Asianet Suvarna News Asianet Suvarna News

Ramayana Facts: ಬ್ರಹ್ಮಚಾರಿ ಹನುಮನಿಗೂ ಮಗನಿದ್ದಾನೆ ಗೊತ್ತಾ?

ರಾಮಾಯಣದ ಕತೆ ಭಾರತ, ಶ್ರೀಲಂಕಾ ಸೇರಿದಂತೆ ಅನೇಕ ಏಷ್ಯಾ ದೇಶಗಳಲ್ಲಿ ಜನಪ್ರಿಯವಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದ ಎಷ್ಟೋ ಕುತೂಹಲಕಾರಿ ಸಂಗತಿಗಳು ಅಪರಿಚಿತವಾಗೇ ಉಳಿದಿದೆ. 

Interesting Facts of Ramayana Only Few People Know skr
Author
Bangalore, First Published Dec 13, 2021, 1:12 PM IST

ರಾಮಾಯಣ, ಮಹಾಭಾರತಗಳು ಎಲ್ಲ ಹಿಂದೂಗಳ ಬದುಕಿನ ಕತೆಗಳು. ಅಲ್ಲಿ ನಮ್ಮದೇ ಜೀವನವನ್ನು, ಮನಸ್ಥಿತಿಯನ್ನು ಕಾಣಬಹುದು. ನೀತಿಗಳನ್ನು ಪಡೆಯಬಹುದು. ಮತ್ತೊಬ್ಬರ ಕತೆಯ ಮೂಲಕ ವ್ಯಕ್ತಿಗೆ ಸರಿ ತಪ್ಪುಗಳನ್ನು ಹೇಳಿಕೊಡುವಲ್ಲಿ ಈ ಪುಸ್ತಕಗಳು ಎಂದೂ ಮುಂದು. ಸಾವಿರಾರು ವರ್ಷಗಳುರುಳಿದರೂ ಕತೆಯ ತಾಜಾತನವಾಗಲೀ, ಪ್ರಸ್ತುತತೆಯಾಗಲೀ ಸ್ವಲ್ಪವೂ ಮಾಸಿಲ್ಲ ಅನ್ನೋದು ಈ ಪುಸ್ತಕಗಳ ಹೆಗ್ಗಳಿಕೆ. ರಾಮ, ಸೀತೆಯ ಜೀವನದ ಕತೆ ಹೇಳುವ ರಾಮಾಯಣ(Ramayana)ದ ಕತೆ ಎಲ್ಲರಿಗೂ ಗೊತ್ತೇ ಇರುತ್ತದೆ. ಆದರೆ, ಇದರಲ್ಲಿನ ಬಹುತೇಕರಿಗೆ ಗೊತ್ತಿಲ್ಲದ ಆಸಕ್ತಿಕರ ಸಂಗತಿಗಳನ್ನಿಲ್ಲಿ ಕೊಡಲಾಗಿದೆ. 

ಲಕ್ಷ್ಮಣನ ಆಕ್ರಮಣಶೀಲತೆ(Lakshmana’s aggression)
ರಾಮ ಎಷ್ಟೊಂದು ತಾಳ್ಮೆಯ ಮೂರ್ತಿಯೋ, ಸಹನಾಶೀಲನೋ, ಲಕ್ಷ್ಮಣ ಅದಕ್ಕೆ ಸಂಪೂರ್ಣ ತದ್ವಿರುದ್ಧ. ಆಕ್ರಮಣಶೀಲತೆ ಅವನ ಗುಣ. ಬೇಗ ಕೋಪಗೊಳ್ಳುವವನು, ಕಿರಿಕಿರಿಯಾಗುವವನು. ಲಕ್ಷ್ಮಣನು ಶೇಷನ ಅವತಾರ ಎನ್ನಲಾಗುತ್ತದೆ. ಹಾಗಾಗಿಯೇ ಶೇಷನ ಕೋಪ, ಹಠಾತ್ ಪ್ರವೃತ್ತಿ, ಬದ್ಧತೆಗಳೆಲ್ಲವೂ ಲಕ್ಷ್ಮಣನ ಸ್ವಭಾವವಾಗಿದೆ. ಆತ ತಪ್ಪನ್ನು ಸ್ವಲ್ಪವೂ ಸಹಿಸಿಕೊಳ್ಳಲಾರ. ಲಕ್ಷ್ಮಣ ಹುಟ್ಟಿದಾಗ ಅಳುತ್ತಲೇ ಇದ್ದನಂತೆ. ಕಡೆಗೆ ರಾಮನ ಪಕ್ಕ ಮಲಗಿಸಿದ ಮೇಲೆ ಸುಮ್ಮನಾದನಂತೆ. ಲಕ್ಷ್ಮಣನನ್ನು ಸಮಾಧಾನಪಡಿಸುವ ಶಕ್ತಿಯಿದ್ದದ್ದು ರಾಮನಿಗೆ ಮಾತ್ರ. ರಾಮನ ಮಾತಿನ ವಿರುದ್ಧ ಆತ ಎಂದಿಗೂ ಹೋಗುತ್ತಿರಲಿಲ್ಲ. 

