Asianet Suvarna News Asianet Suvarna News

Republic Day: 75 ವಿಮಾನಗಳಿಂದ ಮನಮೋಹಕ ಪ್ರದರ್ಶನ, ಆಗಸದಿಂದಲೇ ನೇರ ಪ್ರಸಾರ

ಸ್ವಾತಂತ್ರ್ಯ ಲಭಿಸಿ 75 ವರ್ಷ ತುಂಬುತ್ತಿದ್ದು, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಬಾನಿನಲ್ಲಿ 75 ವಿಮಾನಗಳ ನಡೆಸಿದ ವಿವಿಧ ವಿನ್ಯಾಸಗಳು ಪ್ರಮುಖ ಆಕರ್ಷಣೆಯಾಗಿದ್ದವು. ವಿಮಾನಗಳು ಧ್ವಜ್ ವಿನ್ಯಾಸ್ ಮಾಡಿ, ತಮ್ಮ ಶಕ್ತಿಯನ್ನು ಹೇಗೆ ಪ್ರದರ್ಶಿಸಿದ್ದವು. 

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ವೈಮಾನಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಬಾನಿನಲ್ಲಿಯೇ 75 ವಿಮಾನಗಳು ನಡೆಸಿದ ವಿವಿಧ ವಿನ್ಯಾಸಗಳು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಿನಲ್ಲಿ ವಿಮಾನಗಳು ಭಾರತ ಸೇನೆಯ ಶಕ್ತಿಯನ್ನು ಪ್ರದರ್ಶಿಸಿದವು. 4 ಎಂಐ-17 ವಿಮಾನಗಳು ‘ಧ್ವಜ್‌’ ವಿನ್ಯಾಸ ಮಾಡುವುದರೊಂದಿಗೆ ಮೈಮಾನಿಕ ಪ್ರದರ್ಶನ ಆರಂಭವಾಯಿತು. ನಂತರ 4 ಸುಧಾರಿತ ಹಗುರ ಯುದ್ಧ ಹೆಲಿಕಾಪ್ಟರ್‌ಗಳು ‘ರುದ್ರ’ ಮತ್ತು 5 ಹೆಲಿಕಾಪ್ಟರ್‌ಗಳು ‘ರಾಹತ್‌’ ವಿನ್ಯಾಸವನ್ನು ರೂಪಿಸಿದವು. 1971 ತಂಗೈಲ್‌ ಏರ್‌ಡ್ರಾಪ್‌ ಆಪರೇಶನ್‌ಗೆ ಗೌರವ ಸಲ್ಲಿಸಲು 1 ಡಕೋಟ ಮತ್ತು 2 ಡ್ರೋನಿಯರ್‌ ವಿಮಾನಗಳು ಸೇರಿ ‘ವಿಕ್‌’ ವಿನ್ಯಾಸವನ್ನು ರೂಪಿಸದವು. ನಂತರ 5 ರಫೇಲ್‌ ವಿಮಾನಗಳು ‘ವಿನಾಶ್‌’, ‘ಬಾಜ್‌’ ಮತ್ತು ‘ತ್ರಿಶೂಲ’ ವಿನ್ಯಾಸಗಳನ್ನು ರೂಪಿಸಿದವು. 17 ಜಗ್ವಾರ್‌ ವಿಮಾನಗಳು ‘ಅಮೃತ’ ವಿನ್ಯಾಸ ರೂಪಿಸುವುದರೊಂದಿಗೆ ವೈಮಾನಿಕ ಪ್ರದರ್ಶನ ಮುಕ್ತಾಯವಾಯಿತು. ಅಷ್ಟಕ್ಕೂ ಈ ವಿಮಾನಗಳು ಎಲ್ಲಿಂದ ಟೇಕ್ ಆಫ್ ಆಗುತ್ತವೆ? ಬೇರೆ ಬೇರೆ ವಿಮಾನ ನಿಲ್ದಾಣಗಳಿಂದ ಟೇಕ್ ಆಫ್ ಆದರೂ ರಜ್‌ಪಥ್ ಮೇಲೆ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದು ಹೇಗೆ. ಈ ಗಣ ರಾಜ್ಯೋತ್ಸವದಲ್ಲಿ ಭಾರತದ ವೈವಿಧ್ಯತೆ ಮತ್ತು ಆರ್ಥಿಕ ಶಕ್ತಿ ಪ್ರದರ್ಶಿತಗೊಂಡಿದ್ದು ಹೇಗೆ ಹೇಳುತ್ತಾರೆ ಕೇಳಿ ಏರ್ ಮಾರ್ಷಲ್ ಮುರಳೀಯವರು. 

Video Top Stories