Asianet Suvarna News Asianet Suvarna News

ಗಾಣದಿಂದ ಎಣ್ಣೆ ತಯಾರಿಕೆ: ಕೊಪ್ಪಳದ ಸಾಮಾನ್ಯ ಮಹಿಳೆ ಉದ್ಯಮಿಯಾಗಿದ್ದು ಹೇಗೆ ?

ಯಶ್ವಸಿ ಉದ್ಯಮಿ ಕೊಪ್ಪಳದ ಸುಮಾ ಮಲ್ಲಿಕಾರ್ಜುನ ಡಾಣಿ
ಶೇಂಗಾ,ಕುಸುಬಿ,ಸೂರ್ಯಕಾಂತಿ, ಕೊಬ್ಬರಿ ಇತರ ಎಣ್ಣೆ
ರಾಜ್ಯದ ನಾನಾ ಭಾಗಗಳಲ್ಲಿ ಗಾಣದ ಎಣ್ಣೆಗೆ ಹೆಚ್ಚಿದ ಬೇಡಿಕೆ

ಕೊಪ್ಪಳ: ಹಿಂದೆ ಒಂದು ಕಾಲವಿತ್ತು ನಮ್ಮ ಹಿರಿಯರು ಗಾಣದಿಂದ ತೆಗೆದ ಎಣ್ಣೆಯನ್ನೇ(oil) ಅಡುಗೆಗೆ ಉಪಯೋಗಿಸುತ್ತಿದ್ದರು. ಆದರೆ ಕಾಲಕಳೆದಂತೆ ಆಧುನಿಕತೆಯ ಭರಾಟೆಯಲ್ಲಿ ಗಾಣಗಳು ಮಾಯವಾದವು.‌ ಆದರೆ ಇದೀಗ ಮತ್ತೇ ಗಾಣದಿಂದ ಎಣ್ಣೆ ತೆಗೆಯುವ ಉದ್ಯಮಗಳು ಆರಂಭವಾಗುತ್ತಿವೆ.‌ ಇಂತಹ ಗಾಣದಿಂದ ಎಣ್ಣೆ ತೆಗೆಯುವ ಉದ್ಯಮವನ್ನು ಸ್ಥಾಪಿಸುವ ಮೂಲಕ ಮಹಿಳೆಯೊಬ್ಬರು ಯಶಸ್ವಿಯಾಗಿದ್ದಾರೆ. ಆ ಯಶ್ವಸಿ ಉದ್ಯಮಿ ಕೊಪ್ಪಳದ ಸುಮಾ ಮಲ್ಲಿಕಾರ್ಜುನ ಡಾಣಿ(Suma Mallikarjuna Dani). ಇವರು ಡಾಣಿಸ್ ಆರ್ಗಾನಿಕ್ಸ್ ಎನ್ನುವ ಸ್ಟಾರ್ಟಪ್ ಆರಂಭಿಸುವ ಮೂಲಕ ಇದೀಗ ಯಶಸ್ವಿ ಮಹಿಳಾ ಉದ್ಯಮಿ ಎನಿಸಿಕೊಂಡಿದ್ದಾರೆ.‌ ಹೌದು ಸುಮಾ ಅವರದ್ದು ಮೂಲತಃ ಶೇಂಗಾ ವ್ಯಾಪಾರಸ್ಥರ ಕುಟುಂಬ. ಆದರೆ ಕೊವೀಡ್ ಸಮಯದಲ್ಲಿ ಇವರಿಗೆ ವ್ಯಾಪಾರ ಸಂಪೂರ್ಣವಾಗಿ ನಿಂತುಹೋಯಿತು. ಆಗ ಅವರಿಗೆ ಹೊಳೆದದ್ದೇ ಈ ಗಾಣದಿಂದ ಎಣ್ಣೆ ತೆಗೆಯುವ ಉದ್ಯಮ. ಈ ಹಿನ್ನಲೆಯಲ್ಲಿ ಸುಮಾ ಡಾಣಿ ಅವರು 2020ರ ಕೊರೊನಾ(Corona) ಸಮಯದಲ್ಲಿ 3 ಲಕ್ಷ ಬಂಡವಾಳದೊಂದಿಗೆ ಡಾಣಿ ಆರ್ಗನಿಕ್ಸ್ ಉದ್ಯಮವನ್ನ ಆರಂಭಿಸಿದರು.ಇನ್ನು ಇವರು ಗಾಣದಿಂದ ಶೇಂಗಾ, ಕುಸುಬಿ, ಸೂರ್ಯಕಾಂತಿ, ಸಾಸಿವೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಯನ್ನು ತೆಗೆದು, ನೇರವಾಗಿ ಗ್ರಾಹಕರೊಗೆ ತಲುಪಿಸುತ್ತಾರೆ.

ಇನ್ನು‌ ಹೊರಗಡೆ ಸಿಗುವ ಶೇಂಗಾ ಎಣ್ಣೆಯಲ್ಲಿ(Peanut oil) ಹೊರಗಡೆ ಎಣ್ಣೆಗೆ ಫೇರಾಫಿನ್ ಆಯಿಲ್ ಮಿಶ್ರಣ ಮಾಡುತ್ತಾರೆ. ಜೊತೆಗೆ ಪ್ರತಿ ಲೀಟರ್ ಎಣ್ಣೆ ಹೊರಗಡೆ  150 ರೂಪಾಯಿಗೆ ಸಿಗುತ್ತದೆ. ಆದರೆ ಡಾಣಿ ಆರ್ಗನಿಕ್ಸ್ ನಲ್ಲಿ ‌275 ರೂಪಾಯಿ ಗೆ ಕೆಜಿ ಶೇಂಗಾ ಎಣ್ಣೆ ಸಿಗುತ್ತದೆ.‌ ಇನ್ನು 3 ಕೆಜಿ ಶೇಂಗಾವನ್ನು ಗಾಣಕ್ಕೆ ಹಾಕಿದರೆ  ಅದರಿಂದ ಒಂದು ಕೆಜಿ ಎಣ್ಣೆ ಮಾತ್ರ ಬರುತ್ತದೆ. ಮೊದಲು ಇವ್ರಿಗೆ ಕೇವಲ ಕೊಪ್ಪಳದಲ್ಲಿ ಮಾತ್ರ ಮಾರುಕಟ್ಟೆ ಇತ್ತು.‌ಆದರೆ ಇದೀಗ  ಕೊಪ್ಪಳ,ಬೆಂಗಳೂರು, ಬಳ್ಳಾರಿ, ಹೊಸಪೇಟೆ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಇವರು ತಾವು ತಯಾರಿಸಿದ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಸ್ವಯಂ ಉದ್ಯೋಗದಲ್ಲಿ ಸಕ್ಸಸ್ ಆದ ಮಹಿಳೆ: ವರದಾನವಾದ ಕೇಂದ್ರ ಸರ್ಕಾರದ PMEGP ಸ್ಟಾರ್ಟ್ ಅಪ್ !

Video Top Stories