
ವಿನಯ್ ರಾಜ್ಕುಮಾರ್ ಜೊತೆ ರಮ್ಯಾ ಫೋಟೋ ಶೇರಿಂಗ್; ಪ್ರಶ್ನೆಗೆ ನೇರ ಉತ್ತರ ಕೊಟ್ಟ ನಟಿ!
‘ವಿನಯ್ ಜೊತೆ ಡೇಟಿಂಗ್ ಮಾಡ್ತಿದ್ದೀರಾ’ ಎಂದು ನೆಟ್ಟಿಗರು ಕೇಳಿದ ಪ್ರಶ್ನೆಗೆ ನಟಿ ರಮ್ಯಾ ಸೋಷಿಯಲ್ ಮೀಡಿಯಾ ಮೂಲಕ ನೇರ ಉತ್ತರ ಕೊಟ್ಟಿದ್ದಾರೆ.
Ramya Vinay Rajkumarಸ್ಯಾಂಡಲ್ವುಡ್ ಕ್ವೀನ್ ರಮ್ಯಾಗೆ (Ramya) ಮದುವೆ ಮಾಡಿಸೋಕೆ ಸಾಕಷ್ಟು ಜನ ಸಿದ್ಧರಿದ್ದಾರೆ. ಆದ್ರೆ ರಮ್ಯಾ ಮಾತ್ರ ಅವರೆಲ್ಲರ ಕಣ್ ತಪ್ಪಿಸಿಕೊಂಡೇ ಓಡಾಡುತ್ತಿದ್ದಾರೆ. ಆದ್ರೆ ಈ ಭಾರಿ ಬಿಡ್ಲೇ ಬಾರ್ದು. ರಮ್ಯಾಗೊಂದು ಗಂಡ್ ಹುಡುಕ್ಲೇ ಬೇಕು ಅಂತ ಆಕೆಯ ಫಾಲೋವರ್ಸು ಒಬ್ಬ ಗಂಡನ್ನು ರೆಡಿ ಮಾಡಿ ತಂದು ನಿಲ್ಲಿಸಿಯೇ ಬಿಟ್ಟಿದ್ದಾರೆ. ಹಾಗಾದ್ರೆ ರಮ್ಯಾಗಾಗಿ ಸೋಷಿಯಲ್ ಮೀಡಿಯಾ ಮಂದಿ ಹುಡುಕಿದ ಆ ಹುಡುಗ ಯಾರು..? ರಮ್ಯಾ ಆ ಹುಡುಗನ ಬಗ್ಗೆ ಏನಂದ್ರು ಅಂತ ನೋಡೋಣ ಬನ್ನಿ..
ರಮ್ಯಾ.. ಕನ್ನಡ ಚಿತ್ರರಂಗಕ್ಕೆ ಈಕೆ ಕ್ವೀನ್.. ವಯಸ್ಸು 40 ದಾಟಿದ್ರೂ, ಸೌಂದರ್ಯದಲ್ಲಿ ಹಳೇ ರಮ್ಯಾ ಇಂದಿಗೂ ಅಜರಾಮರ. ಹೀಗಾಗೆ ರಮ್ಯಾರನ್ನ ಸ್ಯಾಂಡಲ್ವುಡ್ ಕ್ವೀನ್ ಪಟ್ಟದಿಂದ ಕೆಳಗಿಳಿಸೋಕೆ ಯಾರಿಂದಲೂ ಆಗಿಲ್ಲ. ಆದ್ರೆ ಅದೆಲ್ಲ ಸರಿ ನಮ್ ಪದ್ಮಾವತಿ ಆ ಕಡೆ ಸಿನಿಮಾ ಮಾಡಲ್ಲ, ಈ ಕಡೆ ರಾಜಕೀಯಕ್ಕೂ ಬರಲ್ಲ. ಮದ್ವೆನು ಆಗಲ್ವಲ್ಲ ಯಾಕೆ ಅನ್ನೋ ಪ್ರಶ್ನೆ ಫಾಲೋವರ್ಸ್ಗೆ ಇದ್ದೇ ಇದೆ. ಹೀಗಾಗಿ ರಮ್ಯಾ ಮದುವೆ ಬಗ್ಗೆ ಹತ್ತಾರು ಕಥೆ ಕಾದಂಬರಿಗಳು ಸೃಷ್ಟಿಯಾಗಿವೆ.
