
ಧನಸ್ಸು ರಾಶಿಯವರ ಧನ ಯೋಗ: ಈ ಲಕ್ಷಣಗಳಿದ್ದರೆ ನೀವು ಶ್ರೀಮಂತರಾದಿರಿ ಅಂತಲೇ ಅರ್ಥ!
ನಿಮ್ಮ ಜಾತಕದಲ್ಲಿದೆಯಾ ಇಂಥ ಲಕ್ಷಣ..?
ಧನಸ್ಸಿಗೆ ಹಣ-ವೈಭವಗಳನ್ನು ತರುವ ಆ ಗ್ರಹ ಯಾವುದು..?
ಸುಖ ಸಮೃದ್ಧಿಗೆ-ಹಣ ಯೋಗಕ್ಕೆ ನೀವು ಮಾಡಬೇಕಾದದ್ದೇನು?
ಧನ ಯೋಗಗಳು ಸಂಪತ್ತು ಮತ್ತು ಸಮೃದ್ಧಿಗಾಗಿ ಜ್ಯೋತಿಷ್ಯ ಸಂಯೋಜನೆಗಳು ಅಥವಾ ಯೋಗಗಳು. ಲಗ್ನ ಮತ್ತು ಅದರ ಅಧಿಪತಿ ಎರಡೂ ಬಲವಾಗಿದ್ದರೆ ಹೆಚ್ಚು ಫಲಪ್ರದವೆಂದು ಸಾಬೀತುಪಡಿಸುತ್ತದೆ. ನಿಮ್ಮ ಜನ್ಮ ಕುಂಡಲಿಯಲ್ಲಿರುವ ಮನೆಯು ನೀವು ಸಂಪತ್ತನ್ನು ಹೇಗೆ ಪಡೆಯುತ್ತೀರಿ ಎಂಬುದನ್ನು ಸೂಚಿಸುತ್ತದೆ. ಎರಡನೇ ಮನೆಯು ಸಂಚಿತ ಸಂಪತ್ತನ್ನು ಸೂಚಿಸುತ್ತದೆ, ಎಂಟನೇ ಮನೆಯು ಅಜ್ಞಾತ ಸಂಪತ್ತನ್ನು ಬಹಿರಂಗಪಡಿಸುತ್ತವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Nag Panchami 2022: ಹಬ್ಬದ ದಿನ ತಪ್ಪಿಯೂ ಈ ಕೆಲಸ ಮಾಡಬೇಡಿ..
ಧನಸ್ಸು ರಾಶಿಯ ಹಣಕಾಸಿನ ಸ್ಥಿತಿ ಬಗ್ಗೆ ಇಲ್ಲಿ ಚಿಂತನೆ ಮಾಡಲಾಗಿದೆ. ಧನಸ್ಸು ರಾಶಿಗೆ ಶನೈಶ್ಚರ ಧನಸ್ಥಾನದಲ್ಲಿದ್ದರೆ ಇವರ ಶ್ರೀಮಂತಿಕೆಗೆ ಮಿತಿ ಇಲ್ಲ. ಶ್ರಮಜೀವಿಗಳಿಗೆ ಶನೈಶ್ಚರ ಖಂಡಿತಾ ಸಂಪೂರ್ಣ ಧನಾನುಗ್ರಹ ನೀಡುತ್ತಾನೆ. ಒಂದು ವೇಳೆ ಧನಸ್ಸಿಗೆ ಹಣದ ಅಧಿಪತಿ ಧನಸ್ಥಾನದಲ್ಲಿಲ್ಲದಿದ್ದರೆ, ಹಣಕಾಸಿನ ಅಡಚಣೆ ಹೆಚ್ಚಿದ್ದರೆ ಈ ರಾಶಿಯವರು ಏನು ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.