ರಶ್ಮಿಕಾ ಮಂದಣ್ಣಗೆ ಮತ್ತೊಬ್ಬ ಕನ್ನಡತಿಯಿಂದ ಸವಾಲ್, ಅಷ್ಟರಲ್ಲೇ ಇನ್ನೊಬ್ಬರೂ ಕಾಲೆಳೆಯೋಕೆ ರೆಡಿನಾ?

ಬಾಕ್ಸ್ ಆಫೀಸ್ ಯಶಸ್ಸಿನ ಆಧಾರದಲ್ಲಿ ಲೆಕ್ಕ ಹಾಕಿದ್ರೆ ರಶ್ಮಿಕಾ ಮಂದಣ್ಣರನ್ನ ಹಿಂದಿಕ್ಕುವವರು ಯಾರೂ ಇಲ್ಲ. ಕನ್ನಡದ ನಟಿಯರು ಮಾತ್ರವಲ್ಲ ಬಾಲಿವುಡ್ ನಟಿಯರು ಸಹ ರಶ್ಮಿಕಾ ಮುಂದೆ ಫೇಲ್. ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿವೆ.

Share this Video
  • FB
  • Linkdin
  • Whatsapp

ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಈಗ ನಂ.1 ನಟಿಮಣಿ ಅಂದ್ರೆ ಅದು ನೋ ಡೌಟ್ ರಶ್ಮಿಕಾ ಮಂದಣ್ಣ. ನಂ.1 ಪಟ್ಟಕ್ಕೇರಿರೋ ಈ ಕನ್ನಡತಿಗೆ ಒಂದು ಮಟ್ಟಕ್ಕೆ ಸವಾಲ್ ಹಾಕ್ತಾ ಇರೋದು ಮತ್ತೊಬ್ಬ ಕನ್ನಡದ ಹುಡುಗಿ ಶ್ರೀಲೀಲಾ. ಅದ್ರಲ್ಲೂ ಶ್ರೀಲೀಲಾ ಮತ್ತು ರಶ್ಮಿಕಾ ಇಬ್ಬರು ಸಿನಿಮಾಗಳ ಆಯ್ಕೆಯಲ್ಲೂ ಪೈಪೋಟಿಗೆ ಬಿದ್ದಿದ್ದಾರೆ. ಹಾಗಾದ್ರೆ ಯಾರ ಬಳಿ ಎಷ್ಟು ಸಿನಿಮಾಗಳಿವೆ..? ರಶ್ಮಿಕಾ ಹೆಚ್ಚೋ ಶ್ರೀಲೀಲಾ ಹೆಚ್ಚೋ ನೋಡೋಣ ಬನ್ನಿ..

ಶ್ರೀಲೀಲಾ vs ರಶ್ಮಿಕಾ.. ಯಾರು ದೊಡ್ಡ ಸ್ಟಾರ್..? ಯಾರ ಕೈಯಲ್ಲಿ ಹೆಚ್ಚು ಸಿನಿಮಾ.?
ಕನ್ನಡದ ನಟಿಯರು ಈಗ ಪರಭಾಷಾ ಸಿನಿ ಜಗತ್ತಲ್ಲಿ ಮಿಂಚ್ತಾ ಇರೋದು ನಿಮ್ಗೆಲ್ಲಾ ಗೊತ್ತೇ ಇದೆ. ಅದರಲ್ಲೂ ಒಂದು ಕೈ ಮೇಲೆ ಅಂದ್ರೆ ಅದು ರಶ್ಮಿಕಾ ಮಂದಣ್ಣ. ಆದ್ರೆ ಶ್ರೀವಲ್ಲಿಗೂ ಎಲ್ಲ ಭಾಷೆಗಳಲ್ಲಿಯೂ ಸಖತ್ ಸ್ಪರ್ಧೆ ನೀಡುತ್ತಿರುವುದು ಕನ್ನಡದ ಮತ್ತೊಬ್ಬ ನಟಿ ಶ್ರೀಲೀಲಾ. ಅಷ್ಟಕ್ಕೂ ಇಬ್ಬರಲ್ಲಿ ಯಾರ ಕೈಯಲ್ಲಿ ಹೆಚ್ಚು ಸಿನಿಮಾಗಳಿವೆ..? ಯಾರ ಕೈಯಲ್ಲಿ ದೊಡ್ಡ ಸಿನಿಮಾಗಳಿವೆ..? ಗೊತ್ತಾ..? ಅದನ್ನ ಕೇಳಿದ್ರೆ ಇಬ್ಬರ ಫಾಲೋವರ್ಸ್​ ಹುಬ್ಬೇರಿಸುತ್ತೀರಾ..

