Asianet Suvarna News Asianet Suvarna News

ಗರ್ಭಿಣಿಯರು, ಬಾಣಂತಿಯರು ಯಾಕಾಗಿ ವ್ಯಾಕ್ಸಿನ್ ಪಡೆಯಬಾರದು..?

ಗರ್ಭಿಣಿಯರು, ಬಾಣಂತಿಯರು ವ್ಯಾಕ್ಸಿನ್ ಪಡೆಯುವ ಹಾಗಿಲ್ವಾ..? ಸಮಸ್ಯೆಯಾಗುತ್ತಾ..? ಹಾಗಾದರೆ ಕೊರೊನಾದಿಂದ ಬಚಾವಾಗೋದು ಹೇಗೆ.? ಎಂಬ ಪ್ರಶ್ನೆ ಜನರಲ್ಲಿದೆ.

ಬೆಂಗಳೂರು (ಮೇ. 12): ಗರ್ಭಿಣಿಯರು, ಬಾಣಂತಿಯರು ವ್ಯಾಕ್ಸಿನ್ ಪಡೆಯುವ ಹಾಗಿಲ್ವಾ..? ಸಮಸ್ಯೆಯಾಗುತ್ತಾ..? ಹಾಗಾದರೆ ಕೊರೊನಾದಿಂದ ಬಚಾವಾಗೋದು ಹೇಗೆ.? ಎಂಬ ಪ್ರಶ್ನೆ ಜನರಲ್ಲಿದೆ. ಈ ಗೊಂದಲದ ಬಗ್ಗೆ ಡಾ. ವಿಶಾಲ್ ರಾವ್‌ ಅವರನ್ನು ಪ್ರಶ್ನಿಸಿದಾಗ, ಗರ್ಭಿಣಿಯರು, ಬಾಣಂತಿಯರಿಗೆ ಲಸಿಕೆ ಕೊಡಲಾಗುವುದಿಲ್ಲ. ಇದರಲ್ಲಿ ವೈರಸ್‌ನ ಕಂಪೊನೆಂಟ್ ಇರುವ ಕಾರಣ ಅದು ಮಗುವಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಗೊತ್ತಿಲ್ಲ. ಸುರಕ್ಷತೆ ದೃಷ್ಟಿಯಿಂದ ಈ ವರ್ಗವನ್ನು ಹೊರಗಿಡಲಾಗಿದೆ. ಇದರ ಬಗ್ಗೆ ಸಂಶೋಧನೆ ಮುಂದುವರೆದಿದೆ. ಅಲ್ಲಿಯವರೆಗೆ ನೀವು ಮಾಸ್ಕ್, ಅಂತರ ಕಾಯ್ದುಕೊಂಡು ಸುರಕ್ಷಿತರಾಗಿರಿ ಎಂದು ಸಲಹೆ ನೀಡಿದ್ದಾರೆ. 

2 ನೇ ಡೋಸ್ ಸಿಕ್ತಾಯಿಲ್ಲ ಅಂತ ಭಯಬೇಡ, ಅಂತರ ಹೆಚ್ಚಾದರೆ ಸಮಸ್ಯೆಯಿಲ್ಲ

Video Top Stories