Asianet Suvarna News Asianet Suvarna News

ಸೂರ್ಯಗ್ರಹಣದ ಬೆನ್ನಲ್ಲೇ ಚಂದ್ರಗ್ರಹಣ: 1000 ವರ್ಷಗಳ ನಂತರ ಮಹಾ ವಿಚಿತ್ರ- ಇದು ಅಪಾಯದ ಮುನ್ಸೂಚನೆಯೇ?

ಸಾವಿರ ವರ್ಷಗಳ ಬಳಿಕ ಒಂದೇ ಸಾಲಿನಲ್ಲಿ ಬಂದು  ನಿಲ್ಲುತ್ತಿವೆ ಗುರು, ಶುಕ್ರ, ಶನಿ, ಕುಜ ಗ್ರಹಗಳು.. ಸೂರ್ಯಗ್ರಹಣದ ಬೆನ್ನಲ್ಲೇ ಚಂದ್ರಗ್ರಹಣ. ಈ ನಭೋ ವಿಸ್ಮಯಗಳು ಸೃಷ್ಟಿಸೋ ಅಪಾಯ ಎಂಥದ್ದು? ಈ ಗ್ರಹಗತಿಗಳ ಲಾಭ ಯಾರಿಗೆ ಯಾವ ರೀತಿ ಇರಲಿದೆ? 

2022ರ ಈ ವರ್ಷ ಅನೇಕ ವಿಸ್ಮಯಗಳಿಗೆ ಕಾರಣವಾಗಿದೆ. ಅಂಥ ಮತ್ತೊಂದು ವಿಸ್ಮಯ ಈಗ ಗ್ರಹಕೂಟದಲ್ಲಿ ನಡೆಯಲಿದೆ. ಬರೋಬ್ಬರಿ 1000 ವರ್ಷಗಳ ಬಳಿಕ, ನಾಲ್ಕು ಗ್ರಹಗಳು ಒಂದೇ ನೇರಕ್ಕೆ ಬಂದು ನಿಲ್ಲಲಿವೆ. 

1,000 ವರ್ಷಗಳ ನಂತರ, ಏಪ್ರಿಲ್ ಕೊನೆಯ ವಾರದಲ್ಲಿ ಶುಕ್ರ, ಮಂಗಳ, ಗುರು ಮತ್ತು ಶನಿ(Saturn) ಈ ನಾಲ್ಕು ಗ್ರಹಗಳು ಸೂರ್ಯೋದಯಕ್ಕೆ ಒಂದು ಗಂಟೆ ಮೊದಲು ಆಕಾಶದ ಪೂರ್ವ ಭಾಗದಲ್ಲಿ ನೇರ ರೇಖೆಯಲ್ಲಿ ಜೋಡಿಸಿದಂತೆ ಕಾಣೋ ಅಪರೂಪದ ಮತ್ತು ವಿಶಿಷ್ಟ ಖಗೋಳ ಘಟನೆ ಘಟಿಸಿದೆ.

ಇದು ಖಗೋಳ ಶಾಸ್ತ್ರದಲ್ಲಾಗ್ತಾ ಇರೋ ಬದಲಾವಣೆಯಾದ್ರೆ, ಇನ್ನು ಜ್ಯೋತಿಷ ಶಾಸ್ತ್ರ(Astrology)ದಲ್ಲಿ ಮತ್ತೊಂದು ಬಗೆಯ ವಿಸ್ಮಯ ಘಟಿಸುತ್ತಿದೆ. ಅದೆಂದರೆ ಸೂರ್ಯ ಚಂದ್ರಾದಿ 9 ಗ್ರಹಗಳೂ ಏಪ್ರಿಲ್‌ನಲ್ಲಿ ಸಂಚಾರ ನಡೆಸಲಿವೆ. 

2022ರ ವರ್ಷದ ಮೊದಲ ಸೂರ್ಯಗ್ರಹಣ(Solar Eclipse) ಏಪ್ರಿಲ್‌ 30ರಂದು ಸಂಭವಿಸಲಿದೆ. ಈ ದಿನದ ಅಮಾವಾಸ್ಯೆಯನ್ನು  ಶನಿ ಅಮಾವಾಸ್ಯೆ, ಅಕ್ಷಯ ತದಿಗೆ ಅಮಾವಾಸ್ಯೆ ಅಂತೆಲ್ಲ ಕರೆಯುತ್ತಾರೆ.  ಮೇಷ ರಾಶಿಯಲ್ಲಿ ಘಟಿಸ್ತಾ ಇರೋ ಈ ಸೂರ್ಯಗ್ರಹಣ ಹನ್ನೆರಡು ರಾಶಿಗಳ ಮೇಲೂ ಅಗಾಧ ಪರಿಣಾಮ ಬೀರಲಿದೆ.  

Solar Eclipse 2022 Live : ಗ್ರಹಣದ ಈ ದಿನ ಶನಿ ಅಮಾವಾಸ್ಯೆ ಕೂಡಾ!

ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರವಾಗೋದಿಲ್ಲ, ಹಾಗಾಗಿ ಅದರ ಪ್ರಭಾವದ ಬಗ್ಗೆನೂ ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ ಅಂತಾರೆ ವಿಜ್ಞಾನಿಗಳು. ಹಾಗಿದ್ದೂ, ಗ್ರಹಣ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದರೂ ಅದರ ಎಫೆಕ್ಟ್ ಇದ್ದೇ ಇರುತ್ತೆ. ಹಾಗಾಗಿಯೇ ಎಚ್ಚರಿಕೆಯಿಂದ ಇರಬೇಕು ಅಂತಾರೆ  ಜ್ಯೋತಿಷ ಶಾಸ್ತ್ರಜ್ಞರು.. 

ಆದ್ರೆ, ಇದಕ್ಕಿಂತಾ ದೊಡ್ಡದೊಂದು ಬದಲಾವಣೆ ನಭೋಮಂಡಲದಲ್ಲಿ ಉಂಟಾಗ್ತಾ ಇದೆ.. ಅದರ ಪರಿಣಾಮ ಪ್ರತಿಯೊಬ್ಬರನ್ನು ಕಾಡಲಿದೆ ಅಂತಿದ್ದಾರೆ.. ಆ ಬದಲಾವಣೆ ಏನು? ಅದರ ಪರಿಣಾಮಗಳೇನು ನೋಡೋಣ.