ಚಳಿಗಾಲದಲ್ಲಿ ಆರೋಗ್ಯದ ಕಾಳಜಿ ಹೇಗೆ ? ಜಯದೇವ ಆಸ್ಪತ್ರೆಯ ಡಾ.ಸಿಎನ್ ಮಂಜುನಾಥ್ ಏನ್ ಹೇಳ್ತಾರೆ ?
ದೇಶಾದ್ಯಂತ ಚಳಿಯ ಪ್ರಮಾಣ ಹೆಚ್ಚಾಗಿದೆ. ಉತ್ತರ ಭಾರತವಂತೂ ಚಳಿಗೆ ತತ್ತರಿಸಿ ಹೋಗಿದೆ. ರಾಜ್ಯದಲ್ಲೂ ಚಳಿಯ ಪ್ರಮಾಣ ಕಡಿಮೆಯೇನಿಲ್ಲ. ಪತರಗುಟ್ಟಿಸೋ ಚಳಿಯಿಂದ ಜನರು ಹೈರಾಣಾಗಿದ್ದಾರೆ. ಹೀಗಿರುವಾಗ ಕೊರೆವ ಚಳಿಯ ಮಧ್ಯೆ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ ಅಂತ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್ ಮಂಜುನಾಥ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ.
ದೇಶಾದ್ಯಂತ ವಿಪರೀತ ಚಳಿ ಮೈ ನಡುಗಿಸುತ್ತಿದೆ. ಥರಗುಟ್ಟುವ ಚಳಿಗೆ ಹೃದಯ ಸಂಬಂಧಿ ಖಾಯಿಲೆಗಳು (Heart disease) ಹೆಚ್ಚಾಗ್ತಿದೆ ಅಂತ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ. ಭಾರೀ ಚಳಿ ಹಾಗೂ ಮಂಜು ಮುಸುಕಿದ ವಾತಾವರಣಕ್ಕೆ ಹಾರ್ಟ್ ಅಟ್ಯಾಕ್ ಆಗುವವರ ಸಖ್ಯೆ ದಿನಕ್ಕೆ ಶೇ 4% ಹೆಚ್ಚಳವಾಗಿದೆ. ಹೀಗಾಗಿ ಮಕ್ಕಳು (Children), ವೃದ್ದರು ಎಚ್ಚರದಿಂದಿರಿ ಎಂದು ಎಚ್ಚರಿಸಿದ್ದಾರೆ.
ಈ ಹಿಂದೆ ದಿನಕ್ಕೆ ಜಯದೇವ ಆಸ್ಪತ್ರೆಗೆ 100 ಹೃದಯಘಾತ (Heart attack)ಕ್ಕೊಳಗಾದವರು ಬರ್ತಿದ್ರು. ಆದ್ರೆ ಭಾರೀ ಚಳಿಗೆ ರೋಗಿಗಳ ಸಂಖ್ಯೆ 150ಕ್ಕೂ ಹೆಚ್ಚಾಗ್ತಿದೆ. ವಿಪರೀತ ಚಳಿಗೆ ರಕ್ತದೊತ್ತಡದಲ್ಲಿ ಏರುಪೇರಾಗಿ ರಕ್ತ ಹೆಪ್ಪುಗಟ್ಟಿ ಮೆದುಳು, ಹೃದಯಾಘಾತ ಸಂಭವಿಸುತ್ತಿದೆ. ತೀವ್ರ ಚಳಿ ಪ್ರಾಣಾಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲ, ಚಳಿಗಾಲದಲ್ಲಿ ವಾಕ್ ಮಾಡುವಾಗ ಬೆಚ್ಚನೆಯ ಉಡುಪು, ಮಾಸ್ಕ್ ಧರಿಸ್ಬೇಕು. ವಿಟಮಿನ್ ಯುಕ್ತ ಆಹಾರ (Food) ಸೇವನೆ ಮಾಡೋದು ಮುಖ್ಯ ಎಂದು ಸಿ.ಎನ್ ಮಂಜುನಾಥ್ ಮಾಹಿತಿ ನೀಡಿದ್ದಾರೆ.
24 ಗಂಟೆಯಲ್ಲಿ ಹೃದಯಾಘಾತಕ್ಕೆ 14 ಬಲಿ ಬೆಚ್ಚಿಬೀಳಿಸುತ್ತಿದೆ ಕಾನ್ಪುರದ ಸ್ಥಿತಿ