SSLC ಪರೀಕ್ಷೆ ವೇಳೆ ವಿದ್ಯಾರ್ಥಿನಿ ಸಾವು; ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳೋದೇನು?
SSLC ಪರೀಕ್ಷೆ ಬರೆವಾಗಲೇ ಟಿ ನರಸೀಪುರ ತಾಲೂಕಿನ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಇದಕ್ಕೆ ಕಾರಣವೇನು? ಈ ಬಗ್ಗೆ ಹೃದಯ ತಜ್ಞೆ ವಿಜಯಲಕ್ಷ್ಮೀ ಬಾಳೆಕುಂದ್ರಿ ಏನಂತಾರೆ?
ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದೆ. ಪರೀಕ್ಷೆ ಬರೆಯುತ್ತಿರುವಾಗಲೇ ಟಿ. ನರಸೀಪುರ(T. Narasipura)ದ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ.
ಟಿ. ನರಸೀಪುರದ ಶಾಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿದ್ಯಾರ್ಥಿನಿ(student) ಇದ್ದಕ್ಕಿದ್ದಂತೆ ಕುಸಿದು ಬಿದ್ದಳು. ತಕ್ಷಣ ಅಲ್ಲಿದ್ದ ಸಿಬ್ಬಂದಿ ಆಕೆಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ (Student) ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿಗೆ ಹೃದಯಾಘಾತ(heart attack)ವಾಗಿ ಈ ದುರಂತ ಸಂಭವಿಸಿದೆ.
SSLC ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಕುಸಿದುಬಿದ್ದು ವಿದ್ಯಾರ್ಥಿನಿ ...
ಟಿ.ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದ ಕೆಂಪರಾಜು ಎಂಬುವರ ಪುತ್ರಿ ಅನುಶ್ರೀ (16 ವರ್ಷ) ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆಗಾಗಿ ತಾಲೂಕು ಕೇಂದ್ರಕ್ಕೆ ಬಂದ ಆಕೆ ಗೊಂದಲ ಮಾಡಿಕೊಂಡು ತಾನು ಪರೀಕ್ಷೆ ಬರೆಯಬೇಕಾಗಿದ್ದ ಕೇಂದ್ರ ಬಿಟ್ಟು ಪಕ್ಕದಲ್ಲೇ ಇದ್ದ ಶಿವಾನಂದ ಶರ್ಮ ಆಂಗ್ಲ ಮಾಧ್ಯಮ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಮುಂದಾಗಿದ್ದಾಳೆ.ಅಲ್ಲಿಯೇ ಸುಮಾರು ಹದಿನೈದು ನಿಮಿಷಗಳ ಕಾಲ ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ. ಆದರೆ ಹಾಲ್ ಟಿಕೆಟ್ ಚೆಕ್ ಮಾಡಿದಾಗ ಆಕೆಯ ಪರೀಕ್ಷಾ ಕೇಂದ್ರ ಬೇರೆ ಎಂದು ತಿಳಿದು ಬಂದಿದೆ. ಇದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರು ಆಕೆಗೆ ಮನವರಿಕೆ ಮಾಡಿ ಪಕ್ಕದ ಸೆಂಟರ್‌ಗೆ ಕರೆದೊಯ್ಯುತ್ತಿದ್ದ ಸಂಧರ್ಭ ಶಾಲೆಯ ಮೆಟ್ಟಿಲನ್ನು ಹತ್ತುವ ವೇಳೆ ಕುಸಿದು ಬಿದ್ದಿದ್ದಾಳೆ. ನಂತರ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ.
ಹೃದಯಾಘಾತ ಆಗಬಾರದು ಅಂದ್ರೆ ಯಾವುದೆಲ್ಲಾ ವಿಚಾರದ ಬಗ್ಗೆ ಎಚ್ಚರಿಕೆ ವಹಿಸ್ಬೇಕು ?
ಈ ಸಾವಿಗೆ ಏನು ಕಾರಣ? ಇನ್ನೂ 16 ವರ್ಷ ವಯಸ್ಸಿನ ಹುಡುಗಿಗೆ ಹೃದಯಾಘಾತ ಆಗುವುದೇ? ಪರೀಕ್ಷೆಯ ಭಯವೇ ಸಾವು ತಂತೇ? ಈ ಎಲ್ಲ ಪ್ರಶ್ನೆಗಳಿಗೂ ಹೃದಯತಜ್ಞೆ ವಿಜಯಲಕ್ಷ್ಮೀ ಬಾಳೆಕುಂದ್ರಿ ಏನಂತಾರೆ ನೋಡೋಣ.