ಹುಡುಗಿಗೆ ವರನ ವೇಷ ಹಾಕಿ ಹರಕೆ ಸಲ್ಲಿಕೆ, ಹೀಗೆ ಮಾಡಿದ್ರೆ ಆರೋಗ್ಯ ಭಾಗ್ಯ!

ಅಲ್ಲಿ ಹುಡುಗಿಗೆ ವರನ ವೇಷ ಹಾಕಿ ದೇವರಿಗೆ ಹರಕೆ ಒಪ್ಪಿಸುತ್ತಾರೆ. ನವಿಲುಗರಿ ಹಿಡಿದು ದೇವಾಲಯದಲ್ಲಿ ನೃತ್ಯ ಮಾಡುತ್ತಾರೆ. ಜೊತೆಗೆ ಜಿಂಕೆ ಕೊಂಬು ಹಿಡಿದು ಕುಣಿಯುತ್ತಾರೆ. ವಿಭಿನ್ನ ಆಚರಣೆಯನ್ನು ನೋಡಲು ಭಕ್ತಸಮೂಹ ಸೇರಿರುತ್ತದೆ.  ಹಾಗಾದರೆ ಈ ವಿಶೇಷವಾದ ಉತ್ಸವ ಎಲ್ಲಿ ನಡೆಯುತ್ತದೆ? ಅದು ಹೇಗಿರುತ್ತೆ ಎಂಬುವುದರ ಡೀಟೈಲ್ಸ್ ಇಲ್ಲಿದೆ ನೋಡಿ.

First Published Mar 29, 2022, 2:18 PM IST | Last Updated Mar 29, 2022, 2:18 PM IST

ಈ ದೇವಾಲಯ(temple)ದ ವೈಶಿಷ್ಠ್ಯತೆಯೇ ಇದು. ಇಲ್ಲಿ ವಧು(bride)ವಿನಂತೆ ಅಲಂಕರಿಸಿಕೊಂಡ ಗಂಡು ಹುಡುಗ ಬರುತ್ತಾನೆ. ಆದರೆ, ಮದುವೆಯೇನಲ್ಲ, ವರ ಇರುವುದೂ ಇಲ್ಲ. ವರ(groom)ನಂತೆ ಸಿಂಗರಿಸಿಕೊಂಡ ಹುಡುಗಿಯರೂ ಬರುತ್ತಾರೆ. ಆದರೆ, ವಧುವಿರಲ್ಲ!

ಅರೆ! ಏನಪ್ಪಾ ಈ ವಿಚಿತ್ರ ಎಂದುಕೊಂಡ್ರಾ? ಮಕ್ಕಳ ಆರೋಗ್ಯ(health) ವೃದ್ಧಿಗಾಗಿ ಸಲ್ಲಿಸುವ ಹರಕೆ ಇದಾಗಿದೆ. 
ಹೌದು, ಕೊಡಗು(Kodagu) ಜಿಲ್ಲೆಯ ಇಬ್ನಿವಳವಾಡಿ ಗ್ರಾಮದಲ್ಲಿರುವ ಭದ್ರಕಾಳಿ ದೇವಾಲಯದಲ್ಲಿ ಇಂಥದೊಂದು ವಿಶಿಷ್ಠ ಆಚರಣೆ ಇದೆ. ಗ್ರಾಮದಲ್ಲಿ ಮಕ್ಕಳಿಗೆ ಏನಾದರೂ ಸಮಸ್ಯೆ ಕಾಣಿಸಿಕೊಂಡಲ್ಲಿ ಈ ದೇವರಿಗೆ ಹರಕೆ ಹೊತ್ತುಕೊಳ್ಳಲಾಗುತ್ತದೆ. ಅಂದರೆ ಹುಡುಗನಿಗೆ ಮದುಮಗಳಂತೆ ಹಾಗೂ ಹುಡುಗಿಗೆ ಮದುಮಗನಂತೆ ಅಲಂಕಾರ  ಮಾಡಿ ದೇವಾಲಯಕ್ಕೆ ಕರೆದುಕೊಂಡು ಬಂದು ಹರಕೆ ಒಪ್ಪಿಸುತ್ತಾರೆ. ಮದುವೆ ಸಂಪ್ರದಾಯದಂತೆ ಇಲ್ಲಿ ಎಲ್ಲವೂ ನಡೆಯುತ್ತದೆ. ಆದರೆ  ವಧುವಿಗೆ ಇಲ್ಲಿ ವರನಿರಲ್ಲ. ಪೋಷಕರು ತಮ್ಮ ಮಕ್ಕಳನ್ನು ಈ ರೀತಿ ಕರೆದುಕೊಂಡು ಬಂದು ಹರಕೆ ತೀರಿಸಿ ನಿರಾಳರಾಗುತ್ತಾರೆ. ಇದರಿಂದ ಮಕ್ಕಳ ಆರೋಗ್ಯ ವೃದ್ದಿಯಾಗುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿದೆ.

Ugadi 2022: ಬದುಕಿನ ಪಾಠ ಹೇಳುವ ಬೇವು ಬೆಲ್ಲ.. ಈ ಕಾರಣಕ್ಕೆ ಸೇವಿಸಿ

ಇದೇ ಅಲ್ಲದೆ, ಇನ್ನೂ ಹಲವಷ್ಟು ವಿಶಿಷ್ಠ ಆಚರಣೆಗಳನ್ನು ಇಲ್ಲಿನ ಭದ್ರಕಾಳಿ ಉತ್ಸವದಲ್ಲಿ ಕಾಣಬಹುದು. ಅವೆಂದರೆ ಭಕ್ತಾದಿಗಳ ನವಿಲು ನೃತ್ಯ,  ಜಿಂಕೆ ಕೊಂಬು ಹಿಡಿದು ಡ್ಯಾನ್ಸ್ ಇತ್ಯಾದಿ. ಮಡಿಕೇರಿ ಸಮೀಪದ ಈ ಗ್ರಾಮದಲ್ಲಿ ಸುಮಾರು 600 ವರ್ಷದಿಂದಲೂ ಭದ್ರಕಾಳಿ ದೇವರ ಉತ್ಸವ  ವಿಭಿನ್ನ ಸಂಪ್ರದಾಯಗಳೊಂದಿಗೆ ನಡೆಯುತ್ತವೆ.