India@75: ಉದ್ಯಮಿಯಾಗಿ ಬೆಳೆದು, ಸ್ವತಂತ್ರ್ಯ ಹೋರಾಟದಲ್ಲೂ ಮಾದರಿಯಾದ ಜಮ್ನಾಲಾಲ್‌ ಬಜಾಜ್‌

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಪ್ರಮುಖ ಉದ್ಯಮಿಗಳಲ್ಲಿ ಜಮ್ನಲಾಲ್ ಬಜಾಜ್ ಪ್ರಮುಖರಾದವರು. ಬಜಾಜ್ ಕಂಪನಿಯ ಸಂಸ್ಥಾಪಕರು. ಮಹಾತ್ಮ ಗಾಂಧೀಜಿ ಜಮ್ನಾಲಾಲ್‌ರನ್ನು ತಮ್ಮ 5 ನೇ ಮಗ ಎನ್ನುತ್ತಿದ್ದರು. ಜಮ್ಲಾಲಾಲ್ 1889 ರಲ್ಲಿ ರಾಜಸ್ಥಾನದ ಸಿಕರ್‌ನಲ್ಲಿ ಮಾರ್ವಾಡಿ ಕುಟುಂಬದಲ್ಲಿ ಜನಿಸುತ್ತಾರೆ.

Share this Video
  • FB
  • Linkdin
  • Whatsapp

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಪ್ರಮುಖ ಉದ್ಯಮಿಗಳಲ್ಲಿ ಜಮ್ನಲಾಲ್ ಬಜಾಜ್ ಪ್ರಮುಖರಾದವರು. ಬಜಾಜ್ ಕಂಪನಿಯ ಸಂಸ್ಥಾಪಕರು. ಮಹಾತ್ಮ ಗಾಂಧೀಜಿ ಜಮ್ನಾಲಾಲ್‌ರನ್ನು ತಮ್ಮ 5 ನೇ ಮಗ ಎನ್ನುತ್ತಿದ್ದರು. ಜಮ್ಲಾಲಾಲ್ 1889 ರಲ್ಲಿ ರಾಜಸ್ಥಾನದ ಸಿಕರ್‌ನಲ್ಲಿ ಮಾರ್ವಾಡಿ ಕುಟುಂಬದಲ್ಲಿ ಜನಿಸುತ್ತಾರೆ.

India@75:ಕರ್ನಾಟಕದ ಕೇಸರಿ ಗಂಗಾಧರ್ ರಾವ್ ದೇಶಪಾಂಡೆ

ಮಹಾರಾಷ್ಟ್ರದ ವಾರ್ಧಾದ ಶ್ರೀಮಂತ ಬಚ್‌ರಾಜ್ ಸೇಠ್, ಜಮ್ನಾಲಾಲ್‌ರನ್ನು ದತ್ತು ಸ್ವೀಕರಿಸುತ್ತಾರೆ. ಮುಂದೆ ಜಮ್ನಾಲಾಲ್ ದತ್ತು ತಂದೆಯ ಹೊಣೆ ಹೊರುತ್ತಾರೆ. ಕೆಲವೇ ದಿನಗಳಲ್ಲಿ ಸ್ವಂತದ ಸಕ್ಕರೆ ಕಾರ್ಖಾನೆ ಆರಂಭಿಸುತ್ತಾರೆ. ಗಾಂಧೀಜಿ ಹಾಗೂ ಅವರ ತತ್ವದ ಆರಾಧಕರಾಗಿದ್ದರು. ಧ್ವಜ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹಗಳಲ್ಲಿ ಭಾಗಿಯಾಗಿ ಜೈಲು ಸೇರುತ್ತಾರೆ. ಬರೀ ಉದ್ಯಮಿ ಮಾತ್ರ ಸ್ವತಂತ್ರ್ಯ ಹೋರಾಟಗಾರರಾಗಿಯೂ ಮಾದರಿಯಾಗಿದ್ದಾರೆ. 

Related Video