ಲೋಕಸಭಾ ಚನಾವಣೆಗೆ ಸೀಟು ಹಂಚಿಕೆ ಕಸರತ್ತು, ಹೊಸ ಲೆಕ್ಕಾಚಾರದಲ್ಲಿ ಆಪ್-ಕಾಂಗ್ರೆಸ್!
ಗುಜರಾತ್, ಹರ್ಯಾಣ, ಗೋವಾ ಸೇರಿ ಕೆಲವೆಡೆ ಆಪ್-ಕಾಂಗ್ರೆಸ್ ಸೀಟು ಹಂಚಿಕೆ, ಆಂಧ್ರ ಪ್ರದೇಶದಲ್ಲಿ ನಾಯ್ಡು-ಪವನ್ ಕಲ್ಯಾಣ್ ದೋಸ್ತಿ, ಸಿಎಂ ಸಿದ್ದರಾಮಯ್ಯ ಗೃಹ ಶೃಂಗಾರಕ್ಕೆ 9 ಕೋಟಿ ಖರ್ಚು, ಬಿಜೆಪಿ ಆರೋಪ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ಇಲ್ಲಿದೆ.
ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಬಿಗಿಗೊಳ್ಳುತ್ತಿದೆ. ಇದೀಗ ದೆಹಲಿ, ಹರ್ಯಾಣ, ಗೋವಾ, ಗುಜರಾತ್ ಸೇರಿದಂತೆ ಕೆಲ ರಾಜ್ಯದಲ್ಲಿ ಆಪ್-ಕಾಂಗ್ರೆಸ್ ಮೈತ್ರಿ ಮೂಲಕ ಸೀಟು ಹಂಚಿಕೊಂಡಿದೆ. ಇಂಡಿಯಾ ಮೈತ್ರಿಯಿಂದ ಒಂದೊಂದೆ ಪಕ್ಷಗಳು ಹೊರನಡೆಯುತ್ತಿದೆ ಅನ್ನುವಷ್ಟರಲ್ಲೇ ಇದೀಗ ಮತ್ತೆ ಮೈತ್ರಿ ಗಟ್ಟಿಗೊಳ್ಳುತ್ತಿದೆ. ಆಪ್ ಹಾಗೂ ಕಾಂಗ್ರೆಸ್ ತನ್ನ ಮೈತ್ರಿ ಸೀಟು ಹಂಚಿಕ ಬಹುತೇಕ ಅಂತಿಮಗೊಳಿಸಿದೆ. ಇತ್ತ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಟಿಡಿಪಿ ಪಕ್ಷ ಹಾಗೂ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಮೈತ್ರಿ ಮಾಡಿಕೊಂಡಿದೆ. ಟಿಡಿಪಿ 151 ಸೀಟು ಹಾಗೂ ಜನಸೇನಾ 24 ಸೀಟು ಹಂಚಿಕೊಂಡಿದೆ.