Asianet Suvarna News Asianet Suvarna News

India@75: ಬ್ರಿಟಿಷರ ಅರಣ್ಯ ಕಾಯ್ದೆ ವಿರುದ್ಧ ಸಂತಾಲ್‌ ಬುಡಕಟ್ಟು ಸಮುದಾಯದ ಕ್ರಾಂತಿ

ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗುವ 2 ವರ್ಷ ಮೊದಲು ಬ್ರಿಟಿಷರ ವಿರುದ್ಧ ಭಾರತದ ಬುಡಕಟ್ಟು ಸಮುದಾಯಗಳ ಐತಿಹಾಸಿಕ ಕದಲ ಭುಗಿಲೆದಿತ್ತು. ಅದುವೇ ಸಂತಾಲ್ ಕದನ. 

ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗುವ 2 ವರ್ಷ ಮೊದಲು ಬ್ರಿಟಿಷರ ವಿರುದ್ಧ ಭಾರತದ ಬುಡಕಟ್ಟು ಸಮುದಾಯಗಳ ಐತಿಹಾಸಿಕ ಕದಲ ಭುಗಿಲೆದಿತ್ತು. ಅದುವೇ ಸಂತಾಲ್ ಕದನ. ಅರಣ್ಯ ವಾಸಿಗಳು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟಕ್ಕೆ ಸಂತಾಲ್ ಕಾಡು ಸಾಕ್ಷಿಯಾಗಿದೆ. ಈ ಕಾಡುಗಳಿಂದ ಅರಣ್ಯವಾಸಿಗಳನ್ನು ಓಡಿಸಲು ಬ್ರಿಟಿಷರು ಮುಂದಾಗುತ್ತಾರೆ. ಆಗ ಭೂಮಿ, ವಸತಿ ಕಳೆದುಕೊಂಡ ಸಂತಾಲ್ ವಾಸಿಗಳು ಬ್ರಿಟಿಷರ ವಿರುದ್ಧ ದಂಗೆ ಏಳುತ್ತಾರೆ. ಬ್ರಿಟಿಷರಿಗೆ ಈ ದಂಗೆಯನ್ನು ಹತ್ತಿಕ್ಕಲು 1 ವರ್ಷವೇ ಬೇಕಾಯಿತು. ಕೊನೆಗೆ ಸಂತಾಲ್ ವಾಸಿಗಳನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಆದರೂ ಕೂಡಾ ಸಂತಾಲ್ ಬುಡಕಟ್ಟು ವಾಸಿಗಳು ಸರಿಯಾದ ಪಾಠವನ್ನು ಕಲಿಸಿದರು. ಅವರ ತ್ಯಾಗ ಸದಾ ಸ್ಮರಣೀಯ. 

Video Top Stories