Asianet Suvarna News Asianet Suvarna News

2022ರ ಮೊದಲ ರಾಹುಗ್ರಸ್ತ ಸೂರ್ಯಗ್ರಹಣ: ಯಾವ ರಾಶಿ ಮೇಲೆ ಏನು ಪರಿಣಾಮ?

ಈ ವರ್ಷದ ಮೊದಲ ಸೂರ್ಯ ಗ್ರಹಣ ಏ.30ರಂದು ಸಂಭವಿಸಿದೆ. ಇದರ ಪರಿಣಾಮಗಳು ದ್ವಾದಶ ರಾಶಿಗಳ ಮೇಲೆ ಏನಿರಲಿದೆ? ಪರಿಹಾರವಾಗಿ ಯಾವ ರಾಶಿ ಏನು ಮಾಡಬೇಕು? ಎಲ್ಲವನ್ನೂ ಬ್ರಹ್ಮಾಂಡ ಗುರೂಜಿ ನರೇಂದ್ರಬಾಬು ಶರ್ಮಾ ವಿವರಿಸಲಿದ್ದಾರೆ.

ಶನಿ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ(Solar eclipse) ನಡೆಯುತ್ತಿದೆ. ರವಿ-ಚಂದ್ರರು ಒಂದೇ ರಾಶಿಯಲ್ಲಿ ಸಂಚಾರ ಮಾಡುತ್ತಾ ಸಮೀಪಿಸಿದರೆ ಅದನ್ನೇ ಅಮಾವಾಸ್ಯೆ(New moon day) ಎನ್ನುತ್ತಾರೆ. ಚಂದ್ರನ ಪಕ್ಷಬಲ ಸಂಪೂರ್ಣ ನಷ್ಟವಾಗುವ ಈ ಕಾಲದಲ್ಲಿ ಮನುಷ್ಯರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಇಂಥ ಅಮಾವಾಸ್ಯೆ ಶನಿವಾರ(Saturday) ಸಂಭವಿಸಿದರೆ ಅತಿಯಾದ ಕೆಡುಕುಂಟಾಗಲಿದೆ. ಏಕೆಂದರೆ ಶನಿ ಮತ್ತು ಚಂದ್ರರು ಪರಸ್ಪರ ಶತ್ರುಗಳು. 

ಶತ್ರುವಾದ ಶನಿವಾರದಲ್ಲಿ ಚಂದ್ರನೂ ಬಲವನ್ನು ಕಳೆದುಕೊಂಡಾಗ ಕೆಲ ರಾಶಿಗಳಿಗೆ ಮಾನಸಿಕ ವ್ಯಥೆ, ಆಘಾತ, ಅಪಘಾತ, ಮನೋವ್ಯಾಧಿಯಂಥ ಖಾಯಿಲೆಗಳು ಉಂಟಾಗುತ್ತವೆ. ಹೀಗಾಗಿ ಶನಿ ಅಮಾವಾಸ್ಯೆ ಅತ್ಯಂತ ಕೆಟ್ಟ ಫಲಗಳನ್ನು ಬೀರುತ್ತವೆ ಎಂಬ ನಂಬಿಕೆ ಇದೆ. ಇಂತ ಅಮಾವಾಸ್ಯೆಯ ಜೊತೆಗೆ ಗ್ರಹಣವೂ ಸೇರಿದರೆ ಅದು ಮನುಕುಲಕ್ಕೇ ಮಾರಕ ಕಾಲ.

ಸೂರ್ಯಗ್ರಹಣದ ಬೆನ್ನಲ್ಲೇ ಚಂದ್ರಗ್ರಹಣ: 1000 ವರ್ಷಗಳ ನಂತರ ಮಹಾ ವಿಚಿತ್ರ- ಇದು ಅಪಾಯದ ಮುನ್ಸೂಚನೆಯೇ?

ಈ ಗ್ರಹಣ ಮತ್ತು ಅಮಾವಾಸ್ಯೆಯು ಸೇರಿ ಎಲ್ಲ ರಾಶಿಗಳ ಮೇಲೆ ಏನೆಲ್ಲ ಪರಿಣಾಮಗಳಾಗುತ್ತವೆ? ಪರಿಹಾರ ಕಾರ್ಯವೇನು?  ಎಲ್ಲವನ್ನೂ ಬ್ರಹ್ಮಾಂಡ ಗುರೂಜಿ ನರೇಂದ್ರಬಾಬು ಶರ್ಮಾ ಅವರು ವಿವರಿಸಲಿದ್ದಾರೆ.
 

Video Top Stories