India@75: ಶೋಷಣೆಯ ವಿರುದ್ಧ ಹೋರಾಡಿದ ಆದಿವಾಸಿ ನಾಯಕ ಕೊಮರಂ ಭೀಮ್
ಬ್ರಿಟೀಷರು, ನಿಜಾಮರು, ಭೂಮಾಲೀಕರ ವಿರುದ್ಧ ಹೋರಾಡಿ ಹುತಾತ್ಮರಾದ ಹೈದರಾಬಾದ್ ಪ್ರಾಂತ್ಯದ ಗೊಂಡ ಬುಡಕಟ್ಟು ಸಮುದಾಯದ ನಾಯಕ ಕೊಮರಂ ಭೀಮ್ ಸಾಹಸಗಾಥೆ ಇಲ್ಲಿದೆ.
ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. ಬ್ರಿಟಿಷರು ಹಾಗೂ ಭೂಮಾಲೀಕರ ಶೋಷಣೆಯ ವಿರುದ್ಧ ಹೋರಾಡಿ ಹುತಾತ್ಮರಾದ ಆಂಧ್ರದ ಆದಿವಾಸಿ ನಾಯಕ ಕೊಮರಂ ಭೀಮ್ ಸಾಹಸಗಾಥೆ ಇಲ್ಲಿದೆ. ಜಲ್, ಜಂಗಲ್, ಜಮೀನ್ ತೆಲಂಗಾಣ, ಆಂಧ್ರದಲ್ಲಿ ಆದಿವಾಸಿ ಚಳುವಳಿಯ ಜನಪ್ರಿಯ ಘೋಷಣೆ. ಈ ಘೋಷಣೆಯನ್ನು ಮೊದಲು ಕೂಗಿದವರು ಕೊಮರಂ ಭೀಮ್. ನಿಜಾಮರು ಆಳುತ್ತಿದ್ದ ಹೈದರಾಬಾದ್ ಪ್ರಾಂತ್ಯದ ಗೊಂಡ ಬುಡಕಟ್ಟು ಸಮುದಾಯದ ನಾಯಕ ಇವರು. ಬ್ರಿಟೀಷರು, ನಿಜಾಮರು, ಭೂಮಾಲೀಕರ ವಿರುದ್ಧ ಹೋರಾಡಿ ಹುತಾತ್ಮರಾದ ನಾಯಕ. ಉತ್ತರ ಹೈದರಾಬಾದ್ ನಲ್ಲಿರುವ ಅಸಿಫಾಬಾದ್ ನ ಸಂಕೀಪಲ್ಲಿಯಲ್ಲಿ ಕೊಮರಂ ಭೀಮ್ 1901 ರಲ್ಲಿ ಗೋಂಡಿ ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದರು. ಬ್ರಿಟೀಷರ ವಿರುದ್ಧ ಹೋರಾಡಿದ ಬುಡಕಟ್ಟು ಜನಾಂಗದ ನಾಯಕ 1940ರಲ್ಲಿ ಹುತಾತ್ಮರಾದರು.