‘ಜಯನಗರ ಸಂಭ್ರಮ’ ಫುಡ್ ಫೆಸ್ಟಿವಲ್‌ಗೆ ಚಾಲನೆ: ಕನ್ನಡ ಪ್ರಭ - ಸುವರ್ಣ ನ್ಯೂಸ್ ಸಹಯೋಗ

ಏಷಿಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪ್ರತೀ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಅತಿ ದೊಡ್ಡ ಫುಡ್, ಫನ್ ಮತ್ತು ಫ್ಯಾಷನ್ ಫೆಸ್ಟಿವಲ್ ಜಯನಗರದಲ್ಲಿ ಆಯೋಜಿಸುತ್ತಿದೆ. MES ಗ್ರೌಂಡ್ ನಲ್ಲಿ ಜಯನಗರ ಸಂಭ್ರಮ ನಡೆಯುತ್ತಿದೆ.
 

Share this Video
  • FB
  • Linkdin
  • Whatsapp

ಎಲ್ಲಿ ನೋಡಿದರಲ್ಲಿ ಬಗೆ ಬಗೆಯ ಖಾದ್ಯಗಳು, ಬಿಸಿ ಬಿಸಿ ಎಣ್ಣೆಯಲ್ಲಿ ಅದ್ದಿ ತೆಗೆದ ಪೊಟ್ಯಾಟೋ ಟ್ವಿಸ್ಟರ್, ಸಂಜೆಯ ಬಿಸಿ ಟೀ ಜೊತೆ ಮೆಲ್ಲಲು ತಯಾರಾದ ಬಿಸಿ ಬಿಸಿ ಪಡ್ಡು, ಬಾಯಲ್ಲಿಟ್ಟರೆ ಕರಗುವ ದಾವಣಗೆರೆ ಬೆಣ್ಣೆ ದೋಸೆ.. ಆಹಾ... ಒಂದಲ್ಲ ಎರಡಲ್ಲ ಇಪ್ಪತ್ತಕ್ಕೂ ಅಧಿಕ ಫುಡ್ ಸ್ಟಾಲ್ ಗಳು. ಇವೆಲ್ಲಾ ಕಂಡು ಬಂದಿದ್ದು ಜಯನಗರದ MES ಗ್ರೌಂಡ್‌ನಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ಆಯೋಜಿಸಿರುವ ಜಯನಗರ ಉತ್ಸವದಲ್ಲಿ(Jayanagar festival). ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪ್ರತೀ ವರ್ಷದಂತೆ ಈ ವರ್ಷವೂ ಬೆಂಗಳೂರಿನ(Bengaluru) ಅತಿ ದೊಡ್ಡ ಫುಡ್, ಫನ್ ಮತ್ತು ಫ್ಯಾಷನ್ ಫೆಸ್ಟಿವಲ್ ಜಯನಗರದಲ್ಲಿ ಆಯೋಜಿಸಿವೆ. ಮೂರು ದಿನ ನಡೆಯಲಿರುವ ಜಯನಗರ ಸಂಭ್ರಮಕ್ಕೆ ಅದ್ದೂರಿಯಾಗಿ ಚಾಲನೆ ದೊರಕಿತು. ನಮೋ ಭೂತಾತ್ಮ -2 ಚಿತ್ರದ ನಾಯಕ ಕೋಮಲ್, ಜಯನಗರ ಶಾಸಕ ಸಿ.ಕೆ ರಾಮಮೂರ್ತಿ, ಸ್ಥಳೀಯ ಕಾರ್ಪೋರೇಟರ್ ಸೋಮಶೇಖರ್ ಹಾಗೂ ಇನ್ನಿತರ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಇದನ್ನೂ ವೀಕ್ಷಿಸಿ:  ಗಾಣದಿಂದ ಎಣ್ಣೆ ತಯಾರಿಕೆ: ಕೊಪ್ಪಳದ ಸಾಮಾನ್ಯ ಮಹಿಳೆ ಉದ್ಯಮಿಯಾಗಿದ್ದು ಹೇಗೆ ?

Related Video