India@75:ಕ್ವಿಟ್ ಕಾಶ್ಮೀರ್ ಕದನದ ಕುತೂಹಲಕಾರಿ ಕಥೆ ನಿಮ್ಮ ಮುಂದೆ

ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಂಮರು ಒಂದಾಗಿ ಹೋರಾಡಿದ ಹೆಮ್ಮೆಯ ಇತಿಹಾಸ ಜಮ್ಮು ಕಾಶ್ಮೀರದ್ದು. ಎಲ್ಲಾ ಸ್ಥಳೀಯ ರಾಜರನ್ನು ಒಂದು ಮಾಡಿ ಒಬ್ಬ ರಾಜನ ನೇತೃತ್ವಕ್ಕೆ ಕೊಡುವ ಅಮೃತಸರ ಒಪ್ಪಂದವನ್ನು1846 ರಲ್ಲಿ ಬ್ರಿಟಿಷರು ಜಾರಿಗೆ ತರುತ್ತಾರೆ. 

First Published Aug 4, 2022, 5:27 PM IST | Last Updated Aug 4, 2022, 5:30 PM IST

ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಂಮರು ಒಂದಾಗಿ ಹೋರಾಡಿದ ಹೆಮ್ಮೆಯ ಇತಿಹಾಸ ಜಮ್ಮು ಕಾಶ್ಮೀರದ್ದು. ಎಲ್ಲಾ ಸ್ಥಳೀಯ ರಾಜರನ್ನು ಒಂದು ಮಾಡಿ ಒಬ್ಬ ರಾಜನ ನೇತೃತ್ವಕ್ಕೆ ಕೊಡುವ ಅಮೃತಸರ ಒಪ್ಪಂದವನ್ನು1846 ರಲ್ಲಿ ಬ್ರಿಟಿಷರು ಜಾರಿಗೆ ತರುತ್ತಾರೆ. 

India@75:ಆದಿವಾಸಿಗಳ, ಮಹಿಳೆಯರ ಸ್ವಾತಂತ್ರ್ಯದ ಧ್ವನಿ ಬ್ಯಾರಿಸ್ಟರ್ ಜಾರ್ಜ್ ಜೋಸೆಫ್

ಅದರಂತೆ ಗುಲಾಬ್ ಸಿಂಗ್ ಎನ್ನುವವರನ್ನು ಮಹಾರಾಜನನ್ನಾಗಿ ಮಾಡಲಾಯಿತು. ಮುಸ್ಲಿಂ ಪ್ರಾಬಲ್ಯವಿರುವ ಪ್ರಾಂತ್ಯದಲ್ಲಿ ಹಿಂದೂ ರಾಜನನ್ನು ನೇಮಿಸಿರುವುದು ದಿಢೀರ್ ಆಕ್ರೋಶಕ್ಕೆ ಕಾರಣವಾಯಿತು. ಆಗ ಬ್ರಿಟಿಷರು ಮಧ್ಯ ಪ್ರವೇಶಿಸಿ ಹರಿಸಿಂಗ್ ಎಂಬುವವನನ್ನು ಮಹಾರಾಜನನ್ನಾಗಿ ಘೋಷಿಸುತ್ತಾರೆ. ರಾಜಾ ಹರಿಸಿಂಗ್ ಸರ್ವಾಧಿಕಾರಿ ಮನೋಭಾವದವನು. ಸದಾ ಮೇಲ್ವರ್ಗದವರ ಪರವಾಗಿದ್ದನು. ಬಹುಸಂಖ್ಯಾತ ಮುಸ್ಲಿಂ ಸಮುದಾಯದವರು ತಿರುಗಿ ಬಿದ್ದರು. ಮುಸಲ್ಮಾನರ ವಿರುದ್ಧ ತಾರತಮ್ಯ ಕೊನೆಗಾಣಿಸಲು ನ್ಯಾಶನಲ್ ಕಾನ್ಫರೆನ್ಸ್ ಶುರು ಮಾಡುತ್ತಾರೆ. ಸರ್ಕಾರದ ಯೋಜನೆ, ನಿಯಮಗಳ ವಿರುದ್ಧ ಧ್ವನಿ ಎತ್ತುತ್ತಾರೆ. ಮುಂದೆ ಇವರ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