Asianet Suvarna News Asianet Suvarna News

ಹಿಮಕುಸಿತಕ್ಕೆ 32 ಬಲಿ, ಇನ್ನೂ 197 ಜನರು ನಾಪತ್ತೆ!

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಕುಸಿತದಲ್ಲಿ ನಾಪತ್ತೆಯಾಗಿದ್ದ ಇನ್ನೂ 5 ಜನರ ಶವ ಮಂಗಳವಾರ ಪತ್ತೆಯಾಗಿದೆ. ಇದರೊಂದಿಗೆ ದುರ್ಘಟನೆಯಲ್ಲಿ ಬಲಿಯಾದವರ ಸಂಖ್ಯೆ 32ಕ್ಕೆ ಏರಿದೆ. ಈ ನಡುವೆ ತಪೋವನ ಜಲವಿದ್ಯುತ್‌ ಯೋಜನೆಯ ಸುರಂಗದಲ್ಲಿ ಸಿಕ್ಕಿ ಬಿದ್ದ 32 ಜನರ ರಕ್ಷಣೆಗೆ ಭಾರೀ ಹರಸಾಹಸ ಮುಂದುವರೆದಿದೆ. ಮತ್ತೊಂದೆಡೆ 1975 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಡೆಹ್ರಾಡೂನ್(ಫೆ.10): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಕುಸಿತದಲ್ಲಿ ನಾಪತ್ತೆಯಾಗಿದ್ದ ಇನ್ನೂ 5 ಜನರ ಶವ ಮಂಗಳವಾರ ಪತ್ತೆಯಾಗಿದೆ. ಇದರೊಂದಿಗೆ ದುರ್ಘಟನೆಯಲ್ಲಿ ಬಲಿಯಾದವರ ಸಂಖ್ಯೆ 32ಕ್ಕೆ ಏರಿದೆ. ಈ ನಡುವೆ ತಪೋವನ ಜಲವಿದ್ಯುತ್‌ ಯೋಜನೆಯ ಸುರಂಗದಲ್ಲಿ ಸಿಕ್ಕಿ ಬಿದ್ದ 32 ಜನರ ರಕ್ಷಣೆಗೆ ಭಾರೀ ಹರಸಾಹಸ ಮುಂದುವರೆದಿದೆ. ಮತ್ತೊಂದೆಡೆ 1975 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಹಿಮಸ್ಫೋಟದ ನಂತರ ಉತ್ತರಾಖಂಡ ಹೇಗಿದೆ? ಲೈವ್ ರಿಪೋರ್ಟ್

ಘಟನಾ ಸ್ಥಳದಲ್ಲಿ ಐಟಿಬಿಪಿ, ಎನ್‌ಡಿಆರ್‌ಎಫ್‌, ಸೇನೆ, ರಾಜ್ಯ ವಿಪತ್ತು ನಿರ್ವಹಣೆ ಪಡೆಯ ಸಾವಿರಾರು ಸಿಬ್ಬಂದಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆದರೆ ಸ್ಥಳದಲ್ಲಿ, ಭಾರೀ ಕೆಸರು, ಹೂಳು, ತಾಪಮಾನ ಶೂನ್ಯದ ಆಸುಪಾಸಿಗೆ ಬಂದಿರುವ ಕಾರಣ, ಇದೀಗ ಸಿಬ್ಬಂದಿಗಳನ್ನೇ ಭಾರೀ ಹವಾಮಾನ ವೈಪರೀತ್ಯದಿಂದ ರಕ್ಷಣೆ ಮಾಡಬೇಕಾದ ಪರಿಸ್ಥಿತಿಯೂ ಎದುರಾಗಿದೆ.

ಒಂದು ನೀರ್ಗಲ್ಲು ಸ್ಪೋಟಕ್ಕೆ ಹೀಗಾಯ್ತು, ಅಲ್ಲಿವೆ 8000 ನೀರ್ಗಲ್ಲುಗಳು!

ಇದೆಲ್ಲದರ ಹೊರತಾಗಿಯೂ ತಪೋವನ್‌- ವಿಷ್ಣುಗಢ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ 2.5 ಕಿ.ಮೀ ಉದ್ದದ ಸುರಂಗದಲ್ಲಿ ಸಿಕ್ಕಿಬಿದ್ದಿರುವ 32 ಜನರ ರಕ್ಷಣೆಗೆ ಭಾರೀ ಸಾಹಸ ನಡೆದಿದೆ. ಇದುವರೆಗೂ 30 ಜನರ ಜೊತೆಗೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ರಕ್ಷಣಾ ತಂಡ ತಿಳಿಸಿದೆ. ಮತ್ತೊಂದೆಡೆ ನಾಪತ್ತೆಯಾಗಿರುವ ಇತರೆ 197 ಜನರ ಪತ್ತೆ ಕಾರ್ಯವೂ ಮುಂದುವರೆದಿದೆ.

Video Top Stories