Asianet Suvarna News Asianet Suvarna News

Monkey Pox in Kerala ಕೇರಳದಲ್ಲಿ 2ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ!

ಎರಡು ದಿನಗಳ ಹಿಂದೆ ಕೇರಳದಲ್ಲಿಯೇ ದೇಶದ ಮೊಟ್ಟಮೊದಲ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿತ್ತು. ಇದರ ಬೆನ್ನಲ್ಲಿಯೇ ರಾಜ್ಯದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿತ್ತು. ಈಗ ಕಣ್ಣೂರಿನಲ್ಲಿ 2ನೇ ಅಧಿಕೃತ ಪ್ರಕರಣದ ಪತ್ತೆಯಾಗಿದೆ.

The second positive case of Monkey Pox in Kerala has been confirmed in Kannur District san
Author
Bengaluru, First Published Jul 18, 2022, 4:23 PM IST

ತಿರುವನಂತಪುರ (ಜುಲೈ 18): ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ವೈರಸ್ ಪ್ರಕರಣ ವರದಿಯಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೋಮವಾರ ತಿಳಿಸಿದ್ದಾರೆ. ಮಂಕಿಪಾಕ್ಸ್ ಹರಡುವುದನ್ನು ತಡೆಗಟ್ಟಲು ಕೇರಳ ಸರ್ಕಾರವು ಎಚ್ಚರಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ, ದಕ್ಷಿಣದ ರಾಜ್ಯವು ದೇಶದ ಮೊದಲ ಅಪರೂಪದ ವೈರಸ್ ಸೋಂಕಿನ ಪ್ರಕರಣವನ್ನು ವರದಿ ಮಾಡಿದ ಒಂದು ದಿನದ ನಂತರ ಐದು ಜಿಲ್ಲೆಗಳಿಗೆ ವಿಶೇಷ ಎಚ್ಚರಿಕೆಗಳನ್ನು ನೀಡಿದೆ. ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾರ್ಜ್, ಶಾರ್ಜಾ-ತಿರುವನಂತಪುರಂ ಇಂಡಿಗೋ ವಿಮಾನದಲ್ಲಿ ಸೋಂಕಿತ ವ್ಯಕ್ತಿಯ ಸಹಪ್ರಯಾಣಿಕರು ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ ಮತ್ತು ಕೊಟ್ಟಾಯಂನಿಂದ ಬಂದಿದ್ದರಿಂದ ಐದು ಜಿಲ್ಲೆಗಳಿಗೆ ವಿಶೇಷ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು. ಈ ವಿಮಾನ ಜುಲೈ 12 ರಂದು ಕೇರಳಕ್ಕೆ ಬಂದಿತ್ತು.ಚಿಕನ್ ಗುನ್ಯಾ ಅಥವಾ ಅಂತಹುದೇ ರೋಗಲಕ್ಷಣಗಳನ್ನು ಹೊಂದಿರುವವರನ್ನು ಆರೋಗ್ಯ ಇಲಾಖೆ ಗಮನಿಸುತ್ತಿದೆ, ಅವರಿಗೆ ಮಂಕಿಪಾಕ್ಸ್‌ ಇಲ್ಲ ಎಂದು ಖಚಿತಪಡಿಸಿಕೊಳ್ಳುತ್ತಿದೆ ಎಂದು ಸಚಿವರು ಹೇಳಿದರು. ದುಬೈನಿಂದ ಬಂದಿದ್ದ 31 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಸ್‌ ಪತ್ತೆಯಾಗಿದೆ. ಇತ್ತೀಚೆಗ ಆತ ದುಬೈನಿಂದ ಕೇರಳಕ್ಕೆ ಹಿಂತಿರುಗಿದ್ದ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.

