ಭಾರತದ ಹಿರಿಮೆಯನ್ನು ಯುವಪೀಳಿಗೆಯಲ್ಲಿ ಬಿತ್ತುವ ಅಮೃತ ಮಹೋತ್ಸವ ಯಾತ್ರೆ!

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯಶಸ್ವಿಯಾಗಿದೆ. ರಾಜ್ಯಾಪಾಲರು  ಚಾಲನೆ ನೀಡಿದ ಈ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.

First Published Aug 18, 2022, 7:57 PM IST | Last Updated Aug 18, 2022, 7:57 PM IST

ಭಾರತದ ಸ್ವಾತಂತ್ರ್ಯ ದಿನಾಚರಣೆ 75ನೇ ವರ್ಷ ಸಂಭ್ರಮದಲ್ಲಿ ಅಮೃತ ಮಹೋತ್ಸವ ಯಾತ್ರೆಯೆ ಮೂಲಕ  ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಮಾಧ್ಯಮ ಲೋಕದಲ್ಲಿಹೊಸ ಅಧ್ಯಾಯ ಬರೆದಿದೆ. ಭಾರತ ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್, ಇಸ್ರೋ, ರಾಷ್ಟ್ರೀಯ ಮಿಲಿಟರಿ ಮೇಮೋರಿಯಲ್ ಸೇರಿದಂತೆ ಕೆಲ ಪ್ರಮುಖ ಸಂಸ್ಥೆಗಳನ್ನು ಎನ್‌ಸಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಹಾಗೂ ಭಾರತವನ್ನು ಮತ್ತಷ್ಟು ತಿಳಿದುಕೊಳ್ಳುವ ವಿಶೇಷ ಅಮೃತ ಮಹೋತ್ಸವ ಯಾತ್ರೆ ಇದಾಗಿದೆ. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದ ಈ ವಿಶೇಷ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ.