Kiara-Sid Reception: ಕಣ್ಣು ಕೋರೈಸೋ ಎಮರಾಲ್ಡ್ ರಿಂಗ್ ಧರಿಸಿ ಎಲ್ಲರ ಗಮನ ಸೆಳೆದ ಅಂಬಾನಿ ಸೊಸೆ

ಬಾಲಿವುಡ್ ತಾರಾ ಜೋಡಿ ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ ಅದ್ಧೂರಿಯಾಗಿ ಮದ್ವೆಯಾಗಿದ್ದಾರೆ. ಆರತಕ್ಷತೆಯೂ ಗ್ರ್ಯಾಂಡ್ ಆಗಿ ನಡೆದಿದ್ದು ಬಿಟೌನ್ ಮಂದಿ ಫುಲ್ ಮಿಂಚಿದ್ರು. ಸಿದ್‌-ಕಿಯಾರ ಆರತಕ್ಷತೆಯಲ್ಲಿ ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಸಹ ಭಾಗಿಯಾಗಿದ್ದು ಎಲ್ಲರ ಗಮನ ಸೆಳೆದ್ರು.

Share this Video
  • FB
  • Linkdin
  • Whatsapp

ಸದ್ಯ ಬಾಲಿವುಡ್‌ ಅಂಗಳದಲ್ಲಿ ನ್ಯೂ ಮ್ಯಾರೀಡ್ ಕಪಲ್‌ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾರದ್ದೇ ಸುದ್ದಿ. ತಾರಾ ಜೋಡಿ ಫೆಬ್ರವರಿ 12ರಂದು ಮುಂಬೈನಲ್ಲಿ ವಿವಾಹದ ಆರತಕ್ಷತೆಯನ್ನು ಆಯೋಜಿಸಿದರು. ಬಾಲಿವುಡ್‌ ಸೆಲೆಬ್ರಿಟಿಗಳು ಅತ್ಯಾಕರ್ಷಕ ದಿರಿಸು ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಅದರಲ್ಲೂ ಎಲ್ಲರ ಗಮನ ಸೆಳೆದಿದ್ದು, ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ. ಬ್ಲ್ಯಾಕ್‌ ಕಲರ್ ಸೂಟ್ ಹಾಗೂ ಜೋಡಿಯಲ್ಲಿ ಅಂಬಾನಿ ಜೋಡಿ ಮಿಂಚಿದರು.

ವಜ್ರದ ಕಿವಿಯೋಲೆಗಳು ಮತ್ತು ವಜ್ರದ ಬಳೆಯೊಂದಿಗೆ ಕಪ್ಪು ವರ್ಣದ ಸೀರೆಯಲ್ಲಿ ಶ್ಲೋಕಾ ಸಂಪೂರ್ಣವಾಗಿ ಸುಂದರವಾಗಿ ಕಾಣುತ್ತಿದ್ದರು. ಅದರಲ್ಲೂ ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು ಕೈಯಲ್ಲಿ ಕಂಗೊಳಿಸುತ್ತಿದ್ದ ಬೃಹತ್ ಎಮರಾಲ್ಡ್ ರಿಂಗ್‌. ಪಚ್ಚೆ ಉಂಗುರ. iಎಲ್ಲರ ಕಣ್ಣು ಕೋರೈಸುವಂತಿರೋ ಇದರ ಬೆಲೆ ಎಷ್ಟು ಅನ್ನೋ ಬಗ್ಗೆ ಎಲ್ಲರಲ್ಲಿ ಕುತೂಹಲ ಮೂಡಿದೆ.

ಕುತ್ತಿಗೆ ತುಂಬಾ Emerald ಧರಿಸಿದ ಕಿಯಾರಾ; ಸಿದ್ಧ್‌-ಕಿಯಾ ಆರತಕ್ಷತೆಯಲ್ಲಿ ಮಿಂಚಿದ ಬಿ-ಟೌನ್‌ ತಾರೆಯರು

Related Video