
'ಶೆಟ್ಟಿ ಮಾಫಿಯಾ' ಅಂದವರಿಗೆ ರಾಜ್ ಶೆಟ್ಟಿ ಉತ್ತರ; ಪ್ರಶ್ನೆ ಕೇಳಿದವ್ರು ಕೌಂಟರ್ ನೋಡಿ ತತ್ತರ!
ಕರ್ನಾಟಕದಲ್ಲಿ ಜನ ಶೆಟ್ಟಿ ಮಾಫಿಯಾ ಶೆಟ್ಟಿ ಗ್ಯಾಂಗ್ ಅಂತೆಲ್ಲಾ ಕರೀತಾರೆ. ನಾನು ಹೇಳೋದು ಏನಂದ್ರೆ ನೀವೂ ಗ್ಯಾಂಗ್ ಕಟ್ಟಿ. ನಿಮಗೆ ಒಬ್ಬರೇ ಇರಿ ಅಂತ ಯಾರು ಹೇಳಿದ್ದಾರೆ. ನಿಮಗೆ ಹೆಸರು ಕೀರ್ತಿ ಬೇಕು. ಆದ್ರೆ ಯಾರ ಜೊತೆಗೂ ಸಹಭಾಗಿತ್ವ ಇಲ್ಲ ಅಂದರೆ ಹೇಗೆ..? ನಿಮ್ಮದೇ ಗ್ಯಾಂಗ್ ಕಟ್ಟಿಕೊಳ್ಳಿ.
ರಾಜ್ ಶೆಟ್ಟಿ ನಟನೆ ನಿರ್ಮಾಣದ ಸು ಫ್ರಂ ಸೋ ಸಿನಿಮಾ ಕನ್ನಡದಲ್ಲಿ ದೊಡ್ಡ ಯಶಸ್ಸು ಗಳಿಸಿ, ಈಗ ಪ್ಯಾನ್ ಇಂಡಿಯಾ ಪಯಣಕ್ಕೆ ಸಜ್ಜಾಗಿದೆ. ಈ ಹೊತ್ತಲ್ಲಿ ರಾಜ್ ಶೆಟ್ಟಿಗೆ ನೀವು ಸಿನಿ ಇಂಡಸ್ಟ್ರಿಯಲ್ಲಿ ನಿಮ್ಮದೇ ಕರಾವಳಿ ಗ್ಯಾಂಗ್ ಮಾಡಿಕೊಳ್ತಾ ಇದ್ದೀರಾ ಅನ್ನೋ ಪ್ರಶ್ನೆ ಎದುರಾಗಿದೆ. ಆ ಪ್ರಶ್ನೆಗೆ ಶೆಟ್ರು ಏನುತ್ತರ ಕೊಟ್ರು..? ಆ ಇನ್ಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಯೆಸ್ ರಾಜ್ ಶೆಟ್ಟರ ಸು ಫ್ರಂ ಸೋ ಸಿನಿಮಾ ಸ್ಯಾಂಡಲ್ವುಡ್ನ ಈ ವರ್ಷದ ಅತಿದೊಡ್ಡ ಹಿಟ್ ಸಿನಿಮಾ ಅನ್ನಿಸಿಕೊಂಡಿದೆ. ಸಣ್ಣ ಬಜೆಟ್ನಲ್ಲಿ ಸಿದ್ದಗೊಂಡ ಈ ಸಿನಿಮಾ ಹತ್ತಿರತ್ತಿರ 50 ಕೋಟಿ ಗಳಿಕೆ ಮಾಡಿದೆ. ಕನ್ನಡ, ಮಲಯಾಳಂ ಬಳಿಕ ಇಂದಿನಿಂದ ತೆಲುಗುನಲ್ಲೂ ರಿಲೀಸ್ ಆಗ್ತಾ ಇದೆ.
ಸು ಫ್ರಂ ಸೋ ಪ್ಯಾನ್ ಇಂಡಿಯಾ ಮೋಡಿ ಮಾಡ್ತಾ ಇರೋ ಹೊತ್ತಲ್ಲಿ ದಿ ಹಾಲಿವುಡ್ ರಿಪೋರ್ಟರ್ ರಾಜ್ ಶೆಟ್ಟರನ್ನ ಸಂದರ್ಶನ ಮಾಡಿದೆ. ಮತ್ತದರಲ್ಲಿ ನೀವು ಕರಾವಳಿ ಕಡೆಯ ಫಿಲ್ಮ್ ಮೇಕರ್ಸ್ ನಿಮ್ಮದೇ ಗ್ಯಾಂಗ್ ಕಟ್ಟಿಕೊಳ್ತೀರಿ. ಬೇರೆಯವರಿಗೆ ಅವಕಾಶ ಕೊಡಲ್ಲ ಅನ್ನೋ ಆರೋಪ ಇದೆಯಲ್ಲಾ ಅನ್ನೋ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಶೆಟ್ರು ಕೊಟ್ಟ ಉತ್ತರ ಏನ್ ಗೊತ್ತಾ..?
