ಬಾಯಿಯ ಕ್ಯಾನ್ಸರ್‌ಗೆ ಪ್ರಮುಖ ಕಾರಣ ಏನು?
ಬಾಯಿಯ ಕ್ಯಾನ್ಸರ್ ದೇಶದ ಕಂಡುಬರುವ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು ಒಂದು ಲಕ್ಷ ಹೊಸ ಬಾಯಿಯ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಬಾಯಿಯಲ್ಲಿ ಕ್ಯಾನ್ಸರ್ ಕೋಶ ಬೆಳೆದು ಅನೇಕ ಸಮಸ್ಯೆ ತಂದೊಡ್ಡುತ್ತದೆ. ಬಾಯಿಯ ಕ್ಯಾನ್ಸರ್‌ಗೆ ಮುಖ್ಯ ಕಾರಣ ಏನು? ಆ ಬಗ್ಗೆ ಮಾಹಿತಿ ಇಲ್ಲಿದೆ.
ಈಗಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ನಾನಾ ರೀತಿಯ ಕ್ಯಾನ್ಸರ್ ಹೆಚ್ಚಿನ ಮಟ್ಟದಲ್ಲಿ ಕಾಣಿಸಿಕೊಳ್ತಿದೆ. ನಮ್ಮ ದೇಹಕ್ಕೆ ಆಹಾರ ತಲುಪಿಸುವ ನಮ್ಮ ಬಾಯಿ ಕೂಡ ಸುರಕ್ಷಿತವಲ್ಲ. ಬಾಯಿ ಕ್ಯಾನ್ಸರ್ ಬಗ್ಗೆ ಆರೋಗ್ಯ ಸಚಿವಾಲಯ ಕೂಡ ಎಚ್ಚರಿಕೆ ನೀಡಿದೆ. ಅಸಹಜ ಜೀವಕೋಶಗಳು ಬಾಯಿಯೊಳಗೆ ಬೆಳೆದಾಗ ಮತ್ತು ವಿಭಜನೆಯಾದಾಗ ಕ್ಯಾನ್ಸರ್ ಬೆಳವಣಿಗೆಯಾಗುತ್ತದೆ. ತುಟಿಗಳು, ನಾಲಿಗೆ ಅಥವಾ ನಿಮ್ಮ ಬಾಯಿಯ ತಳಭಾಗದಲ್ಲಿ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಆದ್ರೆ ಬಾಯಿಯ ಮೇಲ್ಭಾಗ, ಟಾನ್ಸಿಲ್, ಒಸಡು, ಕೆನ್ನೆ ಮತ್ತು ಲಾಲಾರಸ ಗ್ರಂಥಿಗಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಇದು ತುಂಬಾ ಅಪಾಯಕಾರಿ ಕ್ಯಾನ್ಸರ್ ನಲ್ಲಿ ಒಂದು. ಯಾಕೆಂದ್ರೆ ಆರಂಭದಲ್ಲಿ ಇದ್ರ ಲಕ್ಷಣ ಪತ್ತೆ ಹಚ್ಚುವುದು ಬಹಳ ಕಷ್ಟ. ಇಷ್ಟಕ್ಕೂ ಬಾಯಿಯ ಕ್ಯಾನ್ಸರ್‌ಗೆ ಪ್ರಮುಖ ಕಾರಣ ಏನು? ಈ ಬಗ್ಗೆ ಡಾ.ವಿಶಾಲ್ ರಾವ್ ಮಾಹಿತಿ ನೀಡಿದ್ದಾರೆ.
ಎಚ್ಚರ..ದೇಹದಲ್ಲಿ ವಿಟಮಿನ್ ಡಿ ಕೊರತೆಯಾದ್ರೆ ಕ್ಯಾನ್ಸರ್ ಅಪಾಯ ಹೆಚ್ಚು