Asianet Suvarna News Asianet Suvarna News

ಕಾಂಗ್ರೆಸ್‌ಗೆ "ಕೈ" ಬಿಜೆಪಿಗೆ "ಜೈ.." ಹೈಜಂಪ್ ಹಿಂದಿನ ಅಸಲಿಯತ್ತೇನು..?

ಬಿಜೆಪಿಗೆ ನೂರಾನೆ ಬಲ ತಂದು ಕೊಟ್ಟಿತು ಮೋದಿ ನಾಯಕತ್ವ..!
ಕಾಂಗ್ರೆಸ್‌ನ ಬುಡವನ್ನೇ ಅಲುಗಾಡಿಸಿತು ಮೋದಿ ಗಜಕೇಸರಿ ಶಕ್ತಿ..!
"ಕೈ" ಬಿಟ್ಟು "ಕಮಲ" ಹಿಡಿದರು 9 ಮಾಜಿ ಮುಖ್ಯಮಂತ್ರಿಗಳು..!

2014.. ಮೇ 26.. ನರೇಂದ್ರ ಮೋದಿ(Narendra MOdi) ಮೊದಲ ಬಾರಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ. ಆ ಕ್ಷಣ ದೇಶದಲ್ಲಿ ಎರಡು ಘಟನೆಗಳಿಗೆ ಮುನ್ನುಡಿ ಬರೆದಿತ್ತು. ಭಾರತದ(India) ರಾಜಕಾರಣದ ದಿಕ್ಕನ್ನೇ ಬದಲಿಸಿದ್ದ ಮಹಾ ಮುನ್ನುಡಿ, ಜಗತ್ತಿನ ಅತ್ಯಂತ ಹಳೆಯ ರಾಜಕೀಯ ಪಕ್ಷದ ಅಧಃಪತನಕ್ಕೆ ಬರೆದಿದ್ದ ಮುನ್ನುಡಿ. ಆ ಮುನ್ನುಡಿಗೆ ಕಾರಣವಾಗಿದ್ದು ರಾಷ್ಟ್ರ ರಾಜಕಾರಣಕ್ಕೆ ನರೇಂದ್ರ ದಾಮೋದರದಾಸ್ ಮೋದಿ ಅನ್ನೋ ಪವರ್'ಫುಲ್ ನಾಯಕನ ಧಾಮ್ ಧೂಮ್ ಎಂಟ್ರಿ. ರಾಜಕೀಯದಲ್ಲಿ ಪಕ್ಷಾಂತರ ಅನ್ನೋದು ಹೊಸತೇನಲ್ಲ. ರಾಜಕಾರಣಿಗಳು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯೋದು, ಪಕ್ಷನಿಷ್ಠೆ ಬದಲಿಸೋದು. ಇದಕ್ಕೆ ದೊಡ್ಡ ಚರಿತ್ರೆಯೇ ಇದೆ. ಆದ್ರೆ ಕಳೆದ 10 ವರ್ಷಗಳಲ್ಲಿ ನಡೆದಂಥಾ ಮಹಾವಲಸೆ ಮಾತ್ರ ತುಂಬಾನೇ ಇಂಟ್ರೆಸ್ಟಿಂಗ್. ಯಾಕಂದ್ರೆ 2014ರಿಂದ 2024ರವರೆಗೆ ಕಾಂಗ್ರೆಸ್'ನಿಂದ ಬಿಜೆಪಿಗೆ(BJP) ಜಿಗಿದಿರೋರು ಸಾಮಾನ್ಯರಲ್ಲ. ಒಂದೊಂದು ರಾಜ್ಯಗಳಲ್ಲಿ ಹತ್ತಾರು ವರ್ಷಗಳ ಕಾಲ ದರ್ಬಾರ್ ನಡೆಸಿರೋರು.. ಆ ರಾಜ್ಯಗಳಲ್ಲಿ ಕಾಂಗ್ರೆಸ್(Congress) ಪಕ್ಷದ ಮಹಾ ಸೇನಾನಿಗಳಾಗಿದ್ದವರು. ಅಂದ್ರೆ ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್'ನ 9 ಮಂದಿ ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಆ ಸಾಲಿಗೆ 10ನೆಯವರಾಗಿ ಸೇರಲು ರೆಡಿಯಾಗಿ ನಿಂತಿದ್ದಾರೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್.

ಇದನ್ನೂ ವೀಕ್ಷಿಸಿ:  Mamata Banerjee: ಹಿಂದೂ ಮಹಿಳೆಯರೇ ಈತನ ಟಾರ್ಗೆಟ್..! ರಾಜಾರೋಷವಾಗಿ ಕಿಡ್ನಾಪ್..ನಿರಂತರ ಅತ್ಯಾಚಾರ..!

Video Top Stories