Asianet Suvarna News Asianet Suvarna News

Solar Eclipse 2022 Live : ಗ್ರಹಣದ ಅವಧಿ, ಎಲ್ಲೆಲ್ಲಿ ಕಾಣಿಸುತ್ತದೆ? ಗರ್ಭಿಣಿಯರೇನು ಮಾಡಬೇಕು?

ಇಂದಿನ ಸೂರ್ಯ ಗ್ರಹಣದ ಕುರಿತ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ.

Know complete details about Solar Eclipse happening today skr
Author
Bangalore, First Published Apr 30, 2022, 10:55 AM IST

ಶನಿ ಅಮಾವಾಸ್ಯೆ
ಸೂರ್ಯ ಗ್ರಹಣದ ಇದೇ ದಿನ ಶನಿ ಅಮಾವಾಸ್ಯೆಯಾಗಿದೆ. ಹೌದು, ಇಂದು ಕೃಷ್ಣಪಕ್ಷದ ಕಡೆಯ ದಿನವಾಗಿದೆ. ಹಾಗಾಗಿ ಈ ದಿನ ಅಮಾವಾಸ್ಯೆ ಕೂಡಾ ಹೌದು. ಶನೀಶ್ವರ ಅಮಾವಾಸ್ಯೆಗೆ ನಮ್ಮ ಪುರಾಣಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಈ ದಿನ ಪಿತೃಗಳನ್ನು ಪೂಜಿಸುವ ಜೊತೆಗೆ ಶನಿಯನ್ನೂ ಪೂಜಿಸಬೇಕು. ಈ ದಿನದಂದು ಶನಿಯನ್ನು ಪೂಜಿಸುವುದರಿಂದ ಶುಭವಾಗಲಿದೆ. ಅಮಾವಾಸ್ಯೆಯ ತಿಥಿಯು ಏಪ್ರಿಲ್ 30 ರಂದು ತಡರಾತ್ರಿ 1.57 ನಿಮಿಷಗಳವರೆಗೆ ಇರುತ್ತದೆ. ಅದರ ನಂತರ, ವೈಶಾಖ ಶುಕ್ಲ ಪಕ್ಷದ ಪ್ರತಿಪದ ದಿನಾಂಕವನ್ನು ತೆಗೆದುಕೊಳ್ಳಲಾಗುತ್ತದೆ.  ಈ ದಿನದ ಸ್ನಾನ, ಶ್ರಾದ್ಧ ಇತ್ಯಾದಿ ಕಾರ್ಯಗಳಿಗೆ ವಿಶೇಷ ಮಹತ್ವವಿದೆ. 

ಸೂರ್ಯಗ್ರಹಣದ ಸಮಯ(Eclipse timings)
ಈ ವರ್ಷದ ಮೊದಲ ಸೂರ್ಯಗ್ರಹಣವು ಭಾರತದ ಸಮಯದ (Indian Time) ಪ್ರಕಾರ, ಏಪ್ರಿಲ್ 30 ರಂದು ಮಧ್ಯಾಹ್ನ 12:15 ಕ್ಕೆ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲೇ ಮೊದಲು ಗೋಚರವಾಗುವುದು. ನಂತರ ಎರಡು ಗಂಟೆಯ ಬಳಿಕ ಎಂದರೆ ಮಧ್ಯಾಹ್ನ 2:11ಕ್ಕೆ ಗ್ರಹಣ ಗರಿಷ್ಠ ಮಟ್ಟ ತಲುಪುತ್ತದೆ. ಸಂಜೆ 4:07 ರವರೆಗೆ ಇರುತ್ತದೆ. 