ಬೇರೆ ಯಾರಾದರೂ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ರಾಂಡಮ್‌ ಮಾದರಿಗಳನ್ನು ಪರೀಕ್ಷಿಸಲಾಗುವುದು ಎಂದು ಅವರು ಹೇಳಿದರು. "ವಿಮಾನ ನಿಲ್ದಾಣದಲ್ಲಿ ಕಣ್ಗಾವಲು ತೀವ್ರಗೊಳಿಸಲಾಗಿದೆ, ಅದರ ಭಾಗವಾಗಿ, ಆರೋಗ್ಯ ಇಲಾಖೆಯು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತದೆ. ಯಾರಿಗಾದರೂ ರೋಗಲಕ್ಷಣಗಳು ಕಂಡುಬಂದರೆ, ಅವರನ್ನು ಪ್ರತ್ಯೇಕಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಅವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ, ' ಎಂದು ಸಚಿವರು (health minister veena george) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಕಿಪಾಕ್ಸ್‌ ತಡೆಗೆ ಸಮಗ್ರ ರೀತಿಯಲ್ಲಿ ತರಬೇತಿ ನೀಡಲಾಗುತ್ತಿದ್ದು, ಇದುವರೆಗೆ 1,200 ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದರು.

31 ವರ್ಷದ ವ್ಯಕ್ತಿಯಲ್ಲಿ ವೈರಸ್‌ (Monkeypox Virus) ಪತ್ತೆಯಾಗಿರುವ ಕಾರಣ, ಅವರಿಗೆ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ರೋಗಿಯು ಮೇ 13 ರಂದು ಕಣ್ಣೂರಿಗೆ ಮರಳಿದ್ದರು ಮತ್ತು ನಂತರ ರೋಗಲಕ್ಷಣಗಳು ಕಾಣಿಸಿಕೊಂಡವು. 31 ವರ್ಷದ ರೋಗಿಯ ಎಲ್ಲಾ ನಿಕಟ ಸಂಪರ್ಕಗಳನ್ನು ಪತ್ತೆ ಹಚ್ಚಿ ನಿಗಾವಹಿಸಲಾಗುತ್ತಿದೆ. ಜುಲೈ 14 ರಂದು ಕೊಲ್ಲಂ ಜಿಲ್ಲೆಯಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿತ್ತು.

ಮೊದಲ ಪ್ರಕರಣ ಪತ್ತೆಯಾದಾಗ, ಕೇಂದ್ರ ಆರೋಗ್ಯ ಸಚಿವಾಲಯವು (Union Health Ministry) ಮಂಕಿಪಾಕ್ಸ್‌ಅನ್ನು ನಿರ್ವಹಿಸುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಅಂತರಾಷ್ಟ್ರೀಯ ಪ್ರಯಾಣಿಕರು ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು, ಸತ್ತ ಅಥವಾ ಜೀವಂತ ಕಾಡು ಪ್ರಾಣಿಗಳು ಮತ್ತು ಇತರರೊಂದಿಗೆ ಸಂಪರ್ಕವನ್ನು ತಪ್ಪಿಸಬೇಕು.

ಇದನ್ನೂ ಓದಿ: ಜಗತ್ತಿನಾದ್ಯಂತ ಮಂಕಿಪಾಕ್ಸ್‌ ಭೀತಿ, ಬೆಲ್ಜಿಯಂನಲ್ಲಿ 21 ದಿನ ಕ್ವಾರಂಟೈನ್ ಕಡ್ಡಾಯ

ಮಾರ್ಗಸೂಚಿಗಳು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಮಾಂಸವನ್ನು ತಿನ್ನುವುದು ಅಥವಾ ತಯಾರಿಸುವುದು ಅಥವಾ ಆಫ್ರಿಕಾದದ ಕಾಡು ಪ್ರಾಣಿಗಳಿಂದ ಪಡೆದ ಕ್ರೀಮ್‌ಗಳು ಮತ್ತು ಲೋಷನ್‌ಗಳಂತಹ ಉತ್ಪನ್ನಗಳನ್ನು ಬಳಸದಂತೆ ಸಲಹೆ ನೀಡುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವರ್ಷದ ಆರಂಭದಿಂದ 60 ದೇಶಗಳಲ್ಲಿ 6,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಮತ್ತು ಮೂರು ಸಾವುಗಳು ವರದಿಯಾಗಿವೆ. ಕಣ್ಗಾವಲು ವಿಸ್ತರಿಸಿದಂತೆ ಹೆಚ್ಚಿನ ಪ್ರಕರಣಗಳನ್ನು ನಿರೀಕ್ಷಿಸಬಹುದು ಎಂದು ಅದು ಹೇಳಿದೆ.