ಕರ್ನಾಟಕದಲ್ಲಿ ಜನ ಶೆಟ್ಟಿ ಮಾಫಿಯಾ ಶೆಟ್ಟಿ ಗ್ಯಾಂಗ್ ಅಂತೆಲ್ಲಾ ಕರೀತಾರೆ. ನಾನು ಹೇಳೋದು ಏನಂದ್ರೆ ನೀವೂ ಗ್ಯಾಂಗ್ ಕಟ್ಟಿ. ನಿಮಗೆ ಒಬ್ಬರೇ ಇರಿ ಅಂತ ಯಾರು ಹೇಳಿದ್ದಾರೆ. ನಿಮಗೆ ಹೆಸರು ಕೀರ್ತಿ ಬೇಕು. ಆದ್ರೆ ಯಾರ ಜೊತೆಗೂ ಸಹಭಾಗಿತ್ವ ಇಲ್ಲ ಅಂದರೆ ಹೇಗೆ..? ನಿಮ್ಮದೇ ಗ್ಯಾಂಗ್ ಕಟ್ಟಿಕೊಳ್ಳಿ.
ಹೌದು ಸಿನಿಮಾ ಅಂದ್ರೆ ಟೀಂ ವರ್ಕ್.. ಗ್ಯಾಂಗ್ ಅಥವಾ ತಂಡ ಕಟ್ಟಿಕೊಂಡ್ರೆ ತಪ್ಪೇನಿದೆ ಅಂದಿದ್ದಾರೆ ರಾಜ್ ಶೆಟ್ರು. ಇನ್ನೂ ಸದ್ಯ ಶೆಟ್ರು ಮತ್ತೊಂದು ತಂಡದ ಜೊತೆಗೆ ಕೈ ಜೋಡಿಸಿ ಸಿನಿಮಾ ಮಾಡಿದ್ದಾರೆ ಅದೇ ಕರಾವಳಿ.
ಯೆಸ್ ಪ್ರಜ್ವಲ್ ದೇವರಾಜ್ ನಟನೆಯ ಗುರುದತ್ ಗಾಣಿಗ ನಿರ್ದೇಶನದಲ್ಲಿ ಬರ್ತಾ ಇರೋ ಕರಾವಳಿ ಸಿನಿಮಾದಲ್ಲಿ ರಾಜ್ ಶೆಟ್ಟಿ ಕೂಡ ಇದ್ದಾರೆ. ಸದ್ಯ ಈ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದ್ದು, ಸು ಫ್ರಂ ಸೋದ ಕರುಣಾಕರ ಗುರೂಜಿ ಇಲ್ಲಿ ಮಾವೀರನಾಗಿ ಕಾಣಿಸಿಕೊಂಡಿದ್ದಾರೆ.
ಶೆಟ್ಟರ ಗೆಟಪ್ ನೋಡ್ತಾ ಇದ್ರೆ ಕಂಬಳ ಓಡಿಸೋ ಮಹಾವೀರನ ಪಾತ್ರ ಇವರದ್ದು ಅನ್ನೋ ಸೂಚನೆ ಸಿಕ್ತಾ ಇದೆ. ಸಿನಿಮಾದಿಂದ ಸಿನಿಮಾಗೆ ರಾಜ್ ಶೆಟ್ಟಿ ವಿಭಿನ್ನ ವಿಶೇಷ ಪಾತ್ರಗಳಲ್ಲಿ ಮಿಂಚ್ತಾ ಇದ್ದಾರೆ. ಸದ್ಯ ಕರಾವಳಿಯಲ್ಲಿ ರಾಜ್ ಶೆಟ್ಟಿ ಅವತಾರ ನೋಡಿದವರು ಥ್ರಿಲ್ ಆಗಿದ್ದಾರೆ. ಶೆಟ್ಟರ ಎಂಟ್ರಿಯಿಂದ ಕರಾವಳಿ ಸಿನಿಮಾ ಬಗ್ಗೆ ನಿರೀಕ್ಷೆ ಡಬಲ್ ಆಗಿದೆ.