ಉಕ್ರೇನ್ ಯುದ್ಧ ಭೂಮಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್, ಅಲ್ಲಿಂದಲೇ ನೇರ, ದಿಟ್ಟ, ನಿರಂತರ ಸುದ್ದಿ

ಉಕ್ರೇನ್‌ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಬಾಂಬ್‌, ಕ್ಷಿಪಣಿ ಹಾಗೂ ಶೆಲ್‌ಗಳ ಮಳೆಗರೆಯತೊಡಗಿದೆ. ಅಂತಿಮ ಹಾಗೂ ನಿರ್ಣಾಯಕ ದಾಳಿಗೆ ಸಿದ್ಧವಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಉಕ್ರೇನ್‌ನ ರಾಜಧಾನಿ ಕೀವ್‌ ನಗರವನ್ನು ವಶಪಡಿಸಿಕೊಳ್ಳಲು ಸನ್ನದ್ಧವಾಗಿದೆ. ಇದರಿಂದ ಅಲ್ಲಿನ ಜನರು ಉಕ್ರೇನ್‌ ಬಿಟ್ಟು ತೊರೆಯುತ್ತಿದ್ದಾರೆ. ಹೀಗಿರುವಾಗ ಪ್ರಶಾಂತ್ ರಘುವಂಶಿ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ ಉಕ್ರೇನ್‌ ಯುದ್ಧ ಭೂಮಿಗೆ ತೆರಳಿದ್ದು, ಅಲ್ಲಿನ ಪರಿಸ್ಥಿಯನ್ನು ವರದಿ ಮಾಡುತ್ತಿದೆ.

Share this Video
  • FB
  • Linkdin
  • Whatsapp

ಕೀವ್‌ (ಮಾ. 08): ರಷ್ಯಾ ಹಾಗೂ ಉಕ್ರೇನ್‌ ನಡುವಿನ ಸಮರ ಮುಂದುವರೆದಿದೆ.ಕಳೆದ 13 ದಿನಗಳಿಂದ ಉಕ್ರೇನ್‌ ಮೇಲೆ ರಷ್ಯಾ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಸಮುದ್ರ, ನೆಲ ಹಾಗೂ ವಾಯು- ಹೀಗೆ ಮೂರೂ ಮಾರ್ಗಗಳಿಂದ ದಾಳಿ ನಡೆಸುತ್ತಿದೆ.

ರಷ್ಯಾದ ಮೇಲೆ ಯುದ್ಧ ಗೆಲ್ಲುವವರೆಗೂ ಕೀವ್ ಬಿಟ್ಟು ಕದಲುವುದಿಲ್ಲ, ಉಕ್ರೇನ್ ಅಧ್ಯಕ್ಷ ವಿಡಿಯೋ ಸಾಕ್ಷ್ಯ

ಪಶ್ಚಿಮ ಉಕ್ರೇನ್‌ ಹೊರತುಪಡಿಸಿ ಮಿಕ್ಕೆಲ್ಲ ಭಾಗಗಳಲ್ಲಿ ಸೇನಾ ಪ್ರದೇಶ ಮತ್ತು ಜನವಸತಿ ಪ್ರದೇಶಗಳ ಮೇಲೆ ಬಾಂಬ್‌, ಕ್ಷಿಪಣಿ ಹಾಗೂ ಶೆಲ್‌ಗಳ ಮಳೆಗರೆಯತೊಡಗಿದೆ. ಅಂತಿಮ ಹಾಗೂ ನಿರ್ಣಾಯಕ ದಾಳಿಗೆ ಸಿದ್ಧವಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಉಕ್ರೇನ್‌ನ ರಾಜಧಾನಿ ಕೀವ್‌ ನಗರವನ್ನು ವಶಪಡಿಸಿಕೊಳ್ಳಲು ಸನ್ನದ್ಧವಾಗಿದೆ. ಇದರಿಂದ ಅಲ್ಲಿನ ಜನರು ಉಕ್ರೇನ್‌ ಬಿಟ್ಟು ತೊರೆಯುತ್ತಿದ್ದಾರೆ. ಹೀಗಿರುವಾಗ ಪ್ರಶಾಂತ್ ರಘುವಂಶಿ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ ಉಕ್ರೇನ್‌ ಯುದ್ಧ ಭೂಮಿಗೆ ತೆರಳಿದ್ದು, ಅಲ್ಲಿನ ಪರಿಸ್ಥಿಯನ್ನು ವರದಿ ಮಾಡುತ್ತಿದೆ.

ಈ ಯುದ್ಧ ಭೂಮಿಯಲ್ಲಿ ದಕ್ಷಿಣ ಭಾರತದ ಮೊಟ್ಟ ಮೊದಲ ನ್ಯೂಸ್ ಚಾನಲ್. ಭಾರತದ ರಕ್ಷಣಾ ತಂಡದೊಂದಿಗೆ ನೇರ, ದಿಟ್ಟ, ನಿರಂತರ ವರದಿ. ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯುದ್ಧಭೂಮಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್. 

Related Video