
ಬಡವರಿಗೆ ಬೆಳಕು.. ಯುವಕರಿಗೆ ಶಕ್ತಿ.. ಅಭಿವೃದ್ಧಿ ಮಂತ್ರ! ಮೋದಿ ಆಡಳಿತದಲ್ಲಿ ಬಡವರ್ಗಕ್ಕೆ ಸಿಕ್ಕಿತಾ ಭರವಸೆ?
ನಮೋ ಕ್ರಾಂತಿ.. ಅಸಂಘಟಿತ ವರ್ಗಕ್ಕೆ ಆನೆ ಬಲ..! ಉದ್ಯಮದ ಕನಸು ನನಸಾಗಿಸುತ್ತಿವೆ ಕೇಂದ್ರದ ಯೋಜನೆಗಳು..! ಬಡತನ ನಿರ್ಮೂಲನೆ.. ಕೇಂದ್ರ ಸರ್ಕಾರದ ಕ್ರಾಂತಿಕಾರಿ ಹೆಜ್ಜೆಗಳು..! ಬಡವರ್ಗದ ಯುವ ಶಕ್ತಿಗೆ ಭರವಸೆಯಾದ ಮೋದಿ..!
ನಮೋ ಕ್ರಾಂತಿ.. ಅಸಂಘಟಿತ ವರ್ಗಕ್ಕೆ ಆನೆ ಬಲ..! ಉದ್ಯಮದ ಕನಸು ನನಸಾಗಿಸುತ್ತಿವೆ ಕೇಂದ್ರದ ಯೋಜನೆಗಳು..! ಬಡತನ ನಿರ್ಮೂಲನೆ.. ಕೇಂದ್ರ ಸರ್ಕಾರದ ಕ್ರಾಂತಿಕಾರಿ ಹೆಜ್ಜೆಗಳು..! ಬಡವರ್ಗದ ಯುವ ಶಕ್ತಿಗೆ ಭರವಸೆಯಾದ ಮೋದಿ..! ಸೂರು.. ನೀರು..ಸುಭದ್ರ ಬದುಕಿಗೆ ಭದ್ರ ಬುನಾದಿ..! ಸರ್ವರ ಏಳಿಗೆ.. ಸುವರ್ಣ ಘಳಿಗೆ.. ಯೋಜನೆಗಳ ಫಲ..! ಬಡವರಿಗೆ ಬೆಳಕು.. ಯುವಕರಿಗೆ ಶಕ್ತಿ.. ಅಭಿವೃದ್ಧಿ ಮಂತ್ರ..! ಇದುವೇ ಈ ಹೊತ್ತಿನ ವಿಶೇಷ.. ಅಭಿವೃದ್ಧಿ ಕ್ರಾಂತಿ.. ನಮೋ ನಾಂದಿ. ನರೇಂದ್ರ ಮೋದಿಯವರು ದೆಹಲಿ ಗದ್ದುಗೆಯೇರಿ 11 ವರ್ಷಗಳು ತುಂಬಿವೆ. ಈ 11 ವರ್ಷಗಳಲ್ಲಿ ದೇಶ ಬದಲಾಗಿದ್ಯಾ..? 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೊಟ್ಟಿದ್ದ ಆಶ್ವಾಸನೆಗಳನ್ನು ಮೋದಿ ಈಡೇರಿಸಿದ್ದಾರಾ..? ಕಳೆದ ಎರಡು ಲೋಕಸಭಾ ಚುನಾವಣೆಗಳೇ ಈ ಪ್ರಶ್ನೆಗೆ ಉತ್ತರ. ಪ್ರಧಾನಿಯಾದ್ಮೇಲೆ ಮೋದಿ ಒಂದಷ್ಟು ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟಿದ್ದಾರೆ.
