ಗಣೇಶ ಹಬ್ಬದಲ್ಲಿ ಸಿಹಿ ಕಡುಬು ಕೊಡ್ತಾರೆ ರಾಕಿ?: ಯಶ್ 19ನೇ ಸಿನಿಮಾ ನಿರ್ಮಾಣ ಮಾಡೋದು ಯಾರು?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ವರ್ಷವೇ ಕಳೆದಿದ್ದರೂ ಅವರ ಮುಂದಿನ ಸಿನಿಮಾ ಬಗ್ಗೆ ಒಂದೇ ಒಂದು ಅಪ್ಡೇಟ್ ಕೂಡ ಸಿಕ್ಕಿಲ್ಲ. ಸಾಮಾನ್ಯವಾಗಿ ಹಿರೋಗಳ ಮುಂದಿನ ಚಿತ್ರದ ಡೈರೆಕ್ಟರ್ ಯಾರು ಎನ್ನುವ ವಿಚಾರ ಲೀಕ್ ಆಗಿ ಬಿಡುತ್ತದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ವರ್ಷವೇ ಕಳೆದಿದ್ದರೂ ಅವರ ಮುಂದಿನ ಸಿನಿಮಾ ಬಗ್ಗೆ ಒಂದೇ ಒಂದು ಅಪ್ಡೇಟ್ ಕೂಡ ಸಿಕ್ಕಿಲ್ಲ. ಸಾಮಾನ್ಯವಾಗಿ ಹಿರೋಗಳ ಮುಂದಿನ ಚಿತ್ರದ ಡೈರೆಕ್ಟರ್ ಯಾರು ಎನ್ನುವ ವಿಚಾರ ಲೀಕ್ ಆಗಿ ಬಿಡುತ್ತದೆ. ಆದರೆ, ‘ಯಶ್ 19’ ವಿಚಾರದಲ್ಲಿ ಅಂತೆಕಂತೆಗಳು ಹುಟ್ಟಿಕೊಳ್ಳುತ್ತಿವೆ. ಅಲ್ಲದೇ ರಾಕಿ 19ನೇ ಸಿನಿಮಾ ನಿರ್ಮಾಣ ಮಾಡೋದು ಯಾರು ಎಂಬ ಯಕ್ಷ ಪ್ರಶ್ನೆಯು ಎದುರಾಗಿದೆ. ಇನ್ನು ಗಣೇಶ ಹಬ್ಬದಂದು ಯಶ್ ಸಿನಿಮಾ ಬಗ್ಗೆ ಸಿಹಿಸುದ್ದಿ ಸಿಗಲಿದೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಅಭಿಮಾನಿಗಳ ನಿರೀಕ್ಷೆ ಪೂರೈಸುತ್ತಾ? ಎಂದು ಕಾದುನೋಡಬೇಕಿದೆ.