ಕ್ವೀನ್ ರಮ್ಯಾಗೆ ಗಂಡು ಹುಡುಕಿದ ಫಾಲೋವರ್ಸ್; ಫ್ಯಾನ್ಸ್ ಹುಡುಕಿಕೊಟ್ಟ ಆ ಹುಡುಗ ಯಾರು ಗೊತ್ತಾ?
ನಟಿ ರಮ್ಯಾಗೆ ಬಾಯ್ ಫ್ರೆಂಡ್ ಸಿಕ್ಕಿದ್ದಾರೆ. ರಮ್ಯಾ ಮದುವೆ ಆಗೋದು ಇವರನ್ನೇ ಅಂತ ಸಾಮಾಜಿಕ ಜಾಲತಾಣಡಲ್ಲಿ ದೊಡ್ಡ ಬಾಂಬ್ ಬಿದ್ದಿದೆ. ಹಾಗಾದ್ರೆ ರಮ್ಯಾ ಮದುವೆ ಆಗೋದು ಯಾರನ್ನ ಅಂತ ಹುಡುಕಿದ್ರು. ಅಲ್ಲಿ ಸಿಕ್ಕಿದ್ದು ದೊಡ್ಮನೆಯ ಹುಡುಗ ವಿನಯ್ ರಾಜ್ ಕುಮಾರ್ರನ್ನ ಅನ್ನೋ ಸಂಗತಿ. ಅರೆ ಇದೇನಪ್ಪ ಇದೆಲ್ಲಾ ಸಾಧ್ಯಾನಾ ಅಂದ್ರೆ ಕಂಡಿತ ಇಲ್ಲ. ಇದು ರಮ್ಯಾ ಫಾಲೋವರ್ಸ್ ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಸಿದ ಕಟ್ಟುಕತೆ. ಆ ಕಟ್ಟುಕಥೆಗೆ ಕಾರಣ ರಮ್ಯಾ ವಿನಯ್ರ ಈ ಫೋಟೋಗಳು..
ವಿನಯ್ ಜೊತೆ ಡೇಟಿಂಗ್ ಮಾಡ್ತಿದ್ದೀರಾ ರಮ್ಯಾ; ನೆಟ್ಟಿಗರ ನೇರ ಪ್ರಶ್ನೆಗೆ ನೇರ ಉತ್ತರ ಕೊಟ್ಟ ರಮ್ಯಾ..!
ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ವಯಸ್ಸೆಲ್ಲಿ. ನಟಿ ರಮ್ಯಾ ವಯಸ್ಸೆಲ್ಲಿ. ರಮ್ಯಾ ಈಗ ಸ್ವೀಟ್ 40 ದಾಟಿದ್ದಾರೆ. ಆದ್ರೆ ವಿನಯ್ ರಮ್ಯಾ ಲಂಡನ್ನ ಈ ಫೋಟೋಗಳನ್ನ ನೋಡಿದವರು. ಇವರಿಬ್ಬರು ಡೇಟಿಂಗ್ನಲ್ಲಿದ್ದಾರೆ ಅಂತ ವೈರಲ್ ಮಾಡೋಕೆ ಶುರು ಮಾಡಿದ್ರು. ಇದಕ್ಕೆ ಉತ್ತರ ಕಟ್ಟಿರೋ ರಮ್ಯಾ ನೀವುಗಳು ತುಂಬಾ ಫನ್ನಿ, ನೀವು ಏನು ಯೋಚಿಸುತ್ತೀರಿ ಅಂತ ಮೊದಲೇ ಗೊತ್ತಾಗುತ್ತದೆ. ವಿನಯ್ ನನ್ನ ಚಿಕ್ಕ ತಮ್ಮನಿದ್ದಂತೆ. ನಿಮ್ಮ ಯೋಚನೆಗಳಿಗೆ ಸ್ವಲ್ಪ ಕಡಿವಾಣ ಹಾಕಿ ಎಂದು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ.