ಅದು ಆರ್ಟಿಕಲ್ 370 ರದ್ದು ಮಾಡಿದ ನಿರ್ಧಾರ ಇರ್ಲಿ, ಭಯೋತ್ಪಾದನೆ ವಿರುದ್ಧದ ಹೋರಾಟವಿರ್ಲಿ, ದೇಶದ ಭದ್ರತೆಯ ವಿಚಾರ ಇರ್ಲಿ.. ದಿಲ್ಲಿಯಲ್ಲಿ ಜಾರಿಯಾದ ಯೋಜನೆಗಳು ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೆ ಸಿಗಬೇಕು ಅನ್ನೋ ಉದ್ದೇಶ ಇರ್ಲಿ.. ಎಲ್ಲದರಲ್ಲೂ ಇರೋ ಝೀರೋ ಟಾಲರೆನ್ಸ್ ಕಾರಣಕ್ಕೆ ಮೋದಿ ಸರ್ಕಾರ ದೇಶವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಹಿಂದಿನ ಭಾರತವಲ್ಲ, ಮೋದಿ ನೇತೃತ್ವದ ಹೊಸ ಭಾರತ, ಮುಟ್ಟಿದ್ರೆ ತಟ್ಟಿ ಬಿಡೋ ನವಭಾರತ ಅಂತ ಜನರೇ ಮಾತಾಡ್ತಾರೆ.. ಮೊನ್ನೆ ಮೊನ್ನೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್. ಭಾರತ ಎಲ್ಲಾ ಕ್ಷೇತ್ರದಲ್ಲಿಯೂ ದಾಪುಗಾಲಿಡ್ತಿದೆ. ರಕ್ಷಣೆಯಾಗಿರಲಿ.. ವಿಜ್ಞಾನ ತಂತ್ರಜ್ಞಾನವಾಗಿರಲಿ.. ಬಾಹ್ಯಾಕಾಶ ಕ್ಷೇತ್ರವೇ ಆಗಿರಲಿ.. ಅಥವಾ ಆರ್ಥಿಕ ಶಕ್ತಿಯೇ ಆಗಿರಲಿ.. ಎಲ್ಲದರಲ್ಲಿಯೂ ಭಾರತ ಬಲಾಢ್ಯವಾಗಿಯೇ ನಿಲ್ಲುತ್ತೆ. ದೇಶದ ಜನರು ಸದೃಢರಾದ್ರೆ, ದೇಶದ ಜನರ ಬದುಕು ಸುಧಾರಿಸಿದ್ರೆ, ಸಹಜವಾಗಿಯೇ ಇಡೀ ದೇಶವೇ ಅಭಿವೃದ್ಧಿಯ ಪಥದಲ್ಲಿ ಸಾಗುತ್ತೆ.
ಭಾರತವು ಕಳೆದ 11 ವರ್ಷದಲ್ಲಿ ಇಂಥದ್ದೇ ಅಭಿವೃದ್ಧಿಯ ಪಥದಲ್ಲಿ ಸಾಗ್ತಾಯಿದೆ. ಅದಕ್ಕೆ ಕಾರಣ ಮೋದಿ. ಪ್ರಧಾನಿ ಪಟ್ಟದಲ್ಲಿ ಕೂತು ಕೇಂದ್ರ ಸರ್ಕಾರವನ್ನ ನಡೆಸ್ತಾಯಿರೋ ನರೇಂದ್ರ ಮೋದಿ. 2014ರಲ್ಲಿ ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ತಾ ಇದ್ಹಾಗೆ ಅವರ ಮುಂದಿದ್ದ ಹಲವು ಸವಾಲುಗಳ ಪೈಕಿ ಪ್ರಮುಖವಾಗಿದ್ದ ಸವಾಲು ಯಾವುದು ಗೊತ್ತಾ..? ಅದುವೇ ಬಡತನ. ಯಸ್, ಬಡತನ ಅನ್ನೋ ಸಮಸ್ಯೆ ಭಾರತವನ್ನ ಬಹು ವರ್ಷದಿಂದ ಕಾಡ್ತಲೇ ಇತ್ತು. ಅಧಿಕಾರಕ್ಕೆ ಬಂದ್ಮೇಲೆ ನರೇಂದ್ರ ಮೋದಿಯವರಿಗೂ ಅದು ಎದುರಾಯ್ತು. ಆದ್ರೆ ಕಳೆದ 11 ವರ್ಷಗಳಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಒಂದೊಂದು ಯೋಜನೆಗಳು.. ತೆಗೆದುಕೊಂಡ ಒಂದೊಂದು ದಿಟ್ಟ ಕ್ರಮಗಳು ದೇಶದ ಬಡತನ ನಿರ್ಮೂಲನೆ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿವೆ.
