
ವೈನ್ ಹೀರಿ ವೈನಾಗಿ ಕುಣಿಯಲಾಂಭಿಸೋ ರಶ್ಮಿಕಾ, ಮಲೈಕಾ ಜೊತೆ ಸೌಂದರ್ಯ ಸಮರವೇ?
ಥಮ ಟ್ರೈಲರ್ ನೋಡ್ತಿದ್ರೆ ಇದರಲ್ಲೊಂದು ಮಜವಾದ ಹಾರರ್ ಕಾಮಿಡಿ ಕಹಾನಿ ಇದೆ ಅನ್ನೋದು ಗೊತ್ತಾಗುತ್ತೆ. ರಶ್ಮಿಕಾ ಇಲ್ಲಿ ಬೇತಾಳವಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆಂದಿಗಿಂತಲೂ ಹಾಟ್ ಅವತಾರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಈ ಮಾದಕ ಬೇತಾಳವನ್ನ ನೋಡೋದಕ್ಕೆ ಫ್ಯಾನ್ಸ್ ಕಾತುರದಿಂದ ಕಾಯ್ತಾ ಇದ್ದಾರೆ.
ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಹಾರರ್ ಕಾಮಿಡಿ ಸಿನಿಮಾ ಥಾಮಾ ದೀಪಾವಳಿಗೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಈ ಸಿನಿಮಾದ ಪಾರ್ಟಿ ಸಾಂಗ್ ಪಾಯ್ಸನ್ ಬೇಬಿ ರಿಲೀಸ್ ಆಗಿದ್ದು ಅಕ್ಷರಶಃ ಬಿರುಗಾಳಿ ಎಬ್ಬಿಸಿದೆ. ಮುನ್ನಿ ಕುಣಿತ.. ಕಿರಿಕ್ ಬ್ಯೂಟಿ ಕುಡಿತವಿರುವ ಈ ಹಾಡು ಅದೆಷ್ಟು ಮಾದಕವಾಗಿದೆ ಅಂದ್ರೆ ಪಡ್ಡೆ ಹುಡುಗರು ನಶೆಯಲ್ಲಿ ತೇಲ್ತಾ ಇದ್ದಾರೆ. ರಶ್ಮಿಕಾ-ಮಲೈಕಾರ ಈ ಸೌಂದರ್ಯ ಸಮರ ಸದ್ಯ ಹಾಟ್ ಟಾಪಿಕ್ ಆಗಿದೆ.
ಯೆಸ್ ಬಾಲಿವುಡ್ನ ರೊಮ್ಯಾಂಟಿಕ್ ಹಾರರ್ ಕಾಮಿಡಿ ಸಿನಿಮಾ 'ಥಮ' ರಿಲೀಸ್ಗೆ ಸಜ್ಜಾಗಿದ್ದು, ತನ್ನ ಬತ್ತಳಿಕೆಯಲ್ಲಿರೋ ಒಂದೊಂದೇ ಅಸ್ತ್ರವನ್ನ ಸ್ಯಾಂಪಲ್ ರೂಪದಲ್ಲಿ ತೋರಿಸ್ತಾ ಇದೆ. ಸದ್ಯ ಮಲೈಕಾ & ರಶ್ಮಿಕಾ ಮಾದಕ ಕುಣಿತವಿರುವ ಪಾಯ್ಸನ್ ಬೇಬಿ ಅನ್ನೋ ಪಾರ್ಟಿ ಸಾಂಗ್ ರಿಲೀಸ್ ಆಗಿದ್ದು ಪಡ್ಡೆ ಹೈಕಳನ್ನ ಪಾರ್ಟಿಗೆ ಸಜ್ಜಾಗುವಂತೆ ಕರೆನೀಡಿದೆ.
ಬಾಲಿವುಡ್ನ ಚಿರಯುವತಿ.. ಮುನ್ನಿ ಬದನಾಮ್ ಹುಯಿ ಅಂತ ಕುಣಿದು ಪಡ್ಡೆ ಹುಡುಗರ ಹೃದಯದಲ್ಲಿ ಮಾಯದ ಗಾಯ ಮಾಡಿದ ಮಲೈಕಾ ಥಾಮಾ ಸಿನಿಮಾದ ಈ ಪಾರ್ಟಿ ಸಾಂಗ್ನಲ್ಲಿ ಹೆಜ್ಜೆ ಹಾಕಿದ್ದಾರೆ. 3 ನಿಮಿಷ 2 ಸೆಕೆಂಡ್ಗಳ ಈ ಹಾಡು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಕಿಚ್ಚು ಹಚ್ಚಿದೆ.
ಹಾಡಿನ ಆರಂಭದಲ್ಲಿ ಮಲೈಕಾ ಮಾದಕ ಕುಣಿತ ಇದೆ. ಪಾರ್ಟಿಗೆ ಎಂಟ್ರಿ ಕೊಡುವ ಆಯುಷ್ಮಾನ್ ಖುರಾನ- ರಶ್ಮಿಕಾ ಹಾಡಿನ ಭಾಗವಾಗ್ತಾರೆ. ವೈನ್ ಹೀರಿ ವೈನಾಗಿ ಕುಣಿಯಲಾಂಭಿಸೋ ರಶ್ಮಿಕಾ , ಬಳಿಕ ಮಲೈಕಾ ಜೊತೆ ಸೌಂದರ್ಯ ಸಮರಕ್ಕೆ ಬೀಳ್ತಾರೆ.
