ಪ್ರಧಾನಿ ಮೋದಿ ತಾಯಿಗೆ ತುಂಬಿತು 100 ವರ್ಷ! ಶತಾಯುಷಿ ತಾಯಿ ಬಗ್ಗೆ ಮೋದಿ ಹೇಳಿದ ಸತ್ಯ!

ಮೋದಿ ತಾಯಿಗೆ ತುಂಬಿತು 100 ವರ್ಷ..! ಶತಾಯುಷಿ ತಾಯಿ ಬಗ್ಗೆ ಮೋದಿ ಹೇಳಿದ ಸತ್ಯ..! ಹೇಗಿದೆ ಗೊತ್ತಾ ಪ್ರಧಾನಿ ತಾಯಿಯ ಜೀವನಶೈಲಿ..?  

First Published Jun 17, 2022, 2:51 PM IST | Last Updated Jun 17, 2022, 2:51 PM IST

ನವದೆಹಲಿ(ಜೂ.17):  ಅವರು ಪ್ರಧಾನಿ ಮೋದಿಯವರ ಪಾಲಿನ ಅತೀ ದೊಡ್ಡ ಸ್ಫೂರ್ತಿ, ಮೋದಿ ಹಿಂದಿನ ಯಶೋಶಕ್ತಿ... ಆ ಶಕ್ತಿಗೀಗ 100 ವರ್ಷ. ನಾವು ಇವತ್ತು ಹೇಳೋದಕ್ಕೆ ಹೊರಟಿರೋದು ಮೋದಿಯವರ ಶತಾಯುಷಿ ತಾಯಿಯ ಬಗ್ಗೆ. ಮೋದಿ ತಾಯಿ ಹೀರಾ ಬೆನ್ ಅವರಿಗೆ 100 ವರ್ಷ ತುಂಬುತ್ತಿದೆ. ಅಷ್ಟಕ್ಕೂ ಮೋದಿ ತಾಯಿಯ ಬಗ್ಗೆ ನಿಮ್ಗೆಷ್ಟು ಗೊತ್ತು..? ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯ ತಾಯಿಯ ಜೀವನಶೈಲಿ ಹೇಗಿದೆ..? 

ಒಂದು ದೊಡ್ಡ ದೇಶದ ಆ ಪ್ರಧಾನಿಯ ತಾಯಿ ಹೀಗೂ ಇರ್ಬಹ್ದಾ ಅನ್ನೋದಕ್ಕೆ ಉದಾಹರಣೆ ಮೋದಿಯವರ ಜನ್ಮದಾತೆ ಹೀರಾ ಬೆನ್. ಮೋದಿ ತಾಯಿಯೀಗ ಬರೀ ತಾಯಿಯಲ್ಲ, ಶತಾಯುಷಿ ತಾಯಿ.  ಪ್ರಧಾನಿ ಮೋದಿಯವರಿಗೆ ಈಗ 71 ವರ್ಷ. ಅದೇನು ಕಮ್ಮಿ ವಯಸ್ಸಲ್ಲ ಬಿಡಿ. ಈ ವಯಸ್ಸಲ್ಲಿ ತಾಯಿಯ 100ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುವ ಅವಕಾಶ, ಆ ಭಾಗ್ಯ ಎಷ್ಟು ಜನ್ರಿಗೆ ಸಿಗತ್ತೆ ಹೇಳಿ..? ಮೋದಿಯವರಿಗೆ ಆ ಅವಕಾಶ ಸಿಗ್ತಾ ಇದೆ. 

ಮೋದಿ ತಾಯಿ 100ನೇ ವರ್ಷಕ್ಕೆ ಕಾಲಿಡುತ್ತಿರೋ ಹೊತ್ತಲ್ಲಿ, ದೇಶವೇ ಮೆಚ್ಚಿದ ಮಹಾವೀರನ ಶತಾಯುಷಿ ಅಮ್ಮನಿಗೆ ಅಡ್ವಾನ್ಸ್ ಹ್ಯಾಪಿ ಬರ್ತ್ ಡೇ