ಇದನ್ನೂ ಓದಿ:  ಲೈಂಗಿಕ ಸಂಪರ್ಕದ ಮೂಲಕವೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್ !

ಮಂಕಿಪಾಕ್ಸ್ ಒಂದು ವೈರಲ್ ಝೂನೋಸಿಸ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಸಿಡುಬು ರೋಗಿಗಳಲ್ಲಿ ಈ ಹಿಂದೆ ಕಂಡುಬರುವ ರೋಗಲಕ್ಷಣಗಳನ್ನು ಹೋಲುತ್ತದೆ, ಆದರೂ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಇದು ಪ್ರಾಯೋಗಿಕವಾಗಿ ಕಡಿಮೆ ತೀವ್ರವಾಗಿರುತ್ತದೆ . 1980 ರಲ್ಲಿ ಸಿಡುಬಿನ ನಿರ್ಮೂಲನೆ ಮತ್ತು ಸಿಡುಬು ವ್ಯಾಕ್ಸಿನೇಷನ್ ಅನ್ನು ನಿಲ್ಲಿಸಿತ್ತು. ಆ ಬಳಿಕ ಮಂಕಿಪಾಕ್ಸ್, ಸಾರ್ವಜನಿಕ ಆರೋಗ್ಯಕ್ಕೆ ಪ್ರಮುಖವಾದ ಆರ್ಥೋಪಾಕ್ಸ್ವೈರಸ್ ಆಗಿ ಹೊರಹೊಮ್ಮಿದೆ.

ಮಂಗಳೂರು ಮೂಲಕ ಕೇರಳಕ್ಕೆ ತೆರಳಿದ್ದ ಯುವಕ: ಕೇರಳದ 2ನೇ ಮಂಕಿಪಾಕ್ಸ್‌ ಪ್ರಕರಣದ ವ್ಯಕ್ತಿ, ಮಂಗಳೂರು ಮೂಲಕ ಕೇರಳಕ್ಕೆ ತೆರಳಿದ್ದ ಎಂದು ಗೊತ್ತಾಗಿದೆ. ದುಬೈನಿಂದ ಮಂಗಳೂರು ಏರ್ ಪೋರ್ಟ್ ಗೆ ಆಗಮಿಸಿದ್ದ ಯುವಕ. ಬಳಿಕ ತನ್ನ ಊರಾದ ಕಣ್ಣೂರಿಗೆ ತೆರಳಿದ್ದ. ಕಳೆದ ಜುಲೈ 13ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಈತ ಬಳಿಕ ನೇರವಾಗಿ ಕಣ್ಣೂರಿಗೆ ತೆರಳಿದ್ದ. ಬಳಿಕ ರೋಗ ಲಕ್ಷಣ ಪತ್ತೆಯಾಗಿದ್ದರಿಂದ ಕಣ್ಣೂರು ಮೆಡಿಕಲ್ ಕಾಲೇಜಿನಲ್ಲಿ ತಪಾಸಣೆ ನಡೆಸಲಾಗಿತ್ತು. ಪುಣೆಯ ವೈರಾಲಜಿ ಲ್ಯಾಬ್ ಗೆ ಕಳುಹಿಸಿದ ಮಾದರಿಯಲ್ಲಿ ಮಂಕಿಪಾಕ್ಸ್ ವೈರಸ್‌ ಪತ್ತೆಯಾಗಿದೆ. ದುಬೈನಿಂದ ಆಗಮಿಸಿದ ಈ ವಿಮಾನದಲ್ಲಿ 191 ಪ್ರಯಾಣಿಕರಿದ್ದರು. ಇದರಲ್ಲಿ ದ.ಕ ಜಿಲ್ಲೆಯ 15, ಉಡುಪಿಯ 6, ಕಾಸರಗೋಡು 13, ಕಣ್ಣೂರಿನ 1 ಪ್ರಯಾಣಿಕರು ಇದ್ದರು. ರೋಗ ಲಕ್ಷಣ ಇದ್ದಲ್ಲಿ ತಕ್ಷಣ ಆರೋಗ್ಯ ಇಲಾಖೆ ಅಥವಾ ಆಸ್ಪತ್ರೆಗೆ ದಾಖಲಾಗಲು ಸೂಚನೆ ನೀಡಲಾಗಿದೆ.

Follow Us:
Download App:
  • android
  • ios