ಮಕ್ಕಳಿಗೆ ಓಪನ್ ಹಾರ್ಟ್ ಸರ್ಜರಿ ಮಾಡೋದು ತುಂಬಾ ರಿಸ್ಕ್-ಡಾ.ಸಿ.ಎನ್ ಮಂಜುನಾಥ್
ಇತ್ತೀಚಿನ ಕೆಲ ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ.ಆದರೆ ಮಕ್ಕಳು ಇಂಥಾ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರಿಗೆ ಚಿಕಿತ್ಸೆ ನೀಡುವುದು ತುಂಬಾ ಕಷ್ಟ ಎಂದು ಡಾ.ಸಿ.ಎನ್ ಮಂಜುನಾಥ್ ಹೇಳುತ್ತಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮಕ್ಕಳು, ವೃದ್ಧರು ಎನ್ನುವ ಬೇಧವಿಲ್ಲದೆ ಹೃದಯ ಸಂಬಂಧಿ ಕಾಯಿಲೆ ಅನ್ನೋದು ಇತ್ತೀಚಿಗೆ ಎಲ್ಲರಲ್ಲೂ ಸಾಮಾನ್ಯವಾಗುತ್ತಿದೆ. ಈ ಬಗ್ಗೆ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಮಾಹಿತಿ ನೀಡಿದ್ದಾರೆ. ದೊಡ್ಡವರಿಗೆ ಹಾರ್ಟ್ ಸರ್ಜರಿ ಮಾಡುವುದು ಕಷ್ಟವೇನಿಲ್ಲ. ಆದರೆ ಮಕ್ಕಳನ್ನು ಸಹ ಹೃದಯ ಸಂಬಂಧಿ ಕಾಯಿಲೆಗಳು ಕಾಡುತ್ತವೆ. ಹೀಗಿರುವಾಗ ಮಕ್ಕಳಿಗೆ ಓಪನ್ ಹಾರ್ಟ್ ಸರ್ಜರಿ ಮಾಡುವುದು ಕಷ್ಟ. ಪುಟಾಣಿ ಮಕ್ಕಳಿಗೆ ಆಪರೇಷನ್ ಮಾಡುವ ಆಸ್ಪತ್ರೆ ಹಾಗೂ ತಜ್ಞರ ಸಂಖ್ಯೆ ಕಡಿಮೆಯಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ಇರೋ ವ್ಯವಸ್ಥೆ ಮೈಸೂರಲ್ಲೂ ಇದೆ-ಡಾ.ಸಿ.ಎನ್ ಮಂಜುನಾಥ್