ಬ್ಲ್ಯಾಕ್ ಫಂಗಸ್‌ಗೆ ಕಾರಣ ಅಶುದ್ಧ ಆಕ್ಸಿಜನ್, ಮಾಸ್ಕ್ ಸರಿಯಾಗಿ ಬಳಸದಿದ್ದರೂ ಅಪಾಯ!
* ಹೆಚ್ಚುತ್ತಿರುವ ಬ್ಲ್ಯಾಕ್ ಫಂಗಸ್ ಕಾಟಕ್ಕೆ ಕಾರಣವೇನು?
* ಅಶುದ್ಧ ಆಕ್ಸಿಜನ್‌ನಿಂದ ಬ್ಲ್ಯಾಕ್ ಫಂಗಸ್ ಶುರು
* ತಜ್ಞರ ಸಮಿತಿಯ ಡಾ.ಸಂಪತ್ ಚಂದ್ರ ಪ್ರಸಾದ್ ರಾವ್ ಅಭಿಪ್ರಾಯ
* ರೋಗ ಹರಡುವಿಕೆಯ ಮೂಲವನ್ನು ಮೊದಲು ಪತ್ತೆ ಮಾಡಬೇಕು
ಬೆಂಗಳೂರು(ಮೇ 25) ಹೆಚ್ಚುತ್ತಿರುವ ಬ್ಲ್ಯಾಕ್ ಫಂಗಸ್ ಕಾಟಕ್ಕೆ ಕಾರಣ ಏನು? ಯಾವ ಎಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದನ್ನು ತಜ್ಞರ ಸಮಿತಿಯ ಡಾ.ಸಂಪತ್ ಚಂದ್ರ ಪ್ರಸಾದ್ ರಾವ್ ತಿಳಿಸಿಕೊಟ್ಟಿದ್ದಾರೆ.
ಬ್ಲ್ಯಾಕ್ ಫಂಗಸ್ ತಡೆಯುವ ಸರಳ ವಿಧಾನಗಳು
ಅಶುದ್ಧ ಆಕ್ಸಿಜನ್ ಕಾರಣದಿಂದ ಬ್ಲ್ಯಾಕ್ ಫಂಗಸ್ ಬಂದಿರುವ ಸಾಧ್ಯತೆ ಇದೆ. ಕೈಗಾರಿಕೆಗಳಿಗೆ ಬಳಸುವ ಆಮ್ಲಜನಕ ರೋಗಿಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಇನ್ನೊಂದು ಕಾರಣ. ಇದರ ಬಗ್ಗೆ ಇನ್ನು ಹೆಚ್ಚಿನ ಅಧ್ಯಯನ ಅಗತ್ಯ ಇದೆ ಎಂದು ತಿಳಿಸಿದ್ದಾರೆ.