ಎಲ್ಲಿ ಗ್ರಹಣ ಕಾಣಿಸಿಕೊಳ್ಳುತ್ತದೆ(Where will the eclipse be visible from?)
ವರ್ಷದ ಮೊದಲ ಸೂರ್ಯಗ್ರಹಣವು ಭಾಗಶಃವಾಗಿದೆ. ಇದು ಭಾರತದಲ್ಲಿ ಅಥವಾ ಯುಎಸ್‌ನಲ್ಲಿ ಕಾಣಿಸುವುದಿಲ್ಲ. ಬದಲಿಗೆ ಸೂರ್ಯಗ್ರಹಣವು ದಕ್ಷಿಣ ಅಮೆರಿಕದ ನೈಋತ್ಯ ಭಾಗದಲ್ಲಿ ಆಕಾಶ ಸ್ಪಷ್ಟವಾಗಿದ್ದರೆ ಕಾಣಿಸುತ್ತದೆ. ಇದಲ್ಲದೆ ಅಟ್ಲಾಂಟಿಕ್ ಸಾಗರ, ಅಂಟಾರ್ಕ್ಟಿಕಾದ ವಾಯುವ್ಯ ಕರಾವಳಿಯ ಭಾಗಗಳಲ್ಲಿ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ, ಚಿಲಿ, ಅರ್ಜೆಂಟೀನಾ, ಉರುಗ್ವೆಯ ಹೆಚ್ಚಿನ ಭಾಗ, ಪಶ್ಚಿಮ ಪರಾಗ್ವೆ, ನೈಋತ್ಯ ಬೊಲಿವಿಯಾ, ಆಗ್ನೇಯ ಪೆರು ಮತ್ತು ನೈಋತ್ಯ ಬ್ರೆಜಿಲ್‌ನ ಸಣ್ಣ ಪ್ರದೇಶದಿಂದ ಇದು ಗೋಚರಿಸುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ. 

ಸೂರ್ಯಗ್ರಹಣ 2022: ರಾಶಿ ಪ್ರಕಾರ ಪರಿಹಾರ ಕೈಗೊಂಡರೆ ಹೆಚ್ಚುವ ಲಾಭ

ನೋಡುವುದು ಹೇಗೆ?(How to watch)
ಖಗೋಳ ವದ್ಯಮಾನ ಪ್ರಿಯರಿಗೆ ಗ್ರಹಣ ನೋಡುವ ಬಯಕೆ ಇರುತ್ತದೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ ಭಾರತದಲ್ಲಿ ಕಾಣುವುದಿಲ್ಲ ಎಂದು ನಿರಾಶರಾಗುವ ಅವಕಾಶವಿಲ್ಲ. ಗ್ರಹಣ ವೀಕ್ಷಿಸಲು ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಕಷ್ಟು ಅವಕಾಶಗಳಿವೆ. 
ಹೌದು, ಗ್ರಹಣ ನೋಡುವ ಬಯಕೆ ನಿಮಗಿದ್ದಲ್ಲಿ ಈ ಬಾರಿ ಆನ್‌ಲೈನ್ ಮೂಲಕ ವೀಕ್ಷಿಸಬಹುದು.  ಭಾರತ ಮೂಲದ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಮೂಲಕ ಭಾಗಶಃ ಸೂರ್ಯ ಗ್ರಹಣವನ್ನು ವೀಕ್ಷಿಸಬಹುದು. ಸೂರ್ಯ ಗ್ರಹಣದ ವೆಬ್‌ಕಾಸ್ಟ್ ಏಪ್ರಿಲ್ 30ರಂದು ಸೂರ್ಯ ಗ್ರಹಣದ ಅವಧಿಯನ್ನು ಪ್ರಾರಂಭದಿಂದ ಅಂತ್ಯದವರೆಗೂ ತೋರಿಸುತ್ತದೆ. ಗೋಚರತೆಯ ಪ್ರದೇಶದಲ್ಲಿ ಇರುವವರು ಸೂರ್ಯನನ್ನು ಸುರಕ್ಷಿತವಾಗಿ ವೀಕ್ಷಿಸಲು ಅಥವಾ ಗ್ರಹಣವನ್ನು ವೀಕ್ಷಿಸಲು ವಿಶೇಷ ರಕ್ಷಣಾತ್ಮಕ ಕನ್ನಡಕ ಅಥವಾ ಪ್ರಮಾಣೀಕೃತ ಗ್ರಹಣ ಕನ್ನಡಕವನ್ನು ಧರಿಸಬೇಕು. 

