
Heeraben Modi Birthday: ಅಮ್ಮನ ಪಾದ ಪೂಜೆ ಮಾಡಿ, ಆಶೀರ್ವಾದ ಪಡೆದ ಮೋದಿ
ಪ್ರಧಾನಿ ನರೇಂದ್ರ ಮೋದಿ (PM Modi) ಅವರ ತಾಯಿ ಹೀರಾಬಾ ಮೋದಿ (Heeraben Modi ) ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಾಯಿಯ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು ಪ್ರಧಾನಿ ಮೋದಿ.
ಅಹಮದಾಬಾದ್ (ಜೂ. 18): ಪ್ರಧಾನಿ ನರೇಂದ್ರ ಮೋದಿ (PM Modi) ಅವರ ತಾಯಿ ಹೀರಾಬಾ ಮೋದಿ (Heeraben Modi ) ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಾಯಿಯ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು ಪ್ರಧಾನಿ ಮೋದಿ.
ಪ್ರಧಾನಿ ತಾಯಿಗೆ ತುಂಬಿತು 100 ವರ್ಷ! ಶತಾಯುಷಿ ತಾಯಿ ಬಗ್ಗೆ ಮೋದಿ ಹೇಳಿದ ಸತ್ಯ!
ಹೀರಾಬಾ ಜೂ. 18, 1923 ರಂದು ಜನಿಸಿದ್ದರು. ಈ ವರ್ಷ ಅವರು ತಮ್ಮ 100 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಮೋದಿಯವರ ಹುಟ್ಟೂರು ವಾಡ್‌ನಗರದಲ್ಲಿ ಹೀರಾಬಾ ಅವರ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ಹಟಕೇಶ್ವರ ಮಹಾದೇವ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.