ಬದಲಾದ ವಿನ್ಯಾಸದ ರಾಜಪಥದಲ್ಲಿ 73ನೇ ಗಣರಾಜ್ಯೋತ್ಸವದ ಅದ್ಧೂರಿ ಸಂಭ್ರಮ
ದೆಹಲಿಯ ರಾಜ್ ಪಥ್‌ನಲ್ಲಿ ಗಣ ರಾಜ್ಯೋತ್ಸವದ ಪೆರೇಡ್ ಅನ್ನು ಕಣ್ಥುಂಬಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆಯ ಕ್ಷಣ. ಪ್ರತಿಯೊಂದು ಸ್ತಬ್ಧ ಚಿತ್ರಗಳು ಸಾಗುವಾಗ, ವೈಮಾನಿಕ ಪ್ರದರ್ಶನ ನೋಡುವಾಗ, ನಮ್ಮ ಭಾರತೀಯ ಸೈನಿಕರ ಶೌರ್ಯ ಪ್ರದರ್ಶನಗೊಳ್ಳುವಾಗ, ಭಾರತೀಯ ಸೇನೆಯ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸುವಾಗ ದೇಶ ಭಕ್ತರಿಗೆ ರೋಮಾಂಚನ ಎನಿಸುವುದು ಸುಳ್ಳಲ್ಲ. ಅಂಥದ್ರಲ್ಲಿ ಈ ವರ್ಷದ ಸಂಭ್ರಮ ಮತ್ತಷ್ಟು ವಿಭಿನ್ನತೆಯಿಂದ ಕೂಡಿದ್ದವು. ಏನಿದ್ದವು ಅಂಥ ವಿಶೇಷಗಳು?
ಕೊರೋನಾ (Covid19) ಕಾರಣದಿಂದ ಜನರ ಭಾಗವಹಿಸುವಿಕೆಗೆ ಮಿತಿ ವಿಧಿಸಿದ್ದರೂ, ರಾಷ್ಟ್ರ ರಾಜಧಾನಿಯ ರಾಜಪಥದಲ್ಲಿ ಭಾರತದ 73ನೇ ಗಣರಾಜ್ಯೋತ್ಸವದ (Republic Day) ಆಚರಣೆ ಬುಧವಾರ ಅದ್ಧೂರಿಯಾಗಿ ನಡೆಯಿತು. ಸೆಂಟ್ರಲ್ ವಿಸ್ತಾ ಯೋಜನೆಯಡಿ ನವೀಕರಣಗೊಳಿಸಲಾದ ರಾಜಪಥದಲ್ಲಿ ಈ ಸಲದ ಗಣತಂತ್ರ ದಿನದ ಪರೇಡ್ ವಿಭಿನ್ನವೂ, ವೈಭವೋಪೇತವೂ ಆಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ಯುದ್ಧ ವಿಮಾನಗಳನ್ನು ರಾಜಪಥದ ಮೇಲೆ ಹಾರಿಸಿದ್ದು ವಿಶೇಷವಾಗಿತ್ತು. ಕರ್ನಾಟಕದ ಕರಕುಶಲ ಕಲೆಗಳ ಸ್ತಬ್ಧಚಿತ್ರವೂ ಸೇರಿದಂತೆ ಅತ್ಯಾಕರ್ಷಕ 12 ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾಜಪಥದಲ್ಲಿ ಸಾಗುವ ಮೂಲಕ ಪ್ಷೇಕ್ಷಕರ ಮನಸೂರೆಗೊಂಡವು. ಕಡಿಮೆ ಜನರ ಸಮ್ಮುಖದಲ್ಲಿ ನಡೆದ ಪೆರೇಡ್‌ನಲ್ಲಿ ಭಾರತೀಯ ಸೇನೆಯ ಶೌರ್ಯ ಮತ್ತು ದೇಶದ ವೈವಿಧ್ಯತೆ ಪ್ರದರ್ಶಿತಗೊಂಡಿದ್ದು ಹೇಗೆ? ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ, ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarthi Suibele) ಮತ್ತು ಏರ್ ಮಾರ್ಷಲ್ ಮುರಳೀಧರ್ ಏನು ಹೇಳುತ್ತಾರೆ. ಪ್ರತಿಯೊಬ್ಬ ಭಾರತೀಯನ (Indian) ಎದೆಯುಬ್ಬುವಂತೆ ಮಾಡಿದ ಗಣರಾಜ್ಯತ್ಸವದ ತುಣುಕುಗಳಿವು.
ಗಣರಾಜ್ಯತ್ಸವದಲ್ಲಿ ವೈಮಾನಿಕ ಪ್ರದರ್ಶನಗೊಂಡಿದ್ದು ಹೇಗೆ?