ಇದು ಭಾಗಶಃ ಸೂರ್ಯಗ್ರಹಣವಾಗಿದ್ದು ಭಾರತದಲ್ಲಿ ಇದರ ಸೂತಕದ ಅವಧಿ ಇರುವುದಿಲ್ಲವಾದರೂ ನಮ್ಮೆಚ್ಚರಿಕೆಯಲ್ಲಿ ನಾವಿರುವುದರಿಂದ ಸಮಸ್ಯೆ ಏನೂ ಇಲ್ಲ. ಹಾಗಾಗಿ, ಗ್ರಹಣ ಕಾಲದಲ್ಲಿ ಮಾಡಬೇಕಾದ ಮತ್ತು ಮಾಡಬಾರದು ವಿಷಯಗಳನ್ನು ಇಲ್ಲಿ ನೀಡಲಾಗಿದೆ. 

ಗ್ರಹಣದ ನಂತರ ಸ್ನಾನ(bath)
ಇಂದು ಭಾರತದಲ್ಲಿ ಗ್ರಹಣ ಗೋಚರವಾಗದಿರಬಹುದು. ಆದರೂ ಗ್ರಹಣ ಬಿಟ್ಟ ಬಳಿಕ ಸ್ನಾನ ಮಾಡಬೇಕು. ಗ್ರಹಣ ಕಾರಣದಿಂದ ಅಪಾಯಕಾರಿ ರೋಗಾಣುಗಳು(bacteria) ವಾತಾವರಣದಲ್ಲಿ ಹೆಚ್ಚಿರುತ್ತವೆ. ಗ್ರಹಣದ ನಂತರ ಸ್ನಾನ ಮಾಡುವುದರಿಂದ ಈ ರೋಗಾಣುಗಳಿಂದೂ ಅವು ಹರಡುವ ರೋಗಗಳಿಂದಲೂ ಮುಕ್ತರಾಗಬಹುದು. 

ಗ್ರಹಣಕ್ಕಿಂತ ಮುಂಚೆ ಊಟ
ನಿಮಗೆ ಗೊತ್ತಾ? ಪ್ರತಿ ದಿನ ಸೂರ್ಯನ ನೀಲಿ ಹಾಗೂ ಆಲ್ಟ್ರಾ ವಯೋಲೆಟ್ ಕಿರಣಗಳು ನ್ಯಾಚುರಲ್ ಡಿಸ್‌ಇನ್ಫೆಕ್ಟೆಂಟ್ ಆಗಿ ಕೆಲಸ ಮಾಡುತ್ತಿರುತ್ತವೆ. ಅವು ನಮ್ಮನ್ನು ಹಾಗೂ ಈ ವಾತಾವರಣವನ್ನು ಸುರಕ್ಷಿತವಾಗಿಡುತ್ತಿರುತ್ತವೆ. ಆದರೆ, ಗ್ರಹಣ ಕಾಲದಲ್ಲಿ ಸೂರ್ಯನ ಬೆಳಕು ಭೂಮಿಗೆ ತಲುಪಲು ಅಡ್ಡಿಯಾದಾಗ ಈ ರಕ್ಷೆ ಇಲ್ಲದೆ ವಾತಾವರಣವು ಕೀಟಾಣುಗಳಿಂದ ತುಂಬುತ್ತದೆ. ಈ ಕೀಟಾಣುಗಳು ನಮ್ಮ ಆಹಾರಗಳ ಮೇಲೆ ಬೆಳೆಯುವ ವೇಗ ಬಹಳ ಹೆಚ್ಚು. ಹಾಗಾಗಿ, ಇಂದು ಊಟ, ತಿಂಡಿ ಏನೇ ಇರಲಿ ಗ್ರಹಣ ಹಿಡಿಯುವ ಕನಿಷ್ಠ ಎರಡು ಗಂಟೆಗೆ ಮುನ್ನ ಮಾಡಿ ಮುಗಿಸಿ. ಮಾಂಸಾಹಾರ ಇಂದಿಗೆ ಒಳಿತಲ್ಲ. ನಂತರವೂ ಗ್ರಹಣ ಬಿಟ್ಟ ಒಂದೆರಡು ಗಂಟೆಗಳ ಬಳಿಕ ಆಹಾರಕ್ಕೆ ಹೆಚ್ಚು ಅರಿಶಿನ ಸೇರಿಸಿ ಆಗಷ್ಟೇ ತಯಾರಿಸಿ ಸೇವಿಸಿ. ಗ್ರಹಣಕ್ಕೂ ಮುಂಚೆ ತಯಾರಿಸಿದ ಆಹಾರ ಸೇವನೆ ಬೇಡ. ಒಂದು ವೇಳೆ ಮೊಸರು, ಹಿಟ್ಟಿನಂಥ ಆಹಾರಗಳಿದ್ದರೆ ಅವನ್ನು ಚೆಲ್ಲಬೇಕಲ್ಲ ಎಂದು ಚಿಂತಿತರಾಗಬೇಡಿ. ಅದಕ್ಕೆ ಗರಿಕೆ ಹಾಗೂ ತುಳಸಿ ಹಾಕಿಡಿ. ಇವು ಪ್ರಾಕೃತಿಯವಾಗಿಯೇ ಡಿಸ್‌ಇನ್ಫೆಕ್ಟೆಂಟ್ ಆಗಿವೆ. ಆಹಾರಗಳನ್ನು ಬಹುಕಾಲ ಕೆಡದಂತೆ ಇಡಲು ಅಪಾಯಕಾರಿ ಕೆಮಿಕಲ್‌ಗಳನ್ನು ಬಳಸುವ ಬದಲು ದರ್ಬೆಯನ್ನೇ ಬಳಸುವುದು ಒಳ್ಳೆಯದು ಎಂದು ವೈಜ್ಞಾನಿಕ ಸಂಶೋಧನೆ(research)ಗಳಲ್ಲೂ ತಿಳಿದುಬಂದಿದೆ. ಗ್ರಹಣ ಮುಗಿದ ಮೇಲೆ ದರ್ಬೆ ತೆಗೆದು ಬಳಸಿ. 

