
Viral Video: ನೀರಿಗೆ ತಳ್ಳಿದ ಮ್ಯಾನೆಜರ್‌ಗೆ ಚಪ್ಪಳಿಯಿಂದ ಹೊಡೆದ ಸನ್ನಿ ಲಿಯೋನ್: ವಿಡಿಯೋ ವೈರಲ್
ಸದಾ ತಮ್ಮ ಅಭಿಮಾನಿಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗುವ ಸನ್ನಿ ಲಿಯೋನ್ ಇದೀಗ ಎಲ್ಲರೂ ಅಚ್ಚರಿಪಡುವಂತಹ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ
Sunny Leone Video: ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ (Sunny Leone) ಬಹುಭಾಷಾ ನಟಿಯಾಗಿ ಮಿಂಚ್ತಿರೋ ಕಲಾವಿದೆ. ಸದಾ ತಮ್ಮ ಅಭಿಮಾನಿಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗುವ ಸನ್ನಿ, ಇದೀಗ ಎಲ್ಲರೂ ಅಚ್ಚರಿಪಡುವಂತಹ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬಗೆಗಿನ ಈ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ನೀರಿಗೆ ತಳ್ಳಿದ ಅನ್ನೋ ಕಾರಣಕ್ಕೆ ಸನ್ನಿ ತನ್ನ ಮ್ಯಾನೆಜರ್‌ಗೆ ಚಪ್ಪಲಿಯಿಂದ ಹೊಡೆದಿದ್ದಾರೆ.
ಹೌದು! ತನ್ನ ಮ್ಯಾನೇಜರ್ ಮೇಲೆ ಫುಲ್ ಗರಂ ಆಗಿ ಚಪ್ಪಲಿ ಏಟು ಕೊಡುವ ಮೂಲಕ ಸನ್ನಿ ಲಿಯೋನ್ ಸುದ್ದಿಯಾಗಿದ್ದಾರೆ. ಸನ್ನಿ ಅಂದ್ರೆ ಸಾಕೂ ಹುಡುಗ್ರ ಎದೆಯಲ್ಲಿ ಚಿಟ್ಟೆ ಹಾರಾಡುತ್ತೆ. ಇಷ್ಟು ದಿನ ನೀವ್ ಸನ್ನಿ ಲಿಯೋನ್ ಮುಗ್ದತೆ, ನಗುವನ್ನ ಮಾತ್ರ ನೋಡಿದ್ದೀರಾ. ಆದ್ರೆ ನಾವೀಗ ತೋರಿಸ್ತಿರುವ ಈ ದೃಶ್ಯದಲ್ಲಿ ನೀವ್ ಸನ್ನಿ ಕೋಪವನ್ನ ಕಾಣಬಹುದಾಗಿದೆ.
ಇದನ್ನೂ ಓದಿ:ಪೊಲೀಸರ ಮೇಲೆ ಎರಗಿ ಬಿದ್ದ ಯುವತಿಯರು: ಪ್ರಪೋಸ್ ಮಾಡುವಾಗ ರಿಂಗ್ ಕಸಿದು ಓಡಿದ ಯುವಕ
ಹೀಗೆ ಸ್ವಿಮಿಂಗ್ ಪೂಲ್‌ನಿಂದ ಕಟ್ಟೆಯ ಮೇಲೆ ಸನ್ನಿ ನಡೆದುಕೊಂಡು ಬರ್ತಿದ್ರು. ಈವೇಳೆ ಸಹಾಯಕನೊಬ್ಬ ಸನ್ನಿಗೆ ಬಿಸಿಲು ತಾಗದಂತೆ ಛತ್ರಿ ಹಿಡಿದುಕೊಂಡಿದ್ದ. ಆದ್ರೆ ಹಿಂಬದಿಯಿಂದ ಬಂದ ಸನ್ನಿ ಮ್ಯಾನೇಜರ್ ಅವರನ್ನು ಪೂಲ್‌ಗೆ ತಳ್ಳಿ ಮಜಾ ತೆಗೆದುಕೊಂಡಿದ್ರು.
ಹೀಗೆ ಸನ್ನಿ ನೀರಿಗೆ ಬೀಳ್ತಿದ್ದಂತೆ ಗಾಬರಿಯಿಂದ ಕಿರುಚಿಕೊಂಡಿದ್ದು, ಜೋರಾಗಿ ಆತನಿಗೆ ಬಯ್ಯುತ್ತಾರೆ. ಅಲ್ದೆ ಚಪ್ಪಲಿ ತೆಗೆದುಕೊಂಡು ಆತನ ಮೇಲೆ ಎಸೆದಿದ್ರು. ಈ ವಿಡಿಯೋವನ್ನು ಸ್ವತಃ ಸನ್ನಿ ನನ್ನ ಸೇಡು ತೀರಿಸಿಕೊಂಡೆ ಅಂತ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಸದ್ಯ ಈ ವಿಡಿಯೋ ಕ್ಲಿಪ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.