ನಮ್ಮ ದೇಶದಲ್ಲಿ ಎರಡು ರೀತಿಯಾದ ಕಾರ್ಮಿಕ ವರ್ಗವಿದೆ. ಒಂದು ಸಂಘಟಿತ ಕಾರ್ಮಿಕ ವರ್ಗ, ಹಾಗೇನೆ ಇನ್ನೊಂದು ಅಸಂಘಟಿತ ಕಾರ್ಮಿಕ ವರ್ಗ.. ಇಷ್ಟು ವರ್ಷಗಳ ಕಾಲ ಈ ಅಸಂಘಟಿತ ಕಾರ್ಮಿಕ ವರ್ಗದ ಬಗ್ಗೆ ಸರ್ಕಾರಗಳು ಹೆಚ್ಚು ಗಮನ ಹರಿಸಿರಲಿಲ್ಲ. ಆದ್ರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಅಸಂಘಟಿತ ಕಾರ್ಮಿಕ ವಲಯದ ಕಡೆಗೂ ಗಮನ ಹರಿಸಿದೆ. ಅವರಿಗಾಗಿಯೇ ಪ್ರಧಾನ ಮಂತ್ರಿ ಶ್ರಮ-ಯೋಗಿ ಮಾನ್ಧನ್ ಪಿಂಚಣಿ ಯೋಜನೆಯನ್ನ ಜಾರಿಗೆ ತಂದಿದೆ. 51 ಲಕ್ಷದ 31 ಸಾವಿರ ಅಸಂಘಟಿತ ವಲಯ ಕಾರ್ಮಿಕರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಅವರಿಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3 ಸಾವಿರ ಪಿಂಚಣಿ ಸಿಗುತ್ತೆ. ನಾವು ಒಂದು ಉದ್ಯಮ ಆರಂಭಿಸ್ಬೇಕು.. ಆ ಮೂಲಕ ಆರ್ಥಿಕವಾಗಿ ಸದೃಢರಾಗ್ಬೇಕು ಅನ್ನೋದು ಸಾಕಷ್ಟು ಜನರ ಕನಸು.
ಆದ್ರೆ, ಅನೇಕರಿಗೆ ಬ್ಯುಸಿನೆಸ್ ಆರಂಭಿಸೋಕೆ ಎದುರಾಗೋ ದೊಡ್ಡ ಸಮಸ್ಯೆಯೇ ಹಣ. ಆದ್ರೆ ಈಗ, ಕೇಂದ್ರ ಸರ್ಕಾರವೂ ಈ ಸಮಸ್ಯೆಗೆ ಪರಿಹಾರ ಕೊಡೋ ಕಾರ್ಯ ಮಾಡ್ತಿದೆ. ಯಸ್, ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ಮೂಲಕ 68 ಲಕ್ಷ ಬೀದಿ ಬದಿ ವ್ಯಾಪಾರಿಗಳು ಸಾಲ ಪಡೆದುಕೊಂಡಿದ್ದಾರೆ. ಇನ್ನು, ಮುದ್ರಾ ಯೋಜನೆಯಡಿ 52.5 ಕೋಟಿಗೂ ಹೆಚ್ಚು ಸಾಲ ಕೊಡಲಾಗಿದ್ದು, ಅದ್ರಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಸಮುದಾಯಗಳಿಗೆ ನೀಡಲಾಗಿದೆ. ಬಡತನ ನಿರ್ಮೂಲನೆ ಆಗೋ ತನಕ.. ನಮ್ಮ ಈ ಹೋರಾಟ ನಿಲ್ಲೋ ಮಾತೇ ಇಲ್ಲ ಅಂತ ಶಪಥ ಮಾಡಿದ್ದಾರೆ. ಅದೇ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನ ಘೋಷಿಸಿದೆ.. ಘೋಷಿಸ್ತಾಯಿದೆ ಕೇಂದ್ರ ಸರ್ಕಾರ.