Asianet Suvarna News

ಮೈಸೂರು ವಿವಿಯಿಂದ ರ್ಯಾಪಿಡ್ ಡಿಟೆಕ್ಷನ್ ಕಿಟ್ ಸಂಶೋಧನೆ

Jun 12, 2021, 8:55 AM IST

ಮೈಸೂರು (ಜೂ. 12): ಕೊರೋನಾ ವೈರಸ್ ಪತ್ತೆ ಹಚ್ಚಲು ಮೈಸೂರು ವಿವಿ ರ್ಯಾಪಿಡ್ ಡಿಟೆಕ್ಷನ್ ಕಿಟ್‌ ಸಂಶೋಧಿಸಿದೆ.ಪ್ರೋ. ರಂಗಪ್ಪ ನೇತೃತ್ವದ ವಿಜ್ಞಾನಿಗಳ ತಂಡ ಹಾಗೂ ಹೈದರಾಬಾದ್ ಮೂಲದ ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ಕಿಟ್ ಸಂಶೋಧನೆ ಮಾಡಲಾಗಿದೆ.

ಕೋವಿಶೀಲ್ಡ್ ಪಡೆದ ಬಳಿಕ ದೇಹದಲ್ಲಿ ವಿದ್ಯುತ್ ಸಂಚಾರ, ಮಂಗಳೂರಿನ ಯುವಕರಿಂದ Fact Check

ಕಿಟ್ ಅಭಿವೃದ್ಧಿಪಡಿಸಲು ಅಣುಜೀವ ವಿಜ್ಞಾನ, ನ್ಯಾನೋ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿವಂತಿಕೆ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಇದರ ಬೆಲೆ ಕೇವಲ 100 ರೂ. ಭಾರತ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿಗೆ ಅನುಮೋದನೆಗಾಗಿ ರವಾನೆ ಮಾಡಲಾಗಿದೆ.