ಬಾಕ್ಸ್​ ಆಫೀಸ್​ ವಿಷಯದಲ್ಲಿ ರಶ್ಮಿಕಾ ಟಾಪರ್, ಸಿನಿಮಾಗಳ ವಿಷಯದಲ್ಲಿ ಶ್ರೀಲೀಲಾ ಸೂಪರ್..!
ಬಾಕ್ಸ್ ಆಫೀಸ್ ಯಶಸ್ಸಿನ ಆಧಾರದಲ್ಲಿ ಲೆಕ್ಕ ಹಾಕಿದ್ರೆ ರಶ್ಮಿಕಾ ಮಂದಣ್ಣರನ್ನ ಹಿಂದಿಕ್ಕುವವರು ಯಾರೂ ಇಲ್ಲ. ಕನ್ನಡದ ನಟಿಯರು ಮಾತ್ರವಲ್ಲ ಬಾಲಿವುಡ್ ನಟಿಯರು ಸಹ ರಶ್ಮಿಕಾ ಮುಂದೆ ಫೇಲ್. ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿವೆ. ಅನಿಮಲ್, ಪುಷ್ಪ 2, ಛಾವಾ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸಾವಿರ ಕೋಟಿ ಗಳಿಸಿವೆ. ಅದರ ಜೊತೆಗೆ ‘ಕುಬೇರ’, ‘ಸಿಖಂಧರ್’ ಸಿನಿಮಾಗಳು 300 ಕೋಟಿಗೂ ಹೆಚ್ಚು ಗಳಿಕೆ ಮಾಡಿವೆ. ಬಾಕ್ಸ್ ಆಫೀಸ್ ವಿಚಾರದಲ್ಲಿ ಶ್ರೀಲೀಲಾಗಿಂತಲೂ ಬಹಳ ಮುಂದಿದ್ದಾರೆ ರಶ್ಮಿಕಾ..

ಕೈಯಲ್ಲಿರುವ ಸಿನಿಮಾಗಳ ಲೆಕ್ಕಕ್ಕೆ ಬಂದ್ರೆ ನಯಾ ಮಿಲ್ಕಿ ಬ್ಯೂಟಿ ಶ್ರೀಲೀಲಾ ರಶ್ಮಿಕಾಗಿಂತಲೂ ಮುಂದಿದ್ದಾರೆ. ಶ್ರೀಲೀಲಾ ಈಗ ಎರಡು ತೆಲುಗು ಸಿನಿಮಾಗಳ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಒಂದು ತಮಿಳು ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಹಿಂದಿಯಲ್ಲಿ ಬರೋಬ್ಬರಿ ನಾಲ್ಕು ಸಿನಿಮಾಗಳು ಶ್ರೀಲೀಲಾ ಕೈಯಲ್ಲಿವೆ. ತೆಲುಗಿನಲ್ಲಿ ರವಿತೇಜ ಜೊತೆಗೆ ‘ಮಾಸ್ ಜಾತರ’, ಪವನ್ ಕಲ್ಯಾಣ್ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ‘ಪರಾಶಕ್ತಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ‘ಆಶಿಖಿ 3’ ಹಾಗೂ ಸೈಫ್ ಅಲಿ ಖಾನ್ ಪುತ್ರನ ಹೊಸ ಸಿನಿಮಾ. ಧರ್ಮಾ ಪ್ರೊಡಕ್ಷನ್​​ನ ಸಿನಿಮಾ ಹಾಗೂ ಇತ್ತೀಚೆಗಷ್ಟೆ ಘೋಷಣೆಯಾದ ಬಾಬಿ ಡಿಯೋಲ್ ನಟನೆಯ ಹೊಸ ಸಿನಿಮಾನಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ..

ರಶ್ಮಿಕಾ ಶ್ರಿಲೀಲಾ ಮಧ್ಯೆ ಶೈನ್ ಆದ ರುಕ್ಮಿಣಿ ವಸಂತ್..!
ಒಂದ್ ಕಡೆ ರಶ್ಮಿಕಾ ಹಾಗು ಶ್ರೀಲೀಲಾ ಪೈಪೋಟಿಗೆ ಬಿದ್ದಿದ್ರೆ, ಈ ಕಡೆ ಕಾಂತಾರದ ಮಹರಾಣಿ ರುಕ್ಮಿಣಿ ವಸಂತಾ ಮೆಲ್ಲಕೆ ಮೇಲಕ್ಕೇರುತ್ತಿದ್ದಾರೆ. ರಶ್ಮಿಕಾರಿಂದ ನ್ಯಾಷನಲ್ ಕ್ರಶ್ ಪಟ್ಟ ಕಿತ್ತುಕೊಂಡಿರೋ ರುಕ್ಮಿಣಿ ವಸಂತ್ ನಂಬರ್ 01 ಪಟ್ಟದ ಮೇಲೂ ಕಣ್ಣಿಟ್ಟು ಕೆಲಸ ಶುರು ಮಾಡಿದ್ದಾರೆ. ಒಟ್ನಲ್ಲಿ ಸೌತ್​, ನಾರ್ತ್ ಸಿನಮಾ ಉದ್ಯಮವನ್ನು ಕನ್ನಡ ಹೀರೋಯಿನ್ಸ್​ಗಳೇ ಆಳುತ್ತಿರೋದು ಖುಷಿಯ ವಿಷಯ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Related Video