ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ

ಪಾಕಿಸ್ತಾನದಿಂದ ಬಂದ ಡ್ರೋನ್ ಮತ್ತು ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದೆ. 75 ವರ್ಷಗಳಲ್ಲಿ ಭಾರತವು ಆತ್ಮನಿರ್ಭರವಾಗಿದ್ದು, ಸ್ವದೇಶಿ ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Sathish Kumar KH | Updated : May 10 2025, 10:01 PM
Share this Video

ನಿವೃತ್ತ ಡಿಆರ್‌ಡಿಒ ಅಧಿಕಾರಿ ಜಯರಾಂ: ಪಾಕಿಸ್ತಾನದಿಂದ ಬಂದ ಡ್ರೋನ್ ಹಾಗೂ ಮಿಸೈಲ್‌ಗಳನ್ನು ಹೊಡೆದು ಉರುಳಿಸಲಾಗಿದೆ. ಪಾಕಿಸ್ತಾನದ ದಾಳಿಯಿಂದ ಭಾರತದ ಯುದ್ಧದ ಧೋರಣೆಗಳನ್ನು ಸರ್ಕಾರ ಸ್ಪಷ್ಟಪಡಿಸಿದೆ. ಇಲ್ಲಿ ಯುದ್ಧಕ್ಕೆ ಗೌರವ ಹಾಗೂ ನಾಗರೀಕರಿಗೆ ತೊಂದರೆ ಕೊಡಬಾರದು ಎಂಬ ರೀತಿಯಲ್ಲಿ ನಡೆದುಕೊಂಡಿದ್ದೇವೆ. ಭಾರತ ಸರ್ಕಾರ ಕೇವಲ ಧರ್ಮಯುದ್ಧವನ್ನು ಮಾಡುತ್ತಿದೆ. ಪಾಕಿಸ್ತಾನ ಎಲ್ಲಿಂದ ನಮ್ಮ ಮೇಲೆ ದಾಳಿ ಮಾಡುತ್ತಿದೆಯೋ ಅಂತಹ ಕೇಂದ್ರಗಳ ಮೇಲೆ ಭಾರತ ದಾಳಿ ಮಾಡುತ್ತಿದೆ. 

ಭಾರತವು 75 ವರ್ಷಗಳಲ್ಲಿ ಆತ್ಮ ನಿರ್ಭರ ಭಾರತವಾಗಿದ್ದೇವೆ. ಇಸ್ರೋ, ಡಿಆರ್‌ಡಿಒ ಎಲ್ಲ ಕೇಂದ್ರಗಳ ಅಧಿಕಾರಿಗಳು, ವಿಜ್ಞಾನಿಗಳು ಕೂಡ ತುಂಬಾ ಶ್ರಮ ಪಟ್ಟಿದ್ದಾರೆ. ಭಾರತದ ಶಸ್ತ್ರ ಸಂಯೋಜನೆ ಮಾಡಿದ ಆಕಾಶ್, ಭೂಮಿ. ಪೃಥ್ವಿ ಸೇರಿದಂತೆ ಹಲವು ಯುದ್ಧ ವಿಮಾನಗಳಿಗೆ. ಕೆಲವೊಂದನ್ನು ಭದ್ರತಾ ದೃಷ್ಟಿಯಿಂದ ನಾವು ಮಾಧ್ಯಮಗಳ ಮುಂದೆ ಹೇಳಿಕೊಳ್ಳಲು ಸಾಧ್ಯವಿಲ್ಲ. ನಮ್ಮ ವಿಜ್ಞಾನಿಗಳು ರಕ್ಷಣಾ ಹಿನ್ನೆಲೆಯಲ್ಲಿ ಏನೆಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಳೆಸಬೇಕು ಎಂದು ಹೇಳಿದ್ದರು. ತಾಂತ್ರಿಕ ವಿಜ್ಞಾನದಲ್ಲಿ ಪ್ರಥಮ ಹೆಜ್ಜೆಯನ್ನಿಟ್ಟು ಸ್ವದೇಶೀಯವಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಹೇಳಿಕೊಂಡಿದ್ದರು. ಆಗಿನ ವಿಜ್ಞಾನಿಗಳ ದೂರದೃಷ್ಟಿ ಪರಿಕಲ್ಪನೆಯೊಂದಿಗೆ ಇಂದು ನಾವು ಜಾಗತಿಕ ಮಟ್ಟದಲ್ಲಿ ರಕ್ಷಣೆ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಗಿದೆ. ಕೆಲವೊಂದು ಶಸ್ತ್ರಾಸ್ತ್ರಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದ್ದರೂ, ಭಾರತದಲ್ಲಿ ತಾಯಾರಾದ ಶಸ್ತ್ರಾಸ್ತ್ರಗಳ ಬಗ್ಗೆ ಹೀಗಳೆಯುವ ಸಾಮರ್ಥ್ಯವೇನೂ ಇಲ್ಲ ಎಂದು ಹೇಳಿದರು.

Related Video