Asianet Suvarna News Asianet Suvarna News

News Hour: ಏರುತ್ತಲೇ ಇದೆ ಕೊರೋನಾ ದಿನಕ್ಕೆ 30 ಸಾವಿರ, ಲಾಕ್‌ಡೌನ್ ಇಲ್ಲವೇ ಇಲ್ಲ

* ಕರ್ನಾಟಕದಲ್ಲಿ ಕೊರೋನಾ ಏರಿಕೆ, 28 ಸಾವಿರ ಹೊಸ ಕೇಸ್
* ಪಾದಯಾತ್ರೆಗೆ ಭದ್ರತೆಗೆ ತೆರಳಿದ್ದ ಪೊಲೀಸ್ ಸಿಬ್ಬಂದಿಗೂ ಆತಂಕ
* ಕಠಿಣ ನಿಯಮಗಳು, ಲಾಕ್ ಡೌನ್ ಮಾತು ಇಲ್ಲ
* ಕಾವೇರುತ್ತಿರುವ ಪಂಚರಾಜ್ಯ ಚುನಾವಣೆ

ಬೆಂಗಳೂರು(ಜ. 15)  ಕೊರೋನಾ (Coronavirus) ಪ್ರಕರಣದಲ್ಲಿ ದಿನೇ ದಿನೇ (Karnataka) ಏರಿಕೆ ಆಗುತ್ತಿರುವ ಆತಂಕ ಇರುವಾಗಲೇ ನಾಡಿನಾದ್ಯಂತ ಶುಕ್ರವಾರ ಸಂಭ್ರಮದಿಂದ ಮಕರ ಸಂಕ್ರಾಂತಿ (Makara Samkranti) ಆಚರಿಸಲಾಗಿದೆ. ಕೊರೋನಾ ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲೂ ಈಗ ಸೋಂಕು ಏರಿಕೆ ಆಗುವ ಅಪಾಯ ಇದರಿಂದ ಕಾಣುತ್ತಿದೆ. ರಾಜ್ಯದಲ್ಲಿ ಕರೋನಾ ಮೂರನೇ ಅಲೆಯ ಆರ್ಭಟ ಜೋರಾಗಿದೆ. ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ಕರೋನಾ ಸ್ಪೋಟವಾಗಿದ್ದರೆ, ಪಾದಯಾತ್ರೆಯ ಡ್ಯೂಟಿಗೆ ಹೋಗಿದ್ದ ಪೊಲೀಸರಲ್ಲೂ (Karnataka Police) ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕ ಮೂಡಿಸಿದೆ. 

ಕೊರೊನಾ ಲಸಿಕೆ ಪಡೆಯದವರಿಗೆ ಒಮಿಕ್ರಾನ್ ಅಪಾಯಕಾರಿ WHO ಎಚ್ಚರಿಕೆ

ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದರಲ್ಲೂ ದೇಶದಲ್ಲೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶ ರಾಜ್ಯದಲ್ಲಿ ಚುನಾವಣಾ ಪೂರ್ವ ಪಕ್ಷಾಂತರ ಹೆಚ್ಚಾಗಿದೆ. ಇತ್ತ ಬಿಜೆಪಿ (BJP) ಬಿಟ್ಟ ಶಾಸಕರು ಅಖಿಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷವನ್ನು ಸೇರುತ್ತಿದ್ದು, ಉತ್ತರಪ್ರದೇಶದಲ್ಲಿ (Uttar Pradesh) ಈಗ ಯೋಗಿ ವರ್ಸಸ್‌ ಅಖಿಲೇಶ್ ಎಂಬಂತಾಗಿದೆ. ದಲಿತರ ಮನೆಯಲ್ಲಿ ಇಂದು ಭೋಜನ ಮಾಡಿದ ಸಿಎಂ ಯೋಗಿ ವಿರೋಧಿಗಳಿಗೆ ಈ ಮೂಲಕ ತಿರುಗೇಟು ನೀಡುತ್ತಿದ್ದಾರೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ 

 

Video Top Stories