ಈ ಬಾರಿಯ ಭಾಗಶಃ Solar Eclipse ಭಾರತದಲ್ಲಿ ಕಾಣುವುದೇ? ನೋಡುವುದು ಹೇಗೆ?

ಗ್ರಹಣ ಸಂದರ್ಭದಲ್ಲಿ ನೀರನ್ನು ಕೂಡಾ ಕುಡಿಯುವುದು ಬೇಡ. ಕುಡಿಯಲೇಬೇಕಾದ ಅಗತ್ಯವಿದ್ದರೆ ನೀರನ್ನು ಚೆನ್ನಾಗಿ ಕುದಿಸಿ ಬಿಸಿ ಬಿಸಿ ಇರುವಾಗಲೇ ಕುಡಿಯಿರಿ. ಈ ನೀರಿಗೆ ತುಳಸಿ ಹಾಗೂ ಅರಿಶಿನ ಸೇರಿಸಿಕೊಂಡು ಅವುಗಳ ಆ್ಯಂಟಿವೈರಲ್(anti viral) ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್(anti bacterial) ಗುಣಗಳ ಲಾಭವನ್ನೂ ಪಡೆಯಬಹುದು. 

ನೇರವಾಗಿ ಸೂರ್ಯನನ್ನು ದಿಟ್ಟಿಸದಿರಿ
ಸಾಮಾನ್ಯ ದಿನಗಳಲ್ಲಿ ಕೂಡಾ ಸೂರ್ಯನನ್ನು ನೇರವಾಗಿ ನೋಡುವುದು ಒಳ್ಳೆಯದಲ್ಲ. ಅದರಲ್ಲೂ ಗ್ರಹಣ ಸಂದರ್ಭದಲ್ಲಿ ನೋಡುವುದರಿಂದ ಕಣ್ಣುಗಳಿಗೆ ಹಾನಿಯಾಗಬಹುದು. ಸೂರ್ಯನ ಕಡೆ ಗ್ರಹಣ ಕಾಲದಲ್ಲಿ ನೋಡದಂತೆ ನಾಸಾ ಎಚ್ಚರಿಸಿದೆ. ಬೈನಾಕ್ಯುಲರ್ ಹಾಗೂ ಟೆಲಿಸ್ಕೋಪ್ ಬಳಕೆ ಖಂಡಿತವಾಗಿ ಮಾಡಬೇಡಿ. ಎಕ್ಸ್‌ರೇ ಬಳಕೆ ಕೂಡ ಸರಿಯಲ್ಲ. ನೋಡಲೇಬೇಕೆಂದಿದ್ದರೆ‌ ಆನ್‌ಲೈನ್‌ನಲ್ಲಿ ಗ್ರಹಣ ಪ್ರಸರಣ ವೀಕ್ಷಿಸಿ. 