ಈ ಹಿಂದೆಯೂ ರಮ್ಯಾ ಮ್ಯಾರೇಜ್ ಬಗ್ಗೆ ಅಂತೆ ಕಂತೆಗಳ ಸರಮಾಲೆಯೇ ಸೃಷ್ಟಿಯಾಗಿದ್ದು ಇದೆ. ಕಳೆದ ವರ್ಷ ಉಧ್ಯಮಿಯೊಬ್ಬರ ಜೊತೆ ನವೆಂಬರ್ನಲ್ಲಿ ರಮ್ಯಾ ಮದುವೆ ಆಗುತ್ತಾರೆ ಅಂತ ಭಾರಿ ಟಾಕ್ ಎದ್ದಿತ್ತು. ಅಷ್ಟೆ ಅಲ್ಲ ಸಂಜೀವ್ ಅನ್ನೋ ವ್ಯಕ್ತಿ ಜೊತೆ ರಮ್ಯಾ ಫೋಟೋ ವೈರಲ್ ಆಗಿ ಅವರಿಬ್ಬರು ಲವ್ನಲ್ಲಿದ್ದಾರೆ ಅಂತ ಗುಲ್ಲೆದ್ದಿತ್ತು. ಆದ್ರೆ ಇದೆಲ್ಲದಕ್ಕೂ ರಮ್ಯಾ ನೋ ವೇ ಚಾನ್ಸೆ ಇಲ್ಲ ಅಂದಿದ್ರು. ಈಗ ವಿನಯ್ ಜೊತೆಗಿನ ಕ್ಲೋಸ್ ಫೋಟೋಗಳು ಎಲ್ಲೆಡೆ ದಾಂಗುಡಿ ಇಟ್ಟು ಮತ್ತೆ ರಮ್ಯಾರ ಮದುವೆ ವಿಷಯವನ್ನ ಲೈಮ್ಲೈಟ್ಗೆ ತಂದಿವೆ.
ಈ ಸೋಷಿಯಲ್ ಮೀಡಿಯಾ ಹೇಗೆ ಗೊತ್ತಾ..? ಹಿಂದೆ ಮುಂದೆ ಯೋಚ್ನೇನೆ ಮಾಡಲ್ಲ. ಯಾರ ಬಗ್ಗೆಯಾದ್ರು ಇಲ್ಲ ಸಲ್ಲದ ಕಥೆ ಕಟ್ಟಬೇಕು ಅಂದ್ರೆ ಸೋಷಿಯಲ್ ಮೀಡಿಯಾವನ್ನ ಬಳಸಿಕೊಂಡ್ ಬಿಡ್ತಾರೆ. ಈಗ ರಮ್ಯಾ ಹಾಗು ವಿನಯ್ ರಾಜ್ ಕುಮಾರ್ ವಿಷಯದಲ್ಲೂ ಅದೇ ಆಗಿದೆ. ದೊಡ್ಮನೆಯಿಂದಲೇ ನಾಯಕಿ ಆಗಿ ಸಿನಿಮಾ ರಂಗಕ್ಕೆ ಬಂದ ನಟಿ ರಮ್ಯಾ ಈಗ ದೊಡ್ಮನೆ ಸೊಸೆ ಆಗುತ್ತಾರೆ ಅನ್ನೋ ಮಾತು ಚಾಲ್ತಿಯಲ್ಲಿದೆ. ಆದ್ರೆ ಇದೆಲ್ಲಾ ಸುಳ್ಳ ಅಂತ ರಮ್ಯಾ ಹೇಳಿದ್ದು, ಇದು ಇಲ್ಲಿಗೆ ನಿಲ್ಲಲಿ ಅಂತ ಕೇಳಿಕೊಂಡಿದ್ದಾರೆ..
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ…