ಅಮೃತ ಮಹೋತ್ಸವ ಯಾತ್ರೆಗೆ ರಾಜ್ಯಪಾಲ ಚಾಲನೆ, ಏಷ್ಯಾನೆಟ್ ನ್ಯೂಸ್‌ ಗ್ರೂಪ್‌ ಕಾರ್ಯಕ್ಕೆ ಮೆಚ್ಚುಗೆ

 ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ.  ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಏಷ್ಯಾನೆಟ್ ಗ್ರೂಪ್ ವತಿಯಿಂದ ಅಮೃತ ಮಹೋತ್ಸವ ಯಾತ್ರೆ ನಡೆಸಲಾಗುತ್ತಿದ್ದು, ಇದಕ್ಕೆ  ಇಂದು(ಜುಲೈ 20) ರಾಜಭವನದಲ್ಲಿ  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯಾತ್ರೆಗೆ ಚಾಲನೆ ನೀಡಿದರು.

First Published Jul 20, 2022, 11:40 PM IST | Last Updated Jul 20, 2022, 11:40 PM IST

ಬೆಂಗಳೂರು, (ಜುಲೈ.20): ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ.  ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಏಷ್ಯಾನೆಟ್ ಗ್ರೂಪ್ ವತಿಯಿಂದ ಸಹ ಅಮೃತ ಮಹೋತ್ಸವ ಯಾತ್ರೆ ನಡೆಸಲಾಗುತ್ತಿದ್ದು, ಇದಕ್ಕೆ  ಇಂದು(ಜುಲೈ 20) ರಾಜಭವನದಲ್ಲಿ  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯಾತ್ರೆಗೆ ಚಾಲನೆ ನೀಡಿದರು.

ಏಷ್ಯಾನೆಟ್‌ ಸಮೂಹದಿಂದ ಅಮೃತ ಮಹೋತ್ಸವ ಯಾತ್ರೆ: ರಾಜ್ಯಪಾಲರಿಂದ ಚಾಲನೆ

ಅಮೃತ ಮಹೋತ್ಸವ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ದೇಶದ ಏಕತೆ,‌ ಸದೃಢತೆಗೆ ಈ ಯಾತ್ರೆ ಮುಖ್ಯವಾದದ್ದು. ಸ್ವಾತಂತ್ರ್ಯ ಬಂದಾಗಿನಿಂದ ಏನಾಗಿದೆ. ಮುಂದೆ ಏನಾಗಬೇಕು ಎನ್ನುವುದನ್ನ ತಿಳಿಯಬೇಕಾಗಿದೆ. ದೇಶ ನಮಗೆ ಬಹಳ ಕೊಟ್ಟಿದೆ. ಈಗ ನಾವು ದೇಶಕ್ಕೆ ಏನು ಕೊಡಬೇಕು ಎಂಬುದನ್ನ ಈ ಯಾತ್ರೆ‌ ತಿಳಿಸಿಕೊಡಲಿದೆ ಎಂದು ಹೇಳಿದ ಅವರು, ಏಷ್ಯಾನೆಟ್ ನ್ಯೂಸ್ ಹಮ್ಮಿಕೊಂಡಿರುವ ಕಾರ್ಯಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ರು.