Traits of Tuesday Born: ಮಂಗಳವಾರ ಹುಟ್ಟಿದವರ ವೃತ್ತಿ, ವೈವಾಹಿಕ ಜೀವನ ಹೇಗೆ?

ಸೀತೆಯ ಹುಟ್ಟು(The Birth of Sita)
ಮಿಥಿಲಾದಲ್ಲಿ ಅತಿ ದೊಡ್ಡ ಬರಗಾಲ ಕಾಣಿಸಿಕೊಂಡ ಸಮಯ. ರೈತರು, ಸ್ಥಳೀಯರೆಲ್ಲ ರಾಜ ಜನಕನ ಬಳಿ ತಮ್ಮ ಗೋಳು ತೋಡಿಕೊಂಡರು. ಆಗ ರಾಜ ಜನಕ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ವತಃ ಗುದ್ದಲಿ ತೆಗೆದುಕೊಂಡು ಬರಪೀಡಿತ ನೆಲ ಅಗೆಯಲು ಹೋದ. ಹಾಗೆ ನೆಲ ಅಗೆಯುವಾಗ ಸಿಕ್ಕಿದ ಪುಟ್ಟ ಮಗು ಸೀತೆ. ಆಕೆ ಋಷಿಮುನಿಗಳ ಸಂಜಾತೆ ಎನ್ನಲಾಗುತ್ತದೆ. ಜನಕ ರಾಜನಿಗೆ ಮಕ್ಕಳಿರಲಿಲ್ಲ. ಕೂಡಲೇ ಆತ ಸೀತೆಯನ್ನು ತನ್ನ ಮಗಳಾಗಿ ದತ್ತು ತೆಗೆದುಕೊಂಡ. 

Dashavatara Temple: ಈ ದೇವಾಲಯದಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನೂ ಕಾಣಬಹುದು!