Solar Eclipse 2022: ಈ ಬಾರಿಯ ಸೂರ್ಯ ಗ್ರಹಣದ ದಿನಾಂಕ, ಸಮಯ ಇಲ್ಲಿದೆ

ಗ್ರಹಣ ಕಾಲದಲ್ಲಿ ಧ್ಯಾನ(meditation)
ಧ್ಯಾನ ಯಾವತ್ತಿಗೂ ಒಳ್ಳೆಯದೇ. ಅದರಲ್ಲೂ ಗ್ರಹಣದ ಸಂದರ್ಭದಲ್ಲಿ ಅದರ ಲಾಭಗಳು ಇನ್ನೂ ಹೆಚ್ಚು. ಇದಕ್ಕೆ ಕಾರಣ ನಮ್ಮ ಮನಸ್ಸು ಚಂದ್ರನೊಂದಿಗೆ ಸಂಪರ್ಕ ಹೊಂದಿದ್ದರೆ, ದೇಹವು ಭೂಮಿಯೊಂದಿಗೆ ಸಂಪರ್ಕ ಹೊಂದಿರುತ್ತದೆ. ಸೂರ್ಯನು ಮನಸ್ಸು ಹಾಗೂ ದೇಹವೆರಡಕ್ಕೂ ಕನೆಕ್ಟ್ ಆಗಿರುತ್ತಾನೆ. ಹಾಗಾಗಿ, ಈ ಮೂರೂ ಆಕಾಶಕಾಯಗಳು ನೇರ ರೇಖೆಯಲ್ಲಿದ್ದಾಗ ಧ್ಯಾನ ಮಾಡುವುದರಿಂದ ಮನಸ್ಸಿಗೆ ಹೆಚ್ಚಿನ ಶಕ್ತಿ, ಚೈತನ್ಯ ದೊರೆಯುತ್ತದೆ. 

ಗರ್ಭಿಣಿಯರಿಗೆ ವಿಶೇಷ ಎಚ್ಚರಿಕೆ
ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಅತ್ಯಂತ ಜಾಗರೂಕರಾಗಿರಬೇಕು. ಗ್ರಹಣದ ಸಮಯದಲ್ಲಿ ನಕಾರಾತ್ಮಕ (Negative) ಪ್ರಭಾವಗಳು (Effects) ಹೆಚ್ಚಾಗಿರುವುದರಿಂದ ಗರ್ಭಣಿಯರಿಗೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಇತರರಿಗಿಂತ ಗರ್ಭಿಣಿಯರು ಈ ಸಮಯದಲ್ಲಿ ಹೆಚ್ಚು ಕಾಳಜಿ (Care) ವಹಿಸಬೇಕು. ಗ್ರಹಣದ ಸಮಯದಲ್ಲಿ ಬೀಳುವ ದೂಷಿತ ಕಿರಣಗಳು (Defected Sun rays) ಗರ್ಭದಲ್ಲಿರುವ (Womb) ಶಿಶುವಿನ (Infant) ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತವೆ. ಇದರಿಂದ ಶಿಶುವು ದೈಹಿಕ ಮತ್ತು ಮಾನಸಿಕವಾಗಿ ಅಸ್ವಸ್ಥಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಸೂರ್ಯ ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ಹೊರಗಡೆ ಹೋಗಬಾರದು, ಮನೆಯಲ್ಲಿಯೇ ಇರಬೇಕು.  ಕುಳಿತು ದೇವರ ಧ್ಯಾನ (Meditation) ಮಾಡಬೇಕು. ಹಣ ಅಂತ್ಯವಾದ ನಂತರ ಸಾಧ್ಯವಾದಲ್ಲಿ ಗರ್ಭಿಣಿಯರು ಸ್ನಾನ ಮಾಡುವುದು ಒಳ್ಳೆಯದು. ಸ್ನಾನದ ನಂತರ ದೇವರಿಗೆ ತುಪ್ಪದ ದೀಪವನ್ನು ಹಚ್ಚಬೇಕು. ಅದಾದ ಬಳಿಕ ಶಕ್ತಿ ನೀಡುವ ಆಹಾರವನ್ನು ಸೇವಿಸಬೇಕು.

Follow Us:
Download App:
  • android
  • ios