Shashti special: ಹುತ್ತಕ್ಕೆ ಕೋಳಿ ರಕ್ತ ಎರೆದು ನಾಗಾರಾಧನೆ

ಷಷ್ಠಿ ಹಬ್ಬದಂದು ಹಾವಿನ ಹುತ್ತಕ್ಕೆ ಕೋಳಿ ಮಾಂಸ ಹಾಗೂ ಮೊಟ್ಟೆ ಹಾಕಿ ಪೂಜೆ ಮಾಡುವ ವಿಶಿಷ್ಠ ಆಚರಣೆ ಚಾಮರಾಜನಗರದ ಹಲವೆಡೆ ಇದೆ. 

First Published Dec 14, 2021, 2:40 PM IST | Last Updated Dec 14, 2021, 2:40 PM IST

ಷಷ್ಠಿ ಹಬ್ಬದ ದಿನದಂದು ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡುವುದು ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಹುತ್ತಕ್ಕೆ ಕೋಳಿರಕ್ತ ಎರೆದು ಕೋಳಿ ಮೊಟ್ಟೆ ಹಾಕಿ ನಾಗಾರಾಧನೆ ಮಾಡುತ್ತಾರೆ. 

 ಷಷ್ಟಿ ಹಬ್ಬದ ದಿನ ಮನೆಮಂದಿಯೆಲ್ಲಾ ಸ್ನಾನ, ಮಡಿ ಮಾಡಿ, ಒಂದು ಹೊತ್ತು ಉಪವಾಸ ಇರುತ್ತಾರೆ. ಅಂದು ಹುತ್ತದ ಮುಂದೆಯೇ ಕೋಳಿ ಕೊಯ್ಯುವ ಭಕ್ತರು, ಕೋಳಿಯ ತಲೆ ಹಾಗೂ ಮೊಟ್ಟೆಯನ್ನು ಹುತ್ತದೊಳಕ್ಕೆ ಹಾಕುತ್ತಾರೆ. ಬಳಿಕ ಹುತ್ತಕ್ಕೆ ಕೋಳಿರಕ್ತ ಎರೆದು ನಾಗಪೂಜೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಹೊಲಗದ್ದೆಗಳಲ್ಲಿ ಕೆಲಸ  ಮಾಡುವಾಗ ಹಾವುಗಳು ತಮಗೆ ಕಾಣಿಸುವುದಿಲ್ಲ ಹಾಗೂ ಅವುಗಳಿಂದ ತಮಗೆ ಯಾವುದೇ  ತೊಂದರೆ ಉಂಟಾಗುವುದಿಲ್ಲ ಎಂಬ ನಂಬಿಕೆ ಗ್ರಾಮೀಣ ಜನರಲ್ಲಿದೆ.  

Ramayana Facts: ಬ್ರಹ್ಮಚಾರಿ ಹನುಮನಿಗೂ ಮಗನಿದ್ದಾನೆ ಗೊತ್ತಾ?

ಮೇಲ್ನೋಟಕ್ಕೆ ಇದು ಮೂಢನಂಬಿಕೆ ಅನಿಸಿದರೂ ಇದರ ಹಿಂದೆ ಒಂದು ಸದುದ್ದೇಶ ಅಡಗಿದೆ. ಬಹುಶಃ ಹುತ್ತದ ಒಳಗಿರುವ ಹಾವುಗಳಿಗೆ ಹಾಲೆರೆದರೆ  ಅವುಗಳಿಗೆ ತೊಂದರೆ ಉಂಟಾಗಬಹುದು, ಹುತ್ತಕ್ಕೆ ಹಾಲಿನ ಬದಲಾಗಿ ಕೋಳಿ ಮೊಟ್ಟೆ ಹಾಗು ಕೋಳಿಯ ತಲೆ ಭಾಗವನ್ನು ಹಾಕಿದರೆ ಹಾವುಗಳಿಗೆ ಆಹಾರವಾದರೂ ಆಗಲಿ ಎಂಬ ದೃಷ್ಠಿಯಿಂದ ಹಿರಿಯರು ಈ ಸಂಪ್ರದಾಯ ಹುಟ್ಟು ಹಾಕಿರಬಹುದು ಎನ್ನಲಾಗುತ್ತದೆ.