ಪಾಯ್ಸನ್ ಬೇಬಿ ಹಾಡಿನ ಕೊನೆಕೊನೆಗೆ ಒಂದೇ ಫ್ರೆಮ್ನಲ್ಲಿ ಮಲೈಕಾ-ರಶ್ಮಿಕಾ ಹೆಜ್ಜೆ ಹಾಕ್ತಾರೆ. ಒಂದೇ ಫ್ರೆಮ್ನಲ್ಲಿ ಎರಡೆರಡು ಬಿಜಲಿ.. ಯಾರನ್ನ ನೋಡೋದು.. ಯಾರನ್ನ ಬಿಡೋದು ಅಂತ ಕಣ್ಣು ಮಿಟುಕಿಸದೇ ಪಡ್ಡೆ ಹುಡುಗರು ಕಂಗಾಲಾಗ್ತಾರೆ.
ಆಹಾ ಇವರಿಬ್ಬರ ಸೌಂದರ್ಯ ಸಮರ ಮತ್ತೆ ಮತ್ತೆ ನೋಡಿದವರೇ ಅಮರ ಅಂತ ಮತ್ತೆ ಮತ್ತೆ ಸಾಂಗ್ನ ನೋಡ್ತಾನೇ ಇದ್ದಾರೆ ರಸಿಕರು. ಸೋ ಪಾಯ್ಸನ್ ಬೇಬಿ ಸಾಂಗ್ ಈಗಾಗ್ಲೇ 15 ಮಿಲಿಯನ್ಗೂ ಅಧಿಕ ವಿವ್ಸ್ ಪಡೆದು ಮುನ್ನುಗ್ತಾ ಇದೆ.
ಮಲೈಕಾ ಅರೋರಾಗೆ ಈಗ 51ರ ಹರೆಯ. 29ರ ಕಿರಿಕ್ ಬ್ಯೂಟಿ ಎದುರು ಈ ಮಾದಕ ಚೆಲುವೆ ಕುಣಿದಿರೋ ಪರಿ ಬೊಂಬಾಟ್ ಆಗಿದೆ. ಇಬ್ಬರಲ್ಲಿ ಯಾರು ಹೆಚ್ಚು ಅಂದ.. ಯಾರು ಹೆಚ್ಚು ಮೋಹಕ ಅಂತ ಫ್ಯಾನ್ಸ್ ಪೈಪೋಟಿಗೆ ಬಿದ್ದಂತೆ ಕಾಮೆಂಟ್ ಮಾಡ್ತಿದ್ದಾರೆ.
ಯೆಸ್ ಥಾಮಾ ಮ್ಯೂಸಿಕ್ ಲಾಂಚ್ ಇವೆಂಟ್ನಲ್ಲೂ ಈ ಮಾದಕ ಕನ್ಯೆಯರು ವೇದಿಕೆ ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಕೂಡ ಇಬ್ಬರೂ ನರ್ತಿಸಿ ನಶೆ ಏರಿಸಿದ್ದಾರೆ.
ಅಂದಹಾಗೆ ಥಾಮಾ ‘ಮ್ಯಾಡೋಕ್ ಹಾರರ್ ಕಾಮಿಡಿ ಯುನಿವರ್ಸ್’ ನ ಹೊಸ ಸಿನಿಮಾ. ವಿಶೇಷ ಅಂದ್ರೆ ಈ ಮೂವಿ ತುಂಬಾ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ. ಆಯುಷ್ಮಾನ್ ಖುರಾನಾ, ನವಾಜುದ್ದಿನ್ ಸಿದ್ದಿಕಿ, ಪರೇಶ್ ರಾವಲ್ ಜೊತೆಗೆ ನಮ್ಮ ಕಿರಿಕ್ ಬ್ಯೂಟಿ ರಶ್ಮಿಕಾ ಕೂಡಾ ಇದ್ದಾರೆ. ಮುಂಜ್ಯಾ ಖ್ಯಾತಿಯ ಆದಿತ್ಯ ಈ ಸಿನಿಮಾಗೆ ಌಕ್ಷನ್ ಕಟ್ ಹೇಳಿದ್ದಾರೆ.
ಥಾಮಾ ಟ್ರೈಲರ್ ನೋಡ್ತಿದ್ರೆ ಇದರಲ್ಲೊಂದು ಮಜವಾದ ಹಾರರ್ ಕಾಮಿಡಿ ಕಹಾನಿ ಇದೆ ಅನ್ನೋದು ಗೊತ್ತಾಗುತ್ತೆ. ರಶ್ಮಿಕಾ ಇಲ್ಲಿ ಬೇತಾಳವಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆಂದಿಗಿಂತಲೂ ಹಾಟ್ ಅವತಾರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಈ ಮಾದಕ ಬೇತಾಳವನ್ನ ನೋಡೋದಕ್ಕೆ ಫ್ಯಾನ್ಸ್ ಕಾತುರದಿಂದ ಕಾಯ್ತಾ ಇದ್ದಾರೆ.
ಥಾಮಾ ಸಿನಿಮಾ ದೀಪಾವಳಿಗೆ ವರ್ಲ್ಡ್ವೈಡ್ ತೆರೆಗೆ ಬರಲಿದೆ. ಸದ್ಯ ರಿಲೀಸ್ ಆಗಿರೋ ಪಾಯ್ಸನ್ ಬೇಬಿ ಸಾಂಗ್ ನೋಡಿದ ಮೇಲೆ, ಈ ಸಾರಿ ದೀಪಾವಳಿಗೆ ನಮ್ಮ ಹುಡುಗರು ಪಟಾಕಿ ಹಚ್ಚೋದೇ ಡೌಟು. ಈ ಬಿಜಲಿಗಳ ಬಾಣ ಬಿರುಸಿನಂಥ ನರ್ತನದೆದ್ರು ಅದೆಂಥಾ ಪಟಾಕಿನೂ ಸಪ್ಪೇನೇ..ಏನಂತೀರಿ..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...