ಕೋವಿಶೀಲ್ಡ್ ಪಡೆದ ಬಳಿಕ ದೇಹದಲ್ಲಿ ವಿದ್ಯುತ್ ಸಂಚಾರ, ಮಂಗಳೂರಿನ ಯುವಕರಿಂದ Fact Check
ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಹುಬ್ಬಳ್ಳಿಯ ಅಣ್ಣ-ತಂಗಿ ದೇಹದಲ್ಲಿ ವಿದ್ಯುತ್ ಉತ್ಪತ್ತಿ ಸುದ್ದಿ ಸದ್ದು ಮಾಡಿತ್ತು. ಇದು ನಿಜನಾ, ಸುಳ್ಳಾ ಎಂದು ಮಂಗಳೂರಿನ ಸುರತ್ಕಲ್ ನ ಯುವಕರ ತಂಡ ಫ್ಯಾಕ್ಟ್ ಚೆಕ್ ಮಾಡಿದೆ.
ಮಂಗಳೂರು (ಜೂ. 12): ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಹುಬ್ಬಳ್ಳಿಯ ಅಣ್ಣ-ತಂಗಿ ದೇಹದಲ್ಲಿ ವಿದ್ಯುತ್ ಉತ್ಪತ್ತಿ ಸುದ್ದಿ ಸದ್ದು ಮಾಡಿತ್ತು. ಇದು ನಿಜನಾ, ಸುಳ್ಳಾ ಎಂದು ಮಂಗಳೂರಿನ ಸುರತ್ಕಲ್ ನ ಯುವಕರ ತಂಡ ಫ್ಯಾಕ್ಟ್ ಚೆಕ್ ಮಾಡಿದೆ.
ಮೈಸೂರು ವಿವಿಯಿಂದ ರ್ಯಾಪಿಡ್ ಡಿಟೆಕ್ಷನ್ ಕಿಟ್ ಸಂಶೋಧನೆ
ಇನ್ ವರ್ಟರ್ ಎಲ್.ಇ.ಡಿ ಬಲ್ಬ್ ಬಳಸಿ ಈ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಇನ್ವರ್ಟರ್ ಬಲ್ಬ್ ವಿದ್ಯುತ್ ಇದ್ದಾಗ ಉರಿಯುತ್ತಲೇ ಚಾರ್ಜ್ ಆಗುತ್ತದೆ. ವಿದ್ಯುತ್ ಇಲ್ಲದೇ ಇರುವಾಗ ಒಳಗಿನ ಬ್ಯಾಟರಿ ಸಹಾಯದಿಂದ ಬಲ್ಪ್ ಉರಿಯುತ್ತದೆ. ಸುಮಾರು ನಾಲ್ಕೈದು ಗಂಟೆ ಈ ಬಲ್ಪ್ ಬ್ಯಾಕಪ್ ಕೊಡುತ್ತದೆ. ಸಹಜವಾಗಿಯೇ ಮೈಗೆ ಒತ್ತಿ ಹಿಡಿದಾಗ ಈ ಬಲ್ಪ್ ಉರಿಯುತ್ತದೆ. ಲಸಿಕೆ ತೆಗೆದುಕೊಳ್ಳದೇ ಇದ್ದರೂ ನಮ್ಮ ಮೈ ತಾಗಿದರೂ ಬಲ್ಪ್ ಉರಿಯುತ್ತದೆ ಎಂದು ಪ್ರಾತ್ಯಕ್ಷಿಕೆ ನೀಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.