Asianet Suvarna News Asianet Suvarna News

ಆಗಾಗ ಹೃದಯ ತಪಾಸಣೆ ಮಾಡಿಕೊಳ್ಳೋದ್ರಿಂದ ಹಾರ್ಟ್‌ಅಟ್ಯಾಕ್ ತಪ್ಪಿಸಬಹುದಾ?

ಇತ್ತೀಚಿನ ದಿನಗಳಲ್ಲಿ ಹಾರ್ಟ್‌ ಅಟ್ಯಾಕ್ ಎಂಬುದು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಹೆಲ್ದೀಯಾಗಿದ್ದಾರೆ ಎಂದು ಅಂದ್ಕೊಂಡವರೇ ಕುಸಿದುಬಿದ್ದು ಸಾವನ್ನಪ್ಪುತ್ತಾರೆ.ಹಾಗಿದ್ರೆ ಹೃದಯಾಘಾತವಾಗದಂತೆ ಏನು ಮಾಡಬಹುದು ? ಈ ಬಗ್ಗೆ ತಜ್ಞರು ಏನ್ ಹೇಳ್ತಾರೆ?

ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಮಕ್ಕಳು, ಯುವಕರು, ವೃದ್ಧರು ಎನ್ನದೆ ಎಲ್ಲರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಡ್ಯಾನ್ಸ್ ಕ್ಲಾಸ್, ಗ್ರೌಂಡ್, ಮದುವೆ ಮನೆ ಹೀಗೆ ಎಲ್ಲೆಂದರಲ್ಲಿ ಜನರು ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಹಾರ್ಟ್‌ ಅಟ್ಯಾಕ್ ಆಗುವ ಮೊದಲೇ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಒಳ್ಳೆಯದು. ಇಸಿಜಿ, ಎಕೋ ಟೆಸ್ಟ್‌, ಟ್ರೆಡ್‌ಮಿಲ್ ಇಸಿಜಿಯನ್ನು ಮಾಡಿಸಿಕೊಳ್ಳೋದು ಉತ್ತಮ ಎನ್ನುತ್ತಾರೆ ತಜ್ಞರು. ಹಾಗೆಯೇ ಧೂಮಪಾನ ಮಾಡುವವರಲ್ಲಿ, ಈಗಾಗ್ಲೇ ಸಕ್ಕರೆ ಕಾಯಿಲೆ ಇರುವವರಿಗೆ, ಅನುವಂಶಿಕವಾಗಿ ಹೃದಯಾಘಾತದ ಹಿನ್ನಲೆಯಿರುವವರಿಗೆ ಹಾರ್ಟ್‌ ಅಟ್ಯಾಕ್ ಸಾಧ್ಯತೆ ಹೆಚ್ಚಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಹೆಚ್ತಿದೆ ಸಡನ್‌ ಹಾರ್ಟ್‌ಅಟ್ಯಾಕ್ ಕೇಸ್‌, ದಿನಕ್ಕೆ 11 ನಿಮಿಷ ವಾಕ್‌ ಮಾಡಿ ಜೀವ ಉಳಿಸಿಕೊಳ್ಬೋದಾ?

Video Top Stories