ಆಂಜನೇಯನ ಮಗ(Hanuman’s son)
ಆಂಜನೇಯನು ಪಕ್ಕಾ ಬ್ರಹ್ಮಚಾರಿ ಎಂದು ಎಲ್ಲರಿಗೂ ಗೊತ್ತಿದೆ. ಆತ ತನ್ನ ಬದುಕನ್ನು ರಾಮನ ಬಂಟನಾಗಿಯೇ ಕಳೆದ. ಒಮ್ಮೆ ಹನುಮಂತನನ್ನು ಲಂಕೆಯ ಅಶೋಕ ವಾಟಿಕಾ(Ashok vatika)ಕ್ಕೆ ರಾಮನ ಸಂದೇಶವಾಹಕನಾಗಿ ಕಳುಹಿಸಲಾಯಿತು. ಆಗ ಲಂಕೆಗೆ ಬಾಲದಿಂದ ಬೆಂಕಿ ಹಚ್ಚಿ ಹಿಂದಿರುಗುವಾಗ ಸಮುದ್ರ ಮಾರ್ಗ ಮಧ್ಯೆ ಆತ ಕೊಂಚ ವಿಶ್ರಮಿಸಲು ನಿಂತ. ಆಗ ದೇಹದಿಂದ ಇಳಿದ ಬೆವರು ಸಮುದ್ರಕ್ಕೆ ಬಿತ್ತು. ಅದನ್ನು ಜಲಚರಗಳು ನುಂಗಿದವಂತೆ. ಹಾಗೊಂದು ಜಲಚರಕ್ಕೆ ಹುಟ್ಟಿದವನು ಹನುಮಂತನ ಮಗ ಮಕರಧ್ವಜ(Makardhwaja). ಆದರೆ, ಈ ಬಗ್ಗೆ ಹನುಮಂತನಿಗೆ ತಿಳಿದದ್ದೇ ಬಹಳ ವರ್ಷಗಳ ನಂತರ. ಪಾತಾಳ ಲೋಕ ಕಾಯುತ್ತಿದ್ದ ಮಕರಧ್ವಜ ಸ್ವತಃ ತನ್ನನ್ನು ಆಂಜನೇಯನ ಮಗನೆಂದು ಹನುಮಂತನ ಬಳಿಯೇ ಪರಿಚಯಿಸಿಕೊಳ್ಳುತ್ತಾನೆ. ಬಳಿಕ ರಾಮ, ಲಕ್ಷ್ಮಣ, ಆಂಜನೇಯ ಎಲ್ಲ ಸೇರಿ ಮಕರಧ್ವಜನನ್ನು ಪಾತಾಳ ಲೋಕದ ರಾಜನನ್ನಾಗಿ ನೇಮಿಸುತ್ತಾರೆ. 

ಆಂಜನೇಯ ಶಿವನ ರೂಪ
ಶಿವನ 11ನೇ ರುದ್ರ ಅವತಾರ ಆಂಜನೇಯ ಎನ್ನಲಾಗುತ್ತದೆ. ರಾಮನಾಗಿ ವಿಷ್ಣು(Vishnu) ಅವತಾರ ತಾಳಿದಾಗ ಬ್ರಹ್ಮನು ಶಿವನಿಗೆ ಕೂಡಾ ದುಷ್ಟಶಕ್ತಿಯ ವಿರುದ್ಧ ಹೋರಾಡಲು ವಿಷ್ಣುವಿಗೆ ಸಹಾಯ ಮಾಡುವಂತೆ ಹೇಳುತ್ತಾನೆ. ಆಗ ಶಿವನು ಆಂಜನೇಯನಾಗಿ ಹುಟ್ಟುತ್ತಾನೆ. 

ನಂದಿಯ ಶಾಪ(Nandi’s curse)
ಸೀತೆಯನ್ನು ರಾವಣ ಅಪಹರಣ ಮಾಡಿದ ಏಕೈಕ ಕಾರಣಕ್ಕಾಗಿ ರಾಮಾಯಣ ಜರುಗಲಿಲ್ಲ. ಈ ಘಟನೆಗೆ ಹಿನ್ನೆಲೆಯಾಗಿ ಹಲವಾರು ಘಟನೆಗಳು ಜರುಗಿವೆ. ಒಮ್ಮೆ ರಾವಣನು ತನ್ನ ನೆಚ್ಚಿನ ದೇವರಾದ ಶಿವನನ್ನು ನೋಡಲು ಕೈಲಾಸಕ್ಕೆ ಹೋದ. ಆಗ ಶಿವ ಪಾರ್ವತಿ(Parvathy) ಒಟ್ಟಿಗೆ ಸಮಯ ಕಳೆಯುತ್ತಿದ್ದ ಕಾರಣಕ್ಕೆ ದ್ವಾರಪಾಲಕನಾಗಿದ್ದ ನಂದಿಯು ರಾವಣನಿಗೆ ಒಳಹೋಗಲು ಬಿಡಲಿಲ್ಲ. ಆಗ ಕೋಪಗೊಂಡ ರಾವಣನು ನಂದಿಯೊಂದಿಗೆ ಜಗಳವಾಡಿ ಶಿವನ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡುತ್ತಾನೆ. ಆಗ ನಂದಿಯು ಮಂಗವೊಂದು ನಿನ್ನ ಸಾವಿಗೆ ಕಾರಣವಾಗುತ್ತದೆ ಎಂದು ಶಾಪ ಹಾಕುತ್ತಾನೆ. 

Follow Us:
Download App:
  • android
  • ios