ದೇವ ಭೂಮಿ ನೇಪಾಳದಲ್ಲಿಯೂ ಶೂಟಿಂಗ್; ಕಾಂತಾರ ಪ್ರೀಕ್ವೆಲ್‌ ಬಿಡುಗಡೆಗೆ ಇನ್ನೆಷ್ಟು ದಿನ ಬಾಕಿ?

ಡಿವೈನ್ ಸ್ಟಾರ್ ರಿಷಬ್​ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಮಾಡಿದ ಮೋಡಿ ಅಂತಿತ್ತದ್ದಲ್ಲ. ಶೆಟ್ರು ಕೊಟ್ಟ ಒಂದೇ ಒಂದು ಕಾಂತಾರದ ಎಂಟರ್​​ಟೈನ್ಮೆಂಟ್ ಟ್ರೀಟ್​ಮೆಂಟ್​​​ ಇಂದಿಗೂ ಆ ಸಿನಿಮಾ ಪ್ರೇಕ್ಷಕರ ಕಣ್ಣಲ್ಲಿದೆ. ಇದೀಗ ಕಾಂತಾರ ಚಾಪ್ಟರ್​​ ಒನ್ ಸಿನಿಮಾ ಬಿಡುಗಡೆ ಆಗುತ್ತಿದೆ.

Share this Video
  • FB
  • Linkdin
  • Whatsapp

ಅಕ್ಟೋಬರ್​ 2ಕ್ಕೆ ಕಾಂತಾರ ಚಾಪ್ಟರ್​ ಒನ್ (Kantara Prequel) ಸಿನಿಮಾ ರಿಲೀಸ್​ ಆಗ್ತಾ ಇದೆ. ಈ ಸಿನಿಮಾ ವೆಲ್​​ ಕಮ್​​​ಗೆ ಥಿಯೇಟರ್​ಗಳು ಸಜ್ಜಾಗುತ್ತಿವೆ. ಮುಚ್ಚಿಹೋಗಿದ್ದ ಹಲವು ಚಿತ್ರಮಂದಿರಗಳು ನಮಗೂ ಸಿನಿಮಾ ಕೊಡಿ ಅಂತ ಬೇಡಿಕೆ ಇಡುತ್ತಿದ್ದಾರೆ. ಇದೀಗ ಈ ದೈವನ ಕತೆಯ ಕಾಂತಾರ ಸಿನಿಮಾಗೆ ದೇವ ಭೂಮಿ ನೇಪಾಳದಲ್ಲೂ ಭಾರಿ ಬೇಡಿಕೆ ಬಂದಿದೆ. ಹಾಗಾದ್ರೆ ಕಾಂತಾರಕ್ಕೂ ನೇಪಾಳಕ್ಕೂ ಇರೋ ಕನೆಕ್ಷನ್ ಏನು..? ನೋಡೋಣ ಬನ್ನಿ..

ತೆರೆ ಮೇಲೆ ಕಾಂತಾರ ನರ್ಥನಕ್ಕೆ 26 ದಿನ ಭಾಕಿ; ದೇವ ಭೂಮಿ ನೇಪಾಳದಲ್ಲಿ ಕಾಂತಾರ ದೈವ ನರ್ಥನ..!

ಡಿವೈನ್ ಸ್ಟಾರ್ ರಿಷಬ್​ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಮಾಡಿದ ಮೋಡಿ ಅಂತಿತ್ತದ್ದಲ್ಲ. ಶೆಟ್ರು ಕೊಟ್ಟ ಒಂದೇ ಒಂದು ಕಾಂತಾರದ ಎಂಟರ್​​ಟೈನ್ಮೆಂಟ್ ಟ್ರೀಟ್​ಮೆಂಟ್​​​ ಇಂದಿಗೂ ಆ ಸಿನಿಮಾ ಪ್ರೇಕ್ಷಕರ ಕಣ್ಣಲ್ಲಿದೆ. ಇದೀಗ ಕಾಂತಾರ ಚಾಪ್ಟರ್​​ ಒನ್ ಸಿನಿಮಾ ಬಿಡುಗಡೆ ಆಗುತ್ತಿದೆ. ಅಕ್ಟೋಬರ್​ 2 ಕ್ಕೆ ಕಾಂತಾರ ತೆರೆ ಮೇಲೆ ಬರುತ್ತಿದೆ. ಕಾಂತಾರ ರಿಲೀಸ್​​ಗೆ ಇನ್ನು 26 ದಿನ ಮಾತ್ರ ಭಾಕಿ ಇದೆ. ಪಂಜುರ್ಲಿ, ಗುಳಿಗ ದೈವದ ಕಾರಣಿಕದ ಕತೆ ಹೇಳೋ ಈ ಕಾಂತಾರ ಚಾಪ್ಟರ್​​ ಒನ್ ಸಿನಿಮಾ ದೇವ ಭೂಮಿ ನೇಪಾಳದಲ್ಲೂ ಪ್ರದರ್ಶನ ಆಗುತ್ತಿದೆ..

ಕಾಂತಾರ ಚಾಪ್ಟರ್​ ಒನ್ ಸಿನಿಮಾಗೆ ದೇಶಾದ್ಯಂತ ಭಾರಿ ಬೇಡಿಕೆ ಇದೆ. ತೆಲುಗು ಭಾಷಾ ಪ್ರಾಂತ್ಯ, ತಮಿಳು, ಮಲೆಯಾಳಂ, ಉತ್ತರ ಭಾರತದಲ್ಲಿ ಹಿಂದಿ, ಬೆಂಗಾಳಿ ಭಾಷೆ ಹಾಗು ನೇಪಾಳಿ ಭಾಷೆಯಲ್ಲೂ ಸಿನಿಮಾ ತೆರೆಗೆ ಬರುತ್ತಿದೆ. 80 ಪರಸೆಂಟ್ ಹಿಂದುಗಳೇ ಇರೋ ನೇಪಾಳದಲ್ಲಿ ಈ ಧೈವ ಕಾರಣಿಕ ಸಿನಿಮಾ ಬಂದ್ರೆ ಬಿಗಿದಪ್ಪಿಕೊಳ್ಳುತ್ತಾರೆ ಅನ್ನೋ ಲೆಕ್ಕಾಚಾರ ಹೊಂಬಾಳೆ ಪ್ರೊಡಕ್ಷನ್​​ನದ್ದು. ಹೀಗಾಗಿ ನೇಪಾಳದಲ್ಲಿ ಕಾಂತಾರ ಚಾಪ್ಟರ್1 ಸಿನಿಮಾ ಬಿಡುಗಡೆ ಮಾಡೋದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಕೆಜಿಎಫ್​, ಬಾಹುಬಲಿ ವಿತರಕರಿಂದ ಕಾಂತಾರ ವಿತರಣೆ..!

ಉತ್ತರ ಭಾರತ ಹಾಗು ನೇಪಾಳದಲ್ಲಿ ಕಾಂತಾರ ಚಾಫ್ಟರ್ ಒನ್ ಸಿನಿಮಾ ವಿತರಣೆ ಮಾಡುತ್ತಿರೋದು AA Films ನ ಅನಿಲ್ ತಡಾನಿ. ಕೆಜಿಎಫ್​ ಹಾಗು ಬಾಬುಬಲಿ ಸಿನಿಮಾಗಳನ್ನ ಹಿಂದಿ ಭಾಷೆಯಲ್ಲಿ ಪ್ರೇಕ್ಷಕರಿಗೆ ತಲುಪಿಸಿದ್ದು ಇವರೇ. ಈಗ ಕಾಂತಾರ ಚಾಪ್ಟರ್​ ಒನ್ ಸಿನಿಮಾ ವಿತರಣೆಯನ್ನೂ ಮಾಡುತ್ತಿದ್ದಾರೆ. ಬರೋಬ್ಬರಿ 160 ಕೋಟಿಗೆ ಹಿಂದಿ ವಿತರಣೆ ಹಕ್ಕನ್ನ ಸೇಲ್ ಮಾಡಲಾಗಿದೆ ಅನ್ನೋ ಮಾಹಿತಿ ಇದೆ.

ದಸರಾ ಹಬ್ಬಕ್ಕೆ ಕಾಂತಾರ ಚಾಪ್ಟರ್​ 1 ಟ್ರೈಲರ್​ ರಿಲೀಸ್..!
ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಕೆಲಸದಲ್ಲಿ ಇನ್ನೂ ಬ್ಯುಸಿ ಆಗಿದ್ದಾರೆ. ಆದ್ರೆ ಈ ಸಿನಿಮಾ ಟ್ರೈಲರ್​ ಯಾವಾಗ ಬರುತ್ತೆ ಅನ್ನೋ ಕುತೂಲಹದ ಕಣ್ಣುಗಳು ಕಾಯ್ತಾ ಇವೆ. ಇದಕ್ಕೆ ಬೆಸ್ಟ್​ ದಿನ ಅಂದ್ರೆ ನಾಡ ಹಬ್ಬ ದಸರಾ. ಸೆಪ್ಟೆಂಬರ್​ 22ಕ್ಕೆ ಕಾಂತಾರ ಟ್ರೈಲರ್​ ರಿಲೀಸ್ ಆಗುತ್ತೆ ಅಂತ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಎಲ್ಲಾ ಸಿನಿ ಪ್ರೇಕ್ಷಕರ ಕಣ್ಣು ಕಾಂತಾರ ಚಾಪ್ಟರ್​ ಒನ್​ ಮೇಲೆ ಬಿದ್ದಿರೋದಂತು ನಿಜ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Related Video