ಭಾರತಕ್ಕೆ ಮಂಕಿಪಾಕ್ಸ್​ ಎಂಟ್ರಿ, ಕೇರಳದಲ್ಲಿ ಹೈ ಅಲರ್ಟ್: ಈ ವೈರಾಣು​​ ಜನ್ಮರಹಸ್ಯವೇನು ಗೊತ್ತಾ?

ಭಾರತಕ್ಕೆ ಮಂಕಿಪಾಕ್ಸ್​ ಎಂಟ್ರಿ.. ಕೇರಳದಲ್ಲಿ ಹೈ ಅಲರ್ಟ್.! ಹಿಂದೆ 8 ಬಾರಿ ಮಂಕಿಪಾಕ್ಸ್ ಸ್ಫೋಟ.. ಕಂಟ್ರೋಲ್​ ಆಗಿದ್ದು ಹೇಗೆ​..? ಮಂಕಿಪಾಕ್ಸ್​ ವೈರಾಣು​​ ಜನ್ಮರಹಸ್ಯ ಏನು ಗೊತ್ತಾ..? ಇದೇ ಈ ಹೊತ್ತಿನ ಇಂಟ್ರಸ್ಟಿಂಗ್​ ಎಪಿಸೋಡ್​ ಮರಣದ ಮಂಕಿಪಾಕ್ಸ್​​​​..!
 

First Published Jul 18, 2022, 10:12 PM IST | Last Updated Jul 18, 2022, 10:13 PM IST

ನವದೆಹಲಿ (ಜುಲೈ 18): ಕೊರೋನಾವೈರಸ್‌ ಬಳಿಕ ಭಾರತದಲ್ಲಿ ಈಗ ಮಂಕಿಪಾಕ್ಸ್ ವೈರಸ್‌ ಆತಂಕ ಹುಟ್ಟಿಸಿದೆ. ಈಗಾಗಲೇ ವಿಶ್ವದ ಎಲ್ಲೆಡೆ ಮಂಕಿಪಾಕ್ಸ್ ತನ್ನ ಭೀತಿ ಹುಟ್ಟಿಸಿದ್ದರೂ, ಈವರೆಗೂ ಭಾರತದಲ್ಲಿ ಅದರ ಎಂಟ್ರಿ ಆಗಿರಲಿಲ್ಲ. ಆದರೆ, ಜುಲೈ 14 ರಂದು ಕೇರಳದಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದರೆ, ಅದೇ ರಾಜ್ಯದಲ್ಲಿ ಸೋಮವಾರ 2ನೇ ಪ್ರಕರಣ ವರದಿಯಾಗಿದೆ.

ಇದರ ಬೆನ್ನಲ್ಲಿಯೇ ಕೇರಳದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ವಿದೇಶದಿಂದ ಬರುವ ಎಲ್ಲಾ ಪ್ರಜೆಗಳನ್ನು ತಪಾಸಣೆ ಮಾಡಲಾಗುತ್ತಿದೆ. ಮಂಕಿಪಾಕ್ಸ್ ಸೂಚನೆ ಇರುವ ವ್ಯಕ್ತಿಗಳಿಗೆ ಪರೀಕ್ಷೆ ನಡೆಸಿದ ಅದರ ಸ್ಯಾಂಪಲ್‌ ಅನ್ನು ಪುಣೆಯಲ್ಲಿರುವ ವೈರಾಲಜಿ ಸಂಸ್ಥೆಗೆ ಕಳಿಸಿಕೊಡಲಾಗುತ್ತಿದೆ.

ಇದನ್ನೂ ಓದಿ: Monkey Pox in Kerala ಕೇರಳದಲ್ಲಿ 2ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ!

ಹಾಗಾದರೆ, ಈ ಮಂಕಿಪಾಕ್ಸ್‌ ಎನ್ನುವ ವೈರಸ್‌ ಹುಟ್ಟಿದ್ದೆಲ್ಲಿ. ಇದರ ಜನ್ಮರಹಸ್ಯವೇನು? ಈ ವೈರಸ್‌ ಎಷ್ಟು ಅಪಾಯಕಾರಿ ಎನ್ನುವ ಕುತೂಹಲ ನಿಮ್ಮಲ್ಲೂ ಇರಬಹುದು. ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ವೈರಸ್‌ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಹೇಳಿರುವ ಕಾರಣ, ಜಾಗ್ರತೆ ಅಗತ್ಯವಾಗಿದೆ.

Video Top Stories