ರಂಜಾನ್ ಸ್ಪೆಷಲ್‌, ಆಹಾರ ಪ್ರಿಯರ ಸ್ವರ್ಗವಾದ ಫ್ರೇಜರ್ ಟೌನ್‌ನ ಫುಡ್ ಸ್ಟ್ರೀಟ್

ಬೆಂಗಳೂರಿನ ಫ್ರೇಜರ್ ಟೌನ್‌ನ ಮಸೀದಿ ರಸ್ತೆ ಸದ್ಯದ ಆಹಾರ ಪ್ರಿಯರ ಹಾಟ್ ಸ್ಪಾರ್ಟ್ ಆಗಿದೆ. ರಂಜಾನ್ ಪ್ರಯುಕ್ತ ನಾನಾ ರೀತಿಯ ವೆಜ್ ಹಾಗೂ ನಾನ್ ವೆಜ್ ಭಕ್ಷ್ಯಗಳನ್ನು ತಯಾರಿಸಲಾಗುತ್ತಿದ್ದು, ಫುಡ್ಡೀಗಳಂತೂ ಫುಲ್ ಖುಷಿಯಾಗಿದ್ದಾರೆ.

First Published Apr 7, 2023, 3:45 PM IST | Last Updated Apr 7, 2023, 3:48 PM IST

ರಂಜಾನ್ ಹಿನ್ನೆಲೆ ಫ್ರೇಜರ್ ಟೌನ್‌ನ ಪ್ರತಿಷ್ಠಿತ ಫುಡ್ ಸ್ಟ್ರೀಟ್ ಮಸೀದಿ ರಸ್ತೆ ಆಹಾರ ಪ್ರಿಯರ ಸ್ವರ್ಗವಾಗಿದೆ.. ಫ್ರೇಜರ್ ಟೌನ್‌ಗೆ ಕಾಲಿಟ್ಟ ತಕ್ಷಣ ಮಸಾಲೆಗಳ ಸುವಾಸನೆ ಮತ್ತು ಗ್ರಿಲ್‌ಗಳಿಂದ ಹೊಗೆಯಾಡುವ ದೃಶ್ಯಗಳು ಫುಡ್ಡೀಗಳನ್ನು ಸ್ವಾಗತಿಸುತ್ತಿವೆ. ರಸ್ತೆಯ ಎರಡು ಬದಿಗಳ ಅಂಗಡಿಗಳಲ್ಲಿ ವಿಭಿನ್ನ ರೀತಿಯ ವೆಜ್ ಹಾಗೂ ನಾನ್ ವೆಜ್ ಭಕ್ಷ್ಯಗಳ ಸಾಲು ಬಾಯಲ್ಲಿ ನೀರು ತರಿಸುತ್ತದೆ. ಬಿಸಿ ಬಿಸಿಯಾದ ಮಟನ್ ಕೀಮಾ ವಿವಿಧ ಬಗೆಯ ಸಮೋಸಾಗಳು, ಸುವಾಸನೆಯ ಬಿರಿಯಾನಿ, ರುಚಿಕರವಾದ ಕೇಕ್‌ಗಳು ಮತ್ತು ರಸಭರಿತವಾದ ಸ್ಟೀಕ್ಸ್  ಇವೆಲ್ಲವೂ ಸೇರಿ ಬೆಂಗಳೂರಿನ ಫ್ರೇಜರ್ ಟೌನ್‌ನ ಮಸೀದಿ ರಸ್ತೆ ಸದ್ಯದ ಆಹಾರ ಪ್ರಿಯರ ಹಾಟ್ ಸ್ಪಾರ್ಟ್ ಆಗಿದೆ.

ಬಿರಿಯಾನಿ, ಹಲೀಮ್ ಮತ್ತು ಇತರ ಹಬ್ಬದ ಭಕ್ಷ್ಯಗಳನ್ನು ರಂಜಾನ್‌ ಗಾಗಿ ಸಿದ್ಧಪಡಿಸಲಾಗಿದೆ. ಸಾಲು ಸಾಲು ಅಂಗಡಿಗಳಲ್ಲಿ ಕೆಂಡದ ಮೇಲೆ ಸುಡುವ ತಂದೂರಿ ಆಹಾರವನ್ನು (Food) ಸಾರ್ವಜನಿಕರು ಸಾಲು ಗಟ್ಟಿ ನಿಂತು ಸವಿಯುವ ದೃಶ್ಯ ಸರ್ವೆ ಸಮಾನ್ಯವಾಗಿದೆ. ಬೇಸಿಗೆ ಬಿಸಿ ತಣಿಸಲು ರುಚಿಕರ ಪಾನೀಯಗಳು, ವಿಶೇಷ ರುಚಿಯ (Taste) ಸಿಹಿ ತಿನಿಸಿಗಳು ಸಹ ಈ ಫುಡ್ ಸ್ಟ್ರೀಟ್ ನ ಹೈಲೆಟ್ಸ್ ಆಗಿದೆ.

ರಂಜಾನ್ ಉಪವಾಸ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