Asianet Suvarna News Asianet Suvarna News

ಮುಂದುವರೆದ ಆಪರೇಷನ್ ಗಂಗಾ, ಉಕ್ರೇನ್‌ನಲ್ಲಿನ ಭೀಕರ ಪರಿಸ್ಥಿತಿ ಬಿಚ್ಚಿಟ್ಟ ಕನ್ನಡತಿ

ಸಿಡಿಯುತ್ತಿರುವ ಗುಂಡುಗಳ ಮಧ್ಯೆ ಆಪರೇಷನ್ ಗಂಗಾ ಮೂಲಕ ರಕ್ಷಣೆ ಮಾಡಲಾಗಿದೆ. 8 ದಿನಗಳಲ್ಲಿ 89 ವಿಮಾನಗಳ ಮೂಲಕ ಕಾರ್ಯಚರಣೆ ನಡೆಸಲಾಗಿದೆ. ಇನ್ನು ಉಕ್ರೇನ್‌ನ ಖಾರ್ಕಿವ್‌ನಲ್ಲಿನ ಪರಿಸ್ಥಿತಿ ಬಗ್ಗೆ ಕರ್ನಾಟಕ ವಿದ್ಯಾರ್ಥಿ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, (ಮಾ.08): ರಷ್ಯಾ ಹಾಗೂ ಉಕ್ರೇನ್ ಯುದ್ಧಕ್ಕೆ ಇಂದು (ಮಾ.08) ಹದಿಮೂರನೇ ದಿನವಾಗಿದ್ದು, ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದುವರೆಸಿದೆ.

ಉಕ್ರೇನ್ ಯುದ್ಧ ಭೂಮಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್, ಅಲ್ಲಿಂದಲೇ ನೇರ, ದಿಟ್ಟ, ನಿರಂತರ ಸುದ್ದಿ

ಉಕ್ರೇನ್‌ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಬಾಂಬ್‌, ಕ್ಷಿಪಣಿ ಹಾಗೂ ಶೆಲ್‌ಗಳ ಮಳೆಗರೆಯತೊಡಗಿದೆ. ಇನ್ನು  ಭಾರತೀಯರು ಹಲವರು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಆದ್ರೆ, ಈವರೆಗೆ 17,500 ಜನರನ್ನು ರಕ್ಷಿಸಲಾಗಿದೆ.  ಸಿಡಿಯುತ್ತಿರುವ ಗುಂಡುಗಳ ಮಧ್ಯೆ ಆಪರೇಷನ್ ಗಂಗಾ ಮೂಲಕ ರಕ್ಷಣೆ ಮಾಡಲಾಗಿದೆ. 8 ದಿನಗಳಲ್ಲಿ 89 ವಿಮಾನಗಳ ಮೂಲಕ ಕಾರ್ಯಚರಣೆ ನಡೆಸಲಾಗಿದೆ. ಇನ್ನು ಉಕ್ರೇನ್‌ನ ಖಾರ್ಕಿವ್‌ನಲ್ಲಿನ ಪರಿಸ್ಥಿತಿ ಬಗ್ಗೆ ಕರ್ನಾಟಕ ವಿದ್ಯಾರ್ಥಿ ಬಿಚ್ಚಿಟ್ಟಿದ್ದಾರೆ