಲ್ಲಿ ಎಎಪಿ ಸ್ಪರ್ಧೆ ಮಾಡಲಿದ್ದು, ಮುಂದಿನ 10- 15 ದಿನಗಳಲ್ಲಿ 14 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಿದೆ. ಎರಡು ವರ್ಷಗಳ ಹಿಂದಿನಂತೆ ನಿಮ್ಮ ಆರ್ಶೀವಾದ ನೀಡಿ. ಎಎಪಿ( Aam Aadmi Party) ಎಲ್ಲಾ 14 ಕ್ಷೇತ್ರಗಳಲ್ಲಿ ಗೆಲ್ಲುವಂತೆ ನೋಡಿಕೊಳ್ಳಿ. ನಮ್ಮ ಕೈ ಬಲಪಡಿಸಿದ್ಟು ನಾವು ಹೆಚ್ಚಿನ ಕೆಲಸ ಮಾಡಲು ಸಾಧ್ಯ ಎಂದು ಮತದಾರರಲ್ಲಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ: Karnataka Budget: ಸರ್ಕಾರದ ವಿರುದ್ಧ ‘ಮೈತ್ರಿ’ ಅಸ್ತ್ರ: ಗದ್ದಲದ ನಡುವೆಯೇ ರಾಜ್ಯ ಬಜೆಟ್‌ ಮಂಡನೆಗೆ ಸಜ್ಜು !